ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದಲ್ಲಿ ರಸ್ತೆ, ಸೇತುವೆ ಹಾಗೂ ಧಾರ್ಮಿಕ ಮತ್ತು ಸಮುದಾಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದಲ್ಲಿ ರಸ್ತೆ, ಸೇತುವೆ ಹಾಗೂ ಧಾರ್ಮಿಕ ಮತ್ತು ಸಮುದಾಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.ಗ್ರಾಮದಲ್ಲಿ ಮಂಗಳವಾರ ಸುಮಾರು ₹ 3 ಕೋಟಿ ವೆಚ್ಚದ ಹಳ್ಳದ ಸೇತುವೆ, ₹ 25 ಲಕ್ಷ ವೆಚ್ಚದ ಸಿ.ಸಿ ರಸ್ತೆ, ಮಲ್ಲಿಕಾರ್ಜುನ ದೇವಸ್ಥಾನದ ಸಮುದಾಯ ಭವನಕ್ಕೆ ₹ 10 ಲಕ್ಷ ಹಾಗೂ ಅಮಿನ್ ಸಾಬ್ ದರ್ಗಾ ಹತ್ತಿರ ಸಮುದಾಯ ಭವನಕ್ಕೆ ₹ 5 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮದ ಜನರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸುವುದು, ಸಂಚಾರ ವ್ಯವಸ್ಥೆಯನ್ನು ಸುಧಾರಿಸುವುದು ಹಾಗೂ ಸಾರ್ವಜನಿಕರ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಸ್ಪಂದಿಸಿದ್ದೇನೆ. ಗ್ರಾಮದ ಜನರು ನನ್ನನ್ನು ಪ್ರೀತಿಸುತ್ತಾ ಬಂದಿದ್ದಾರೆ. ಅವರ ಋಣ ತೀರಿಸಲು ಡೋಣಿ ನದಿಗೆ ಸೇತುವೆ ನಿರ್ಮಾಣ ಮಾಡುವ ಕನಸಿದೆ. ಬೀರಪ್ಪ ದೇವರ ಸಮುದಾಯ ಭವನ ಜೊತೆ ಮಹಿಳೆಯರಿಗಾಗಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಸಹಕಾರವಿರಲಿ ಎಂದು ತಿಳಸಿದರು.ಪಿಡಬ್ಲ್ಯೂಡಿ ಎಇಇ ಎಸ್.ಜಿ.ದೊಡಮನಿ ಮಾತನಾಡಿ, ನಿಗದಿತ ಅವಧಿಯೊಳಗೆ ಕೆಲಸ ಮಾಡಲು ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಸಾರ್ವಜನಿಕರ ಸಹಕಾರ ಅಗತ್ಯ ಎಂದರು.ಗ್ರಾಮಸ್ಥರ ಪರವಾಗಿ ನಿವೃತ್ತ ಶಿಕ್ಷಕ ಬಸಪ್ಪ ಗೋನಾಳ, ಇಸ್ಮಾಯಿಲ್ ನಾಯ್ಕೋಡಿ ಸೇರಿದಂತೆ ಹಲವಾರು ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಶಾಸಕರು ಸಾಕಷ್ಟು ಅನುದಾನ ನೀಡಿ ಮಾದರಿ ಗ್ರಾಮ ಮಾಡಲು ಪಣ ತೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಶಾಸಕರಿಗೆ ಸಹಕಾರ ನೀಡೋಣ. ಭಾವೈಕ್ಯತೆಯಿಂದ ಕಾರ್ಯಕ್ರಮ ನಡೆಸಿರುವುದು ಸಂತೋಷ ತಂದಿದೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಮಡಿವಾಳಯ್ಯ ವಂದಾಲಮಠ, ಮಡುಸಾಹುಕಾರ ಬಿರಾದಾರ, ಮಾಂತಗೌಡ ಪಾಟೀಲ, ಡಾ.ವಿನಯ ಅಳ್ಳಗಿ, ಬಾಪುಗೌಡ ಪಾಟೀಲ, ಶ್ರೀಶೈಲ ರೂಗಿ, ನಜೀರಸಾಬ ನಾಯ್ಕೋಡಿ, ಮೈಬೂಬಸಾಬ ಬೀಳಗಿ, ರಮೇಶ ಮಾವಿನಗಿಡದ, ಸುರೇಶ ತಡಲಗಿ, ಜಗದೀಶ ತಡಕಲ್, ಬಂಗಿಸಾಬ್ ಮುಜಾವರ, ಸಿದ್ದಯ್ಯ ಹಿರೇಮಠ, ಶರಣಪ್ಪ ಹಳ್ಳಿ, ಶ್ರೀಶೈಲ ಸಜ್ಜನ, ಶಿವಾನಂದ ಮಾವಿನಗಿಡದ, ಸುಭಾಷ ಮಾವಿನಗಿಡದ, ಮಹೇಶ ಗೊಳಸಾರ, ಶರಣಗೌಡ ಪಾಟೀಲ, ಪಿಡಬ್ಲ್ಯೂಡಿ ಎಇ ಡಿ.ಬಿ.ಕಲಬುರ್ಗಿ, ಗುತ್ತಿಗೆದಾರ ಉಮೇಶ ಕೌಲಗಿ, ಪಿಡಿಒ ಮಹೇಶ ಬಗಲಿ, ಕಾರ್ಯದರ್ಶಿ ಭೀಮನಗೌಡ ಬಿರಾದಾರ ಸೇರಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಸಂಗಪ್ಪ ರೂಗಿ ನಿರೂಪಿಸಿ, ವಂದಿಸಿದರು.