ನಾಡಹಬ್ಬ ದಸರಾದಲ್ಲಿ ಕವಿಗೋಷ್ಠಿಯೂ ಪ್ರಮುಖ ಭಾಗ. ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿ ಗುರುತಾಗಿದೆ. 1915ರ ಮೇ 3ರಂದು ಶ್ರೀಮನ್ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಸ್ಥಾಪನೆಗೊಂಡ ಕಸಾಪ ಕನ್ನಡ ನಾಡು, ನುಡಿಯ ಮೇರುತ್ವ ಸಾರಿ ಅಂತರ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ನಮ್ಮ ಶಾಸ್ತ್ರೀಯ ಸ್ಥಾನಮಾನಗಳಿಸಲು ಸಹಕರಿಯಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ರಾಜ ಮಹಾರಾಜರುಗಳೇ ಕವಿಗಳು, ಸಾಹಿತಿಗಳಿಗೆ ತಮ್ಮ ಆಸ್ಥಾನದಲ್ಲಿ ಮಹತ್ತರ ಸ್ಥಾನ ನೀಡಿ ಸಾಹಿತ್ಯ ಮತ್ತು ಕವಿತೆಗಳ ಕೃಷಿಗೆ ಆದ್ಯತೆ ನೀಡಿದ್ದರು ಎಂದು ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ರಮೇಶ್‌ ಬಂಡಿಸಿದ್ದೇಗೌಡ ತಿಳಿಸಿದರು.

ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ಶ್ರೀರಂಗಪಟ್ಟಣ ದಸರಾದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿ ಸಹಯೋಗದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಪ್ರಧಾನ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ನಾಡಹಬ್ಬ ದಸರಾದಲ್ಲಿ ಕವಿಗೋಷ್ಠಿಯೂ ಪ್ರಮುಖ ಭಾಗ. ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿ ಗುರುತಾಗಿದೆ. 1915ರ ಮೇ 3 ರಂದು ಶ್ರೀಮನ್ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಸ್ಥಾಪನೆಗೊಂಡ ಕಸಾಪ ಕನ್ನಡ ನಾಡು, ನುಡಿಯ ಮೇರುತ್ವ ಸಾರಿ ಅಂತರ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ನಮ್ಮ ಶಾಸ್ತ್ರೀಯ ಸ್ಥಾನಮಾನಗಳಿಸಲು ಸಹಕರಿಯಾಗಿದೆ ಎಂದರು.

ಹಿರಿಯ ಸಾಹಿತಿ ಡಾ.ಬೋರೇಗೌಡ ಚಿಕ್ಕಮರಳಿ ಮಾತನಾಡಿ, ಸಾಮಾಜಿಕ ಜಾಲತಾಣ ಹಾಗೂ ಇಂಗ್ಲಿಷ್ ವ್ಯಾಮೋಹಕ್ಕೆ ಸಿಲುಕಿ ಕನ್ನಡಾಕ್ಷರಗಳಿಂದಲೇ ದೂರವಾಗಿ ತಪ್ಪು ತಪ್ಪಾಗಿ ಬರೆವ ಹಾಗೂ ಇಂತಹ ಮಹತ್ವಪೂರ್ಣ ಕಾರ್ಯಕ್ರಮಗಳಿಗೆ ಗೈರಾಗುವ ಪೀಳಿಗೆಯಲ್ಲೂ ಕವಿತೆ ವಾಚನದಂತ ಗೋಷ್ಠಿಗೆ 20ಕ್ಕೂ ಹೆಚ್ಚು ಕವಿಗಳು ಕವಿತೆ ವಾಚಿಸಲು ಹೆಸರು ನೀಡಿರುವುದು ಹಾಗೂ ವಾಚನ ಆಲಿಸಲು ಸಾಹಿತ್ಯಾಸಕ್ತರು ನೆರೆದಿರುವುದು ಬದ್ದತೆ ಮತ್ತು ಪ್ರೀತಿಯನ್ನು ತೋರ್ಪಡಿಸಿದೆ ಎಂದರು.

ಕಸಾಪ ನಿಕಟಪೂರ್ವ ಅಧ್ಯಕ್ಷ ಸಿದ್ದಲಿಂಗು, ಅತಿಥಿಗಳು ಕವಿಗೋಷ್ಠಿಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದರು. ಕವಿಗಳಾದ ಡಾ.ಪದ್ಮ ಶ್ರೀನಿವಾಸ್, ಕಟ್ಟೆ ಕೃಷ್ಣಸ್ವಾಮಿ, ಡಾ.ಹೊಂಬಯ್ಯ, ದೊ.ಚಿ.ಗೌಡ, ಬಿ.ಸಿ.ವಿಜಯ್ ಕುಮಾರ್, ಬಲ್ಲೇನಹಳ್ಳಿ ಮಂಜುನಾತ್, ಎಲ್.ಟಿ.ಪಾರ್ವತಮ್ಮ, ಶಂಕರಾನಂದ, ಸಾ.ವೆ.ರ.ಸ್ವಾಮಿ, ಎ.ಎಚ್.ಚನ್ನೇಗೌಡ, ಬಿ.ಕೆ.ಪ್ರತಿಮಾ, ಡಾ.ನಂದ ಟಿ.ಎಂ. ರಾಜಶೇಖರ್, ಎಚ್.ಎಸ್.ಭರತ್ ಕುಮಾರ್, ಶಿವಕುಮಾರ್, ದೇವಾನಂದ್, ಶಿವರಾಜು, ಪುಟ್ಟಸ್ವಾಮಿ, ಚೌಡಯ್ಯ ತಮ್ಮ ಕವಿತೆಗಳ ವಾಚಿಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚೇತನಾ ಯಾದವ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಜೆ.ಶ್ರೀನಿವಾಸ್, ಕಸಾಪ ಮಾಜಿ ಅಧ್ಯಕ್ಷ ಪಿ.ಡಿ.ತಿಮ್ಮಪ್ಪ, ಕಾಮಧೇನು ಮಹಿಳಾ ಸಂಘದ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ, ದಸಂಸ ಮುಖಂಡ ಗಂಜಾಂ ರವಿಚಂದ್ರ, ಪ್ರೊ.ಇಲ್ಯಾಸ್ ಅಹಮದ್ ಖಾನ್ ಪಾಲಹಳ್ಳಿ, ಪ್ರೌಢಶಾಲ ಶಿಕ್ಷಕರ ಸಂಘದ ಅಧ್ಯಕ್ಷ ಗಾಮನಹಳ್ಳಿ ಮಹದೇವಸ್ವಾಮಿ ಇದ್ದರು.