ಸಾರಾಂಶ
ಹಾನಗಲ್ಲ: ಇಲ್ಲಿನ ತಾಲೂಕಾಸ್ಪತ್ರೆಯಲ್ಲಿ 15ನೇ ಹಣಕಾಸು ಯೋಜನೆಯಡಿ ₹53 ಲಕ್ಷ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಿದ ಸಾರ್ವಜನಿಕ ಆರೋಗ್ಯ ಘಟಕ ಹಾಗೂ ಪ್ರಯೋಗಾಲಯದ ಕಟ್ಟಡವನ್ನು ಶಾಸಕ ಶ್ರೀನಿವಾಸ ಮಾನೆ ಉದ್ಘಾಟಿಸಿದರು.ತಾಲೂಕಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಗುಣಮಟ್ಟದ ಆರೋಗ್ಯ ಸೇವೆ ದೊರಕಿಸಲು ಕಾಳಜಿ ವಹಿಸಲಾಗಿದೆ. ಸ್ಥಳೀಯವಾಗಿ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಕ್ಷೇಮ ಮತ್ತು ಉಪ ಕೇಂದ್ರಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದೆ. ಶಿರಗೋಡ ಮತ್ತು ಕಲಕೇರಿ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹೊಸ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಅನುದಾನ ಬಿಡುಗಡೆಯಾಗಲಿದೆ ಎಂದು ತಿಳಿಸಿದ ಶಾಸಕ ಮಾನೆ, ತಾಲೂಕಾಸ್ಪತ್ರೆಯಲ್ಲಿ ಸಹ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ ಎಂದರು.
ಆರೋಗ್ಯ ಘಟಕ ಹಾಗೂ ಪ್ರಯೋಗಾಲಯದ ಕಟ್ಟಡದಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಲಭ್ಯ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಸೂಚಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ವೈದ್ಯರು ಹಿಂದೇಟು ಹಾಕುತ್ತಿದ್ದು, ಸಾರ್ವಜನಿಕರೂ ಸಹಕಾರ ನೀಡುವ ಮೂಲಕ ವೈದ್ಯಕೀಯ ಸೇವೆ ಪಡೆದುಕೊಳ್ಳುವಂತೆ ತಿಳಿಸಿದರು.ಆಡಳಿತ ವೈದ್ಯಾಧಿಕಾರಿ ಡಾ. ಬಸವರಾಜ, ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಉಪಾಧ್ಯಕ್ಷೆ ವೀಣಾ ಗುಡಿ, ಮಾಜಿ ಅಧ್ಯಕ್ಷ ಖುರ್ಷಿದ್‌ಅಹ್ಮದ್ ಹುಲ್ಲತ್ತಿ, ಮುಖಂಡರಾದ ಗುರುರಾಜ ನಿಂಗೋಜಿ, ರಾಜೂ ಗುಡಿ, ಡಾ. ಮಾರುತಿ ಚಿಕ್ಕಣ್ಣನವರ, ಮೇಕಾಜಿ ಕಲಾಲ, ಡಾ. ಅಖಿಲೇಷ ಮಾಳೋದೆ, ಬಸವರಾಜ ಡುಮ್ಮನವರ, ಇರ್ಫಾನ್ ಸೌದಾಗರ, ಪ್ರದೀಪ ಹರಿಜನ ಉಪಸ್ಥಿತರಿದ್ದರು.ಬಿಜೆಪಿ ಕಾರ್ಯಕರ್ತರಿಂದ ಪ್ರಾರ್ಥನೆಹಾನಗಲ್ಲ: ಭಾರತೀಯ ಸೈನ್ಯ ಆಪರೇಷನ್ ಸಿಂದೂರ ನಡೆಸಿ ಭಾರತದ ಶಕ್ತಿ ಪ್ರದರ್ಶಿಸಿ, ಪಾಕಿಸ್ತಾನಕ್ಕೆ ಪ್ರತೀಕಾರ ತೋರಿರುವ ಸೈನ್ಯಕ್ಕೆ ಇನ್ನಷ್ಟು ಶಕ್ತಿ ನೀಡಲು, ಸೈನಿಕರನ್ನು ರಕ್ಷಿಸಲು ಪ್ರಾರ್ಥಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇಲ್ಲಿನ ಗ್ರಾಮದೇವಿಗೆ ಪೂಜೆ ಸಲ್ಲಿಸಿದರು.
ಶುಕ್ರವಾರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಕಟ್ಟೆಗೌಡರ, ತಾಲೂಕು ಆದ್ಯಕ್ಷ ಮಹೇಶ ಕಮಡೊಳ್ಳಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಭೋಜರಾಜ ಕರೂದಿ, ಕಲ್ಯಾಣಕುಮಾರ ಶೆಟ್ಟರ, ಅಣ್ಣಪ್ಪ ಚಾಕಾಪುರ, ಚಂದ್ರಪ್ಪ ಹರಿಜನ ಸಚಿನ ರಾಮಣ್ಣನವರ, ರಾಘವೇಂದ್ರ ತಹಶೀಲ್ದಾರ, ಭಾಸ್ಕರ ಹುಲಮನಿ, ರವಿ ಪುರದ, ಸಚಿನ ಸವಣೂರ, ಬಸವರಾಜ ಮಟ್ಟಿಮನಿ, ರವಿ ನಿಂಬಕ್ಕನವರ, ಮಾಲತೇಶ ನಿಸಿಮಣ್ಣನವರ ಮೊದಲಾದವರು ಇದ್ದರು.