ತರೀಕೆರೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ನಿರ್ಮಾಣಕ್ಕೆ ಆದ್ಯತೆ ಅಗತ್ಯ

| Published : Mar 01 2025, 01:05 AM IST

ತರೀಕೆರೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ನಿರ್ಮಾಣಕ್ಕೆ ಆದ್ಯತೆ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಜಿಲ್ಲೆಯಲ್ಲೇ ಒಂದು ದೊಡ್ಡ ಕಂದಾಯ ಉಪವಿಭಾಗವಾಗಿರುವ ಅವಿಭಜಿತ ತರೀಕೆರೆ ವ್ಯಾಪಾರ ವಹಿವಾಟು, ಜನ, ವಾಹನ ಸಂಚಾರ, ಸರಕು ಸಾಗಾಣಿಕೆ ಇತ್ಯಾದಿ ಸೇರಿದಂತೆ ಪ್ರಮುಖ ಪ್ರವಾಸಿ ತಾಣವೂ ಆಗಿರುವ ತಾಲೂಕಿನಲ್ಲಿ ಮೂಲಭೂತ ಅವಶ್ಯಕತೆಗಳು ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದ್ದರೂ ಅಗತ್ಯವಿರುವ ಬಸ್ ಸಂಚಾರ ವ್ಯವಸ್ಥೆ ಮಾತ್ರ ಸುಸೂತ್ರವಾಗಿಲ್ಲ. ಈ ನಿಟ್ಟಿನಲ್ಲಿ ತರೀಕೆರೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಡಿಪೋ ಸ್ಥಾಪಿಸುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ ಎಂಬುದು ಜನರ ಆಶಯವಾಗಿದೆ.

ಗ್ರಾಮೀಣ, ಪಟ್ಟಣ ಪ್ರದೇಶಗಳಿಗೆ ಸಾರಿಗೆ ಬಸ್ ಸಂಚಾರಕ್ಕೆ ಅನುಕೂಲ

ಅನಂತ ನಾಡಿಗ್ಕನ್ನಡಪ್ರಭ ವಾರ್ತೆ, ತರೀಕೆರೆ

ಜಿಲ್ಲೆಯಲ್ಲೇ ಒಂದು ದೊಡ್ಡ ಕಂದಾಯ ಉಪವಿಭಾಗವಾಗಿರುವ ಅವಿಭಜಿತ ತರೀಕೆರೆ ವ್ಯಾಪಾರ ವಹಿವಾಟು, ಜನ, ವಾಹನ ಸಂಚಾರ, ಸರಕು ಸಾಗಾಣಿಕೆ ಇತ್ಯಾದಿ ಸೇರಿದಂತೆ ಪ್ರಮುಖ ಪ್ರವಾಸಿ ತಾಣವೂ ಆಗಿರುವ ತಾಲೂಕಿನಲ್ಲಿ ಮೂಲಭೂತ ಅವಶ್ಯಕತೆಗಳು ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದ್ದರೂ ಅಗತ್ಯವಿರುವ ಬಸ್ ಸಂಚಾರ ವ್ಯವಸ್ಥೆ ಮಾತ್ರ ಸುಸೂತ್ರವಾಗಿಲ್ಲ. ಈ ನಿಟ್ಟಿನಲ್ಲಿ ತರೀಕೆರೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಡಿಪೋ ಸ್ಥಾಪಿಸುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ ಎಂಬುದು ಜನರ ಆಶಯವಾಗಿದೆ.

ರಾಷ್ಚ್ರೀಯ ಹೆದ್ದಾರಿ 206ರಲ್ಲಿರುವ ತರೀಕೆರೆ ಪಟ್ಟಣದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ಧಾಣವನ್ನು ಮೇಲ್ದರ್ಜೆಗೇರಿಸುವ ಯೋಜನೆ ಸಿದ್ಧವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇದಕ್ಕೆ ಪೂರಕವಾಗಿ ಇಲ್ಲಿ ಕೆ.ಎಸ್.ಆರ್.ಟಿ.ಸಿ.ಡಿಪೋ ಸ್ಥಾಪನೆ ಮಾಡಿ ತಾಲೂಕು ಕೇಂದ್ರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಂಚರಿಸಲು ಹೆಚ್ಚಿನ ಎಕ್ಸ್ ಪ್ರೆಸ್ ಹಾಗೂ ಲೋಕಲ್ ಬಸ್ಸುಗಳ ಸೌಲಭ್ಯ ಪ್ರಯಾಣಿಕರಿಗೆ ಕಲ್ಪಿಸುವುದು ಉಪಯುಕ್ತ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ತರೀಕೆರೆ ತಾಲೂಕಿನಲ್ಲಿ ಕೆ.ಎಸ್.ಆರ್.ಟಿ.ಸಿ.ಡಿಪೋ ಸ್ಥಾಪಿಸಲು ಶಾಸಕ ಶ್ರೀನಿವಾಸ್ ಅವರು ಜಾಗ ಮಂಜೂರು ಮಾಡಿಸಿ ರುವುದು ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಮೇಲ್ದರ್ಜೆ ಮತ್ತು ಡಿಪೋ ಸ್ಥಾಪಿಸುವ ಕಾರ್ಯಕ್ಕೆ ಭರವಸೆ ಮೂಡಿಸಿದೆ. ಈ ಕಾರ್ಯ ನೆರವೇರಲು ಸಾರ್ವಜನಿಕರ ಆದ್ಯತೆ, ಆಶಯದೊಂದಿಗೆ ಸರ್ಕಾರದ ಇಚ್ಚಾಶಕ್ತಿಯೂ ಮುಖ್ಯ. ಆಗ ಮಾತ್ರ ತರೀಕೆರೆಯಂತಹ ತಾಲೂಕು ಅಭಿವೃದ್ಧಿ ದೃಷ್ಟಿಯಿಂದಲೂ ಗುರುತಿಸಿಕೊಳ್ಳಲು ಸಾಧ್ಯ.

ತರೀಕೆರೆ ತಾಲೂಕು ಹಳ್ಳಿ ಹೋಬಳಿ, ಪಟ್ಟಣ ಮತ್ತು ನಗರ ಪ್ರದೇಶಗಳಿಂದ ಸುತ್ತುವರಿದಿದ್ದು, ಸರ್ಕಾರಿ ಕಚೇರಿ, ಶಾಲಾ ಕಾಲೇಜು, ಕೈಗಾರಿಕಾ ತರಬೇತಿ ಸಂಸ್ಥೆ, ಖಾಸಗಿ, ಸರ್ಕಾರಿ ಉದ್ಯಮಗಳು, ಸಣ್ಣ ಪುಟ್ಟ ಕೈಗಾರಿಕೆಯಂತಹ ದಿನನಿತ್ಯದ ಕಾಯಕಕ್ಕಾಗಿ ಓಡಾಡುವವರು ಮತ್ತು ವಿವಿಧ ಪ್ರವಾಸಿ ಸ್ಥಳಗಳಿಗೆ ಸಾರ್ವಜನಿಕರು ಸಂಚರಿಸಲು ಅವಲಂಬಿಸಿರುವ ಸಂಚಾರ ವ್ಯವಸ್ಥೆ ಆಯಾ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುವುದು ಅಗತ್ಯ ಆದರೆ ಇದಕ್ಕೆ ಅಪವಾದ ಎಂಬಂತೆ ತರೀಕೆರೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮಾತ್ರ ಸಮರ್ಪಕವಾಗಿಲ್ಲ. ಇನ್ನೂ ತಾಲೂಕಿನಲ್ಲಿ ಕೆಮ್ಮಣ್ಣುಗುಂಡಿ-ಕಲ್ಲತ್ತಿಗಿರಿ-ಹೆಬ್ಬೆ ಜಲಪಾತ, ಲಕ್ಕವಳ್ಳಿ, ಭದ್ರಾ ಅಣೆಕಟ್ಟು, ಭದ್ರಾ ಅಭಯಾರಣ್ಯ, ಜಂಗಲ್ ರೆಸಾರ್ಟ್, ಅಮೃತಾಪುರ, ಕುವೆಂಪು ವಿವಿಯ ಶಂಕರಘಟ್ಟ ಇತ್ಯಾದಿ ಹಲವಾರು ಪ್ರವಾಸಿಧಾಮ, ಅಮೃತಾಪುರ, ಸೋಂಪುರ, ಶರಣೆ ಅಕ್ಕನಾಗಮ್ಮ ಗದ್ದುಗೆ, ಕಲ್ಲತ್ತಿಗಿರಿ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನ ಇತ್ಯಾದಿ ಅನೇಕ ಧಾರ್ಮಿಕ ಕ್ಷೇತ್ರಗಳಿದ್ದು ಇದರಲ್ಲಿ ಅನೇಕ ಪ್ರವಾಸಿ ಸ್ಥಳಗಳಿಗೆ ಕೆ.ಎಸ್.ಆರ್.ಟಿ.ಸಿ.ಬಸ್ಸುಗಳ ನೇರ ಸಂಪರ್ಕ ಇಲ್ಲದೆ ಪ್ರಯಾಣಿಕರು ಈ ಸ್ಥಳಗಳಿಗೆ ಹೋಗಿ ಬರಲು ತುಂಬಾ ತೊಂದರೆಯಾಗಿದೆ. ಅನೇಕ ಪ್ರವಾಸಿ ಸ್ಥಳಗಳಿಗೆ ಹೊಗಲು ಬೇರೆ ಬೇರೆ ಸಂಪರ್ಕ ಊರುಗಳಿಗೆ ತೆರಳಿ ಅಲ್ಲಿನ ಬಸ್ ನಿಂದ ಪ್ರವಾಸಿ ಅಥವಾ ಧಾರ್ಮಿಕ ಸ್ಥಳಗಳಿಗೆ ಹೋಗಬೇಕಾಗಿದೆ. ತಾಲೂಕು ಕೇಂದ್ರ ವಾದರೂ ಗ್ರಾಮೀಣ ಪ್ರದೇಶಗಳಿಗೂ ನೇರ ಕೆ.ಎಸ್.ಅರ್.ಟಿ.ಸಿ.ಬಸ್ ಸಂರ್ಪರ್ಕವೇ ಇಲ್ಲ ಎಂಬುದು ವಿಪರ್ಯಾಸವಾದರೂ ಸತ್ಯ. ಅಲ್ಲದೆ ತಾಲೂಕಿನಾದ್ಯಂತ ಬೇರೆ ಬೇರೆ ಗ್ರಾಮೀಣ ಪ್ರದೇಶಗಳಿಂದ ವಿದ್ಯಾರ್ಥಿಗಳು ತಾಲೂಕು ಕೇಂದ್ರಗಳಲ್ಲಿರುವ ವಿವಿಧ ಶಾಲೆ ಕಾಲೇಜು, ಕೈಗಾರಿಕಾ ತರಬೇತಿ ಸಂಸ್ಥೆಗೆ ತೆರಳಲು ಪ್ರತಿನಿತ್ಯ ಬಸ್ ಸೌಲಭ್ಯವಿಲ್ಲದೆ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಹಾಗೇಯೆ ಗ್ರಾಮೀಣ ಪ್ರದೇಶಗಳು, ಪ್ರವಾಸಿ ಮತ್ತು ಧಾರ್ಮಿಕ ಸ್ಥಳಗಳಿಗೆ ಕೆ.ಎಸ್.ಆರ್.ಟಿ.ಸಿ, ಲೋಕಲ್ ಬಸ್ಸುಗಳ ಸಂಚಾರ ದಿಂದ ಸರ್ಕಾರ ಮಹಿಳೆಯರಿಗೆ ಜಾರಿಗೆ ತಂದಿರುವ ಸ್ತ್ರೀಶಕ್ತಿ ಯೋಜನೆ ಹೆಚ್ಚು ಉಪಯೋಗಕ್ಕೆ ಬರಲಿದೆ ಈ ಎಲ್ಲಾ ವಿಚಾರ, ವಿಶೇಷತೆಗಳಿಂದ ತರೀಕೆರೆಯಲ್ಲಿ ಡಿಪೋ ಆರಂಭಿಸುವುದು ಅಗತ್ಯವಾಗಿದೆ.-- ಬಾಕ್ಸ್‌--

ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸಂಪರ್ಕ: ಶಾಸಕ ಜಿ.ಎಚ್.ಶ್ರೀನಿವಾಸ್

ತರೀಕೆರೆ ತಾಲೂಕಿನಲ್ಲಿ ಕೆ.ಎಸ್.ಆರ್.ಟಿ.ಸಿ.ಡಿಪೋ ಸ್ಥಾಪಿಸಲು ನಾನು ಈ ಹಿಂದೆ ಶಾಸಕನಾಗಿದ್ದಾಗ ಸಮೀಪದ ಹೊಸೂರು ಬಳಿ 4 ಎಕರೆ ಜಾಗವನ್ನು ಸರ್ಕಾರದಿಂದ ಮಂಜೂರು ಮಾಡಿಸಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪಟ್ಟಣದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಮೇಲ್ದರ್ಜೇಗೇರಿಸುವ ಜೊತೆಗೆ ಡಿಪೋ ಸ್ಥಾಪಿಸಿ ತರೀಕೆರೆ ವಿಧಾನ ಸಭಾ ಕ್ಷೇತ್ರದ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸಂಪರ್ಕ ಹೆಚ್ಚಿಸುವುದಾಗಿ ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದ್ದಾರೆ.

---- ಕೋಟ್--

ತರೀಕೆರೆ ವಿಧಾನಸಭಾ ಕ್ಷೇತ್ರ ಅನೇಕ ಪ್ರವಾಸಿ ತಾಣ, ಪ್ರಮುಖ ವಿದ್ಯಾ ಕೇಂದ್ರ, ಧಾರ್ಮಿಕ ಕ್ಷೇತ್ರ ಹಾಗೂ ಬೃಹತ್ ಕೃಷಿ ಉತ್ಪನ್ನ ಮಾರುಕಟ್ಟೆ-ಉಪ ಮಾರುಕಟ್ಟೆಗಳನ್ನು ಹೊಂದಿದೆ. ಈ ಎಲ್ಲ ಪ್ರದೇಶಗಳಿಗೆ ಹೆಚ್ಚಿನ ಸಾರಿಗೆ ಸಂಪರ್ಕ ಅತ್ಯಗತ್ಯ ವಾಗಿದೆ. ಆದುದರಿಂದ ಕೆ.ಎಸ್.ಆರ್.ಟಿ.ಸಿ.ಡಿಪೋ ಸ್ಥಾಪಿಸಿ ಲೋಕಸ್ ಬಸ್ಸು, ಎಕ್ಸ್.ಪ್ರೆಸ್. ಬಸ್ಸುಗಳ ವ್ಯವಸ್ಥೆ ಮಾಡಿದರೆ ತರೀಕೆರೆ ಮತ್ತು ಗ್ರಾಮೀಣ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ. ತರೀಕೆರೆ ಅಭಿವೃದ್ಧಿಗು ಕಾರಣವಾಗಲಿದೆ.

- ಟಿ.ಆರ್.ಶ್ರೀಧರ್‌, ಮಾಜಿ ನಿರ್ದೇಶಕ, ತರೀಕೆರೆ ಕೃ.ಉ.ಮಾ.ಸಮಿತಿ 28ಕೆಟಿಆರ್.ಕೆ.1ಃ)

ತರೀಕೆರೆ ಸಮೀಪದ ಹೊಸೂರು ಗ್ಲಾಮದ ಬಳಿ ಕೆ.ಎಸ್.ಆರ್.ಟಿ.ಸಿ. ನಿಗಮ ಸ್ಥಳ28ಕಟಿಆರ್.ಕೆ.2ಃ ಶಾಸಕ ಜಿ.ಎಚ್.ಶ್ರೀನಿವಾಸ್28ಕೆಟಿಆರ್.ಕೆ.3ಃ ಟಿ.ಆರ್.ಶ್ರೀಧರ್ ಕೃ.ಉ.ಮಾ.ಸಮಿತಿ ಮಾಜಿ ನಿರ್ದೇಶಕ ತರೀಕೆರೆ