ಯುವ ನಿರುದ್ಯೋಗಿಗಳ ಕೌಶಲ್ಯಾಭಿವೃದ್ಧಿಗೆ ಆಧ್ಯತೆ: ಡಾ. ಧನಂಜಯ ಸರ್ಜಿ

| Published : Jun 08 2024, 12:33 AM IST

ಯುವ ನಿರುದ್ಯೋಗಿಗಳ ಕೌಶಲ್ಯಾಭಿವೃದ್ಧಿಗೆ ಆಧ್ಯತೆ: ಡಾ. ಧನಂಜಯ ಸರ್ಜಿ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ವಿದ್ಯಾವಂತ ಯುವ ನಿರುದ್ಯೋಗಿಗಳಿಗೆ ಕೌಶಲ್ಯಾಭಿವೃದ್ಧಿಗೆ ಆಧ್ಯತೆ ನೀಡಿ ಸಣ್ಣ ಸಣ್ಣ ಉದ್ಯೋಗ ಮಾಡಲು ಪ್ರೇರಣೆ ನೀಡುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನೈರುತ್ಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಆಯ್ಕೆಗೊಂಡಿರುವ ಬಿಜೆಪಿ ಡಾ.ಧನಂಜಯ ಸರ್ಜಿ ಹೇಳಿದರು.

ಕಡೂರು ಬಿಜೆಪಿ ಕಚೇರಿಯಲ್ಲಿ ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಅಭಿನಂದನೆ ಸ್ವೀಕಾರ

ಕನ್ನಡಪ್ರಭ ವಾರ್ತೆ, ಕಡೂರು

ವಿದ್ಯಾವಂತ ಯುವ ನಿರುದ್ಯೋಗಿಗಳಿಗೆ ಕೌಶಲ್ಯಾಭಿವೃದ್ಧಿಗೆ ಆಧ್ಯತೆ ನೀಡಿ ಸಣ್ಣ ಸಣ್ಣ ಉದ್ಯೋಗ ಮಾಡಲು ಪ್ರೇರಣೆ ನೀಡುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನೈರುತ್ಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಆಯ್ಕೆಗೊಂಡಿರುವ ಬಿಜೆಪಿ ಡಾ.ಧನಂಜಯ ಸರ್ಜಿ ಹೇಳಿದರು.

ಶುಕ್ರವಾರ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುವಾಗ ಕಡೂರು ಬಿಜೆಪಿ ಕಚೇರಿಯಲ್ಲಿ ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. 1998ರಿಂದ ನೈರುತ್ಯ ಪದವೀಧರ ಕ್ಷೇತ್ರದಿಂದ ಇದುವರೆಗೂ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಆಯ್ಕೆ ಆಗುತ್ತಿದ್ದು, ಈ ಬಾರಿ ನನ್ನನ್ನು 25 ಸಾವಿರಕ್ಕೂಅಧಿಕ ಮತಗಳಿಂದ 5 ಜಿಲ್ಲೆಯ ಪದವೀಧರರು ದಾಖಲೆಯ ಮತ ನೀಡಿ ಆಯ್ಕೆ ಮಾಡಿದ್ದಾರೆ. ಅವರ ನಂಬಿಕೆಗೆ ನಾನು ಋಣಿಯಾಗಿದ್ದು, ಅವರ ಸೇವೆಗೆ ನನ್ನ ಜೀವನ ಮುಡುಪಾಗಿಡುತ್ತೇನೆ ಎಂದರು.

ಅಧಿಕ ಮತಗಳಿಂದ ತಾವು ಗೆಲುವು ಸಾಧಿಸಲು ಅನೇಕ ಅಂಶಗಳು ಕಾರಣವಾಗಿವೆ. 5 ಜಿಲ್ಲೆಗಳಲ್ಲಿ 20 ಮತದಾರರಿಗೆ ಓರ್ವ ಘಟಕ ನಾಯಕರನ್ನು ನೇಮಿಸಿಕೊಂಡು ಅವರ ಮೂಲಕ ಮನೆ, ಗ್ರಾಮಗಳಿಗೆ ತೆರಳಿ ಬಿಜೆಪಿಯ ಅಭಿವೃದ್ಧಿ ತಿಳಿಸುವ ಮೂಲಕ ಮತ ಕೊಡಿಸಿರುವ ನನ್ನೆಲ್ಲಾ ಬಿಜೆಪಿ ಮತ್ತು ಎಲ್ಲ ಕಾರ್ಯ ಕರ್ತರಿಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದರು. ಈಗ ಐದು ಜಿಲ್ಲೆಗಳಿಗೂ ಆದ್ಯತೆ ನೀಡುವುದು ಮುಖ್ಯವಾಗಿದ್ದು ಕೊಡಗು ಜಿಲ್ಲೆಯಲ್ಲಿ ಅತಿಹೆಚ್ಚು ಸೈನಿಕರಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿ ನ್ಯಾಷನಲ್ ಡಿಫೆನ್ಸ್ ಆಕಾಡೆಮಿ ಕಾಲೇಜು ತೆರೆಯಲು, ಶಿವಮೊಗ್ಗದಲ್ಲಿ ಇಎಸ್ಐ, ಜ್ಯೋತಿ ಸಂಜೀವಿನಿ ಯೋಜನೆಯನ್ನು ಅತಿ ಹೆಚ್ಚು ಬಳಕೆ ಮಾಡಿಕೊಳ್ಳಲು ಅರಿವು ಮೂಡಿಸುವ ಕೆಲಸ, ರಾಜ್ಯದಲ್ಲಿ ಶಿಕ್ಷಕರ ಕೊರತೆ ನಿವಾರಿಸಲು ಶಿಕ್ಷಕರ ನೇಮಕಾತಿ ಮಾಡಿ ಕೊಡುವಂತೆ ಸರ್ಕಾರದ ಮುಂದೆ ಹೋರಾಟ, ಎಸ್.ಸಿ, ಎಸ್ಟಿ ವಿದ್ಯಾರ್ಥಿ ನಿಲಯಗಳ ಸ್ಥಾಪನೆಗೆ ಒತ್ತು ನೀಡುವುದು, ಕೌಶಲ್ಯಾಭಿವೃದ್ಧಿ ಕೆಲಸ ಮಾಡಲು ಆಧ್ಯತೆ ನೀಡಲಾಗುತ್ತದೆ. ಯುವಕರು ಸಣ್ಣ ಸಣ್ಣ ಉದ್ಯೋಗದ ಮೂಲಕ ಅವರೇ ನಿರುದ್ಯೋಗಿಗಳಿಗೆ ಕೆಲಸ ನೀಡುವಂತೆ ಮಾಡಲು ಶ್ರಮಿಸಿ ನಿರುದ್ಯೋಗ ಸಮಸ್ಯೆ ಕಡಿಮೆ ಮಾಡಲು ಪ್ರಯತ್ನಿಸುತ್ತೇನೆ ಎಂದರು. ಉದ್ಯೋಗ ಮೇಳಗಳನ್ನು ನಡೆಸುವುದರಿಂದ ಐಟಿ, ಬಿಟಿಗೆ ಪ್ರೋತ್ಸಾಹಿಸಿ ದಂತಾಗುತ್ತದೆ. ಪದವೀಧರರಿಗೆ ಉದ್ಯೋಗ ಮೇಳಗಳಿಂದ ಪ್ರಯೋಜನ ಅವಕಾಶ ಹೆಚ್ಚುತ್ತವೆ. ಮತನೀಡಿ ಗೆಲ್ಲಿಸಿದ ಎಲ್ಲರಿಗೂ ಧನ್ಯವಾದಗಳು ನಿಮ್ಮ ಸೇವೆಗೆ ಸದಾ ಸಿದ್ದನಿರುತ್ತೇನೆ ಎಂದು ತಿಳಿಸಿದರು.

ಕಡೂರು ಬಿಜೆಪಿ ನೈರುತ್ಯ ಶಿಕ್ಷಕರ, ಪದವೀಧರ ಕ್ಷೇತ್ರದ ತಾಲೂಕು ಸಂಚಾಲಕ ಟಿ.ಆರ್.ಲಕ್ಕಪ್ಪ, ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ಬೀರೂರು ಸುದರ್ಶನ್, ಜಿಗಣೆಹಳ್ಳಿ ನೀಲಕಂಠಪ್ಪ, ಎಚ್.ಎಂ. ರೇವಣ್ಣಯ್ಯ, ಡಾ.ದಿನೇಶ್, ಕೆ.ಎನ್.ಬೊಮ್ಮಣ್ಣ, ಶಾಮಿಯಾನ ಚಂದ್ರು, ಅಡಕೆ ಚಂದ್ರು, ಗೋವಿಂದ ರಾಜು, ಪ್ರಸನ್ನ, ಕಡೂರು ಎ.ಮಣಿ,ರಾಜಾನಾಯ್ಕ,ಜೆಡಿಎಸ್ ಮುಖಂಡ ಗಂಗಾಧರ್ ಮತ್ತಿತರರು ಇದ್ದರು.

7ಕೆಕೆಡಿಯು1

ಕಡೂರು ಪಟ್ಟಣಕ್ಕೆ ಭೇಟಿ ನೀಡಿದ್ದ ವಿಧಾನ ಪರಿಷತ್ ನ ನೈರುತ್ಯ ಪದವೀಧರ ಕ್ಷೇತ್ರದಿಂದ ಆಯ್ಕೆಗೊಂಡ ಡಾ.ಧನಂಜಯ ಸರ್ಜಿ ಅವರನ್ನು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಕಾರ್ಯಕರ್ತರು ಅಭಿನಂದಿಸಿದರು.