ಸಾರಾಂಶ
ಬ್ರಹ್ಮಪುರದ ಬಳಿ ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸಿದ ಆರೋಪದ ಮೇಲೆ ವಿಆರ್‌ಎಲ್ ಸಂಸ್ಥೆ ಐಷಾರಾಮಿ ಬಸ್ಸನ್ನು ಪಟ್ಟಣದ ಗ್ರಾಮಾಂತರ ಪೊಲೀಸರು ಜಪ್ತಿ ಮಾಡಿ, ಬಸ್ ಚಾಲಕ ಮತ್ತು ಸಹಚಾಲಕನನ್ನು ಸಹ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಬ್ರಹ್ಮಪುರದ ಬಳಿ ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸಿದ ಆರೋಪದ ಮೇಲೆ ವಿಆರ್‌ಎಲ್ ಸಂಸ್ಥೆ ಐಷಾರಾಮಿ ಬಸ್ಸನ್ನು ಪಟ್ಟಣದ ಗ್ರಾಮಾಂತರ ಪೊಲೀಸರು ಜಪ್ತಿ ಮಾಡಿ, ಬಸ್ ಚಾಲಕ ಮತ್ತು ಸಹಚಾಲಕನನ್ನು ಸಹ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ವಿಆರ್‌ಎಲ್ ಸಂಸ್ಥೆ ಬಸ್ ರಸ್ತೆ ಸಂಚಾರ ನಿಯಮ ಉಲ್ಲಂಘನೆ ಮಾಡಿ ಚಲಿಸುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ಕ್ರಮ ಕೈಗೊಂಡು ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಬಿ.ಜಿ ಕುಮಾರ್ ನೇತೃತ್ವದಲ್ಲಿ ಬಸ್‌ನ್ನು ವಶಕ್ಕೆ ಪಡೆದು, ಬಸ್ ಚಾಲಕ ಪ್ರಶಾಂತ ಹಾಗೂ ಸಹಚಾಲಕ ನೀಲಪ್ಪರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.ರೈಲಿಗೆ ಸಿಲುಕಿ ವ್ಯಕ್ತಿ ಸಾವು
ಮಂಡ್ಯ: ಮಂಡ್ಯ- ಹನಕೆರೆ ರೈಲು ನಿಲ್ದಾಣಗಳ ಮಧ್ಯೆ ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿ ಯಾವುದೋ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯ ವಾರಸುದಾರರು ಪತ್ತೆಯಾಗಿಲ್ಲ. ಮೃತನ ಬಳಿ ದೊರೆತ ಆಸ್ಪತ್ರೆಯ ಚೀಟಿಯಲ್ಲಿ ಚಂದ್ರಶೇಖರ್ ಬೆಳಗುಂಬ ತುಮಕೂರು ಜಿಲ್ಲೆ ಎಂದು ಬರೆದಿದೆ. 50 ವರ್ಷದ ವ್ಯಕ್ತಿ ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ದುಂಡನೆಯ ಮುಖ, ಚಪ್ಪಟೆ ಮೂಗು, ತಲೆಯಲ್ಲಿ ಒಂದು ಇಂಚು ಕಪ್ಪು ಕೂದಲು, ಬಿಳಿ ಬಣ್ಣದ ಮೀಸೆ ಮೃತನ ಬಲಗೈಯಲ್ಲಿ ಎಸ್ ಎಲ್ ವಿ ಎಂಬ ಹಸಿರು ಅಚ್ಚೆ ಹಾಕಲಾಗಿದೆ.ಚಂದ್ರಶೇಖರ್ ನೇಮಕಮಂಡ್ಯ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಪ್ರಾಧಿಕಾರದ ಸದಸ್ಯರನ್ನಾಗಿ ಗೊರವಾಲೆ ಚಂದ್ರಶೇಖರ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮಂಡ್ಯದ ಸ್ವರ್ಣಸಂದ್ರ ನಿವಾಸಿ ಗೊರವಾಲೆ ಚಂದ್ರಶೇಖರ್ ಅವರು ಜಾನಪದ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿರುವುದನ್ನು ಮನಗಂಡು ಜಾನಪದ ವಿವಿ ಸಿಂಡಿಕೇಟ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಸರ್ಕಾರದ ಅಧೀನ ಕಾರ್‍ಯದರ್ಶಿ ಶಶಿಕಲಾ ಸಿ. ಆದೇಶ ಹೊರಡಿಸಿದ್ದಾರೆ.ಚಿಟ್ಟಿಬಾಬು ನಾಮನಿರ್ದೇಶನ
ಪಾಂಡವಪುರ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ ಆಡಳಿತ ಮಂಡಳಿಗೆ ತಾಲೂಕಿನ ಹರಳಹಳ್ಳಿ ಎಚ್.ಎನ್.ಚಿಟ್ಟಿಬಾಬು ಅವರನ್ನು ಅಧಿಕಾರತೇರ ಸದಸ್ಯರಾಗಿ ನಾಮ ನಿರ್ದೇಶನ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))