ಕನ್ನಡಪ್ರಭ ವಾರ್ತೆ ಬೆಳಗಾವಿ ಅತ್ತ ರಾಜ್ಯಧಾನಿ ಬೆಂಗಳೂರಿನಲ್ಲಿ ಪಾರ್ಕಿಂಗ್ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿ, ಮನೆಯ ಮುಂದೆ ವಾಹನ ನಿಲ್ಲಿಸಿದರೂ ಶುಲ್ಕ ವಿಧಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದ್ದರೆ ಇತ್ತ ಬೆಳಗಾವಿಯಲ್ಲಿ ಖಾಸಗಿ ಟ್ರಾವೆಲ್ಸ್‌ನವರು ಪಾಲಿಕೆಯ ರಸ್ತೆಯನ್ನೇ ಅತಿಕ್ರಮಣ ಮಾಡಿಕೊಂಡು ಬಸ್‌ಗಳ ತಂಗುದಾಣವಾಗಿ ಮಾಡಿಕೊಂಡರೂ ಯಾರೂ ಕಣ್ಣೆತ್ತಿ ನೋಡುತ್ತಿಲ್ಲ.
ಪ್ರಮೋದ ಗಡಕರ
ಕನ್ನಡಪ್ರಭ ವಾರ್ತೆ ಬೆಳಗಾವಿಅತ್ತ ರಾಜ್ಯಧಾನಿ ಬೆಂಗಳೂರಿನಲ್ಲಿ ಪಾರ್ಕಿಂಗ್ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿ, ಮನೆಯ ಮುಂದೆ ವಾಹನ ನಿಲ್ಲಿಸಿದರೂ ಶುಲ್ಕ ವಿಧಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದ್ದರೆ ಇತ್ತ ಬೆಳಗಾವಿಯಲ್ಲಿ ಖಾಸಗಿ ಟ್ರಾವೆಲ್ಸ್‌ನವರು ಪಾಲಿಕೆಯ ರಸ್ತೆಯನ್ನೇ ಅತಿಕ್ರಮಣ ಮಾಡಿಕೊಂಡು ಬಸ್‌ಗಳ ತಂಗುದಾಣವಾಗಿ ಮಾಡಿಕೊಂಡರೂ ಯಾರೂ ಕಣ್ಣೆತ್ತಿ ನೋಡುತ್ತಿಲ್ಲ.
ಹೌದು, ಇದು ವಿಚಿತ್ರವಾದರೂ ಸತ್ಯ. ಬೆಳಗಾವಿ ಉತ್ತರ ಮತಕ್ಷೇತ್ರ ವ್ಯಾಪ್ತಿಯ ಧರ್ಮನಾಥ್ ಸರ್ಕಲ್‌ಗೆ ಬಂದರೆ ನಾಲ್ಕೂ ದಿಕ್ಕುಗಳಲ್ಲಿ ರಸ್ತೆ ಪಕ್ಕ ಹಾಗೂ ಪಾರ್ಕಿಂಗ್ ತುಂಬೆಲ್ಲ ವಾಹನಗಳು ನಿಲುಗಡೆ ಮಾಡಿರುವುದು ಕಾಣಿಸುತ್ತದೆ. ಧರ್ಮನಾಥ್ ಸರ್ಕಲ್‌ದಿಂದ ಬೆಳಗಾವಿ ಒನ್ ಕೇಂದ್ರದವರೆಗೆ ದ್ವಿಪಥ ರಸ್ತೆಯ ಒಂದು ಭಾಗವನ್ನು ಖಾಸಗಿ ಟ್ರಾವೆಲ್ಸ್‌ಗಳು ಕಾಯಂ ತಂಗುದಾಣ ಮಾಡಿಕೊಂಡಿವೆ.ಸಂಚಾರಿ ಪೊಲೀಸರು ಪಾಲಿಕೆ ಅಧಿಕಾರಿಗಳು ಮೌನವೇಕೆ?:
ಏನೂ ಅರಿಯದೇ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸುವ ಬಡಪಾಯಿ ದ್ವಿಚಕ್ರವಾಹನ ಸವಾರರಿಗೆ ಸಾವಿರಾರು ರೂಪಾಯಿ ದಂಡ ಹಾಕುವ ನಮ್ಮ ಸಂಚಾರಿ ಪೊಲೀಸರು ದಿನಕ್ಕೆ ಲಕ್ಷಾಂತರ ವ್ಯವಹಾರ ನಡೆಸುವ ಖಾಸಗಿ ಟ್ರಾವೆಲ್ಸ್‌ನವರು ಪ್ರಮುಖ ರಸ್ತೆಯನ್ನೇ ಅತಿಕ್ರಮಿಸಿಕೊಂಡು ನಿಲ್ದಾಣ ಮಾಡಿಕೊಂಡಿದ್ದರೂ ಕಂಡೂ ಕಾಣದಂತೆ ಮೌನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಇತ್ತೀಚೆಗೆ ನಾಲ್ಕೈದು ಖಾಸಗಿ ಟ್ರಾವೆಲ್ಸ್‌ನವರು ರಾಮದೇವ್ ಬದಲಾಗಿ ಧರ್ಮನಾಥ್ ಸರ್ಕಲ್ ಅನ್ನು ಪಿಕ್‌ಅಪ್ ಪಾಯಿಂಟ್ ಮಾಡಿಕೊಂಡು ಇಲ್ಲಿಂದಲೇ ಬೆಂಗಳೂರಿಗೆ ಬಸ್ ಓಡಿಸುತ್ತಾರೆ. ಬಸ್ ಹೊರಡುವ ಟೈಂಗೆ ಬಂದು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋದರೆ ಪರವಾಗಿಲ್ಲ. ಆದರೆ, ಒಂದೆರಡು ಖಾಸಗಿ ಟ್ರಾವೆಲ್ಸ್ ಏಜೆನ್ಸಿಯವರು ಪಾಲಿಕೆಯ ಪ್ರಮುಖ ರಸ್ತೆಯನ್ನೇ ವಾಹನ ನಿಲುಗಡೆ ತಾಣವಾಗಿ ಮಾಡಿಕೊಂಡಿವೆ. ಹೊಸದಾಗಿ ಈ ಮಾರ್ಗದಲ್ಲಿ ಬಂದವರಿಗೆ ಇದು ರಸ್ತೆಯೋ ಪಾರ್ಕಿಂಗ್ ಸ್ಥಳವೋ ಎಂಬ ಕನ್ಪ್ಯೂಸ್ ಆಗುವುದತೂ ಕನ್ಫರ್ಮ್.
ದುರಸ್ತಿ, ತೊಳೆಯುವುದು ರಸ್ತೆಯಲ್ಲೇ:ಇಡೀ ದಿನ ಈ ರಸ್ತಯಲ್ಲೇ ವಿಶ್ರಾಂತಿ ಪಡೆಯುವ ಈ ಬಸ್‌ಗಳು ಸಂಜೆಯಾಗುತ್ತಿದ್ದಂತೆ ಪ್ರಯಾಣಿಕರನ್ನು ಹತ್ತಿಸಿಕೊಂಡು ಬೆಂಗಳೂರಿಗೆ ಪ್ರಯಾಣಿಸುತ್ತವೆ. ಬೆಂಗಳೂರು ಕಡೆಯಿಂದ ಬರುವ ಎರಡು ಟ್ರಾವೆಲ್ಸ್ ನ ಸುಮಾರು 8ಕ್ಕೂ ಅಧಿಕ ಬಸ್‌ಗಳು ಬೆಳಗ್ಗೆಯಿಂದ ಸಂಜೆಯವರೆಗೆ ಈ ರಸ್ತೆಯಲ್ಲೇ ಪಾರ್ಕಿಂಗ್ ಮಾಡುತ್ತಿವೆ. ಬಸ್ ಸ್ವಚ್ಛಗೊಳಿಸುವುದು, ತೊಳೆಯುವುದು, ಚಿಕ್ಕಪುಟ್ಟ ದುರಸ್ತಿ ಕೆಲಸಗಳನ್ನು ಇಲ್ಲಿಯೇ ಮಾಡಲಾಗುತ್ತದೆ.
ಈ ರಸ್ತೆಯಲ್ಲೇ ಖಾಸಗಿ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ರಸ್ತೆ ಬದಿಯಲ್ಲಿ ಬಸ್ ನಿಲುಗಡೆಯಿಂದ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಮನೆ ಮಾಡಿದೆ. ಕಾರ್ನರ್ ಸ್ಥಳದಲ್ಲಿ ಪ್ರಯಾಣಿಕರ ಪಿಕ್‌ಅಪ್‌ಗೆ ಬಸ್ ನಿಲ್ಲಿಸುವುದರಿಂದ ಅಶೋಕನಗರ ನಿವಾಸಿಗಳಿಗೆ ಕಿರಿಕಿರಿಯಾಗುತ್ತಿದೆ. ಅಶೋಕನಗರ ಒಳಗಡೆಯಿಂದ ನಗರಕ್ಕೆ ಬರುವಾಗ ಬಸ್‌ಗಳು ಕಾರ್ನರ್ ಪ್ರದೇಶದಲ್ಲಿ ನಿಲ್ಲಿಸುವುದರಿಂದ ಆ ಕಡೆಯಿಂದ ವೇಗವಾಗಿ ಬರುವ ವಾಹನಗಳು ಕಾಣುವುದೇ ಇಲ್ಲ. ರಸ್ತೆ ಕ್ರಾಸ್ ಮಾಡುವಾಗ ಸ್ವಲ್ಪ ಯಾಮಾರಿದರೂ ಅಪಘಾತ ಉಂಟಾಗುವ ಭಯ ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ.--------ಕೋಟ್.....
ರಸ್ತೆಯಲ್ಲೇ ಬಸ್‌ಗಳನ್ನು ನಿಲ್ಲಿಸುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಅದರಲ್ಲೂ ಶಾಲೆ ಇರುವುದರಿಂದ ಮಕ್ಕಳ ಸುರಕ್ಷತೆ ಬಗ್ಗೆ ಆತಂಕವಿದೆ. ಖಾಸಗಿ ಟ್ರಾವೆಲ್ಸ್‌ಗಳಿಗೆ ಪ್ರತ್ಯೇಕ ನಿಲುಗಡೆ ಸ್ಥಳ ಕಲ್ಪಿಸಿ, ರಸ್ತೆಯಲ್ಲಿ ಬಸ್ ನಿಲ್ಲಿಸುವುದನ್ನು ತಡೆಯಬೇಕು.- ಗಣೇಶ ಪಾಟೀಲ, ನಿವಾಸಿ