ದೇಶಕ್ಕೆ ಸ್ವಾತಂತ್ರ್ಯ ಬಂದ ದಿನದಿಂದಲೂ ದಲಿತರು ತಮ್ಮ ಸವಲತ್ತುಗಳಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ.
ಕನ್ನಡಪ್ರಭ ವಾರ್ತೆ ಹೊಸಕೋಟೆ
ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಮೈಲಾಪುರ ಗ್ರಾಮದಲ್ಲಿರುವ ದಲಿತ ಸಮುದಾಯಕ್ಕೆ ಹಲವಾರು ದಶಕಗಳಿಂದ ಸಿಗಬೇಕಾದ ಸವಲತ್ತುಗಳು ದಕ್ಕುತ್ತಿಲ್ಲ. ಇದರಿಂದ ದಲಿತರು ಪರಿತಪಿಸುವಂತಾಗಿದೆ ಎಂದು ಜಾಂಭವ ಯುವ ಸೇನಾ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ.ರಮೇಶ್ ಚಕ್ರವರ್ತಿ ತಿಳಿಸಿದರು.ನಗರದ ತಾಲೂಕು ಕಚೇರಿ ಆವರಣದಲ್ಲಿ ಮೈಲಾಪುರ ಗ್ರಾಮದ ದಲಿತರ ಸಮಸ್ಯೆಗಳ ಪರಿಹಾರಕ್ಕಾಗಿ ಹಮ್ಮಿಕೊಂಡಿದ್ದ ತಮಟೆ ಚಳುವಳಿ ವೇಳೆ ಮಾತನಾಡಿದರು.ದೇಶಕ್ಕೆ ಸ್ವಾತಂತ್ರ್ಯ ಬಂದ ದಿನದಿಂದಲೂ ದಲಿತರು ತಮ್ಮ ಸವಲತ್ತುಗಳಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಪ್ರಮುಖವಾಗಿ ರಾಜಕೀಯ ಮಾಡುವ ರಾಜಕಾರಣಿಗಳು ಸಹ ದಲಿತರ ಅಭಿವೃದ್ಧಿಗೆ ಮುಂದಾಗಿಲ್ಲ. ನಮ್ಮಿಂದ ಮತ ಪಡೆದು ಗೆದ್ದು ಅಧಿಕಾರ ಮಾಡುವ ಶಾಸಕರು, ಸಚಿವರಲ್ಲಿ ನಾವು ಯಾವುದೇ ರೀತಿಯ ರಾಜಕೀಯ ಸ್ಥಾನಮಾನ ಕೇಳಲ್ಲ. ಆದರೆ ಕೇಳುವ ಮೂಲಭೂತ ಸೌಕರ್ಯಗಳನ್ನು ಸಹ ಕಲ್ಪಿಸುವ ಗೋಜಿಗೆ ಹೋಗಲ್ಲ.
ಮೈಲಾಪುರ ಗ್ರಾಮದಲ್ಲಿ ದಲಿತರಿಗೆ ವಸತಿ ಯೋಜನೆ ಹಕ್ಕುಪತ್ರ ಕೊಟ್ಟಿಲ್ಲ. ಸಮುದಾಯಕ್ಕೆ ರುದ್ರಭೂಮಿ ಇಲ್ಲ, ಅಂಬೇಡ್ಕರ್ ಭವನ ಇಲ್ಲ. ಮುಖ್ಯವಾಗಿ ಸರ್ವೆ ನಂಬರ್ 5/1ರಲ್ಲಿ ಏಳು ಗುಂಟೆ ಗೋಮಾಳ ಜಮೀನಿದ್ದು ಇದರ ಜೊತೆಗೆ 1 ಎಕರೆ ಪ್ರದೇಶವನ್ನು ಸೇರಿಸಿ ಸಮುದಾಯ ಭವನ, ರುದ್ರಭೂಮಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದರು.ಒಂದು ವೇಳೆ 15 ದಿನದಲ್ಲಿ ನಮ್ಮ ಮನವಿಗೆ ಅಧಿಕಾರಿಗಳು ಸ್ಪಂದಿಸದಿದ್ದರೆ ತಾಲೂಕು ಕಚೇರಿ ಎದುರು ಉಪವಾ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದರು.ಮಹದೇವಪುರ ಕ್ಷೇತ್ರದ ತಾಲೂಕು ಅಧ್ಯಕ್ಷ ಕುಮಾರ್, ಹೊಸಕೋಟೆ ತಾಲೂಕು ಕಾರ್ಯದರ್ಶಿ ಸಂತೋಷ್, ಪದಧಿಕಾರಿಗಳಾದ ವಿಜಯ್, ವೇಮಗಲ್ ಗುರು, ವೇಮಗಲ್ ನರಸಿಂಹಮೂರ್ತಿ, ಮುನಿಯಪ್ಪ, ವಿಜಯಪುರ ಶಿವಪ್ಪ, ನೆಲಮಂಗಲ ಪಧಾದಿಕಾರಿಗಳು ಹಾಜರಿದ್ದರು.
ಫೋಟೋ: 12 ಹೆಚ್‌ಎಸ್‌ಕೆ 1ಹೊಸಕೋಟೆ ತಾಲೂಕಿನ ಮೈಲಾಪುರ ಗ್ರಾಮದ ದಲಿತರಿಗೆ ವಸತಿ ಹಕ್ಕುಪತ್ರ ಹಾಗೂ ರುದ್ರಭೂಮಿಗೆ ಜಮೀನು ಮಂಜೂರಾತಿಗೆ ಆಗ್ರಹಿಸಿ ಜಾಂಭವ ಯುವ ಸೇನೆ ರಾಜ್ಯಾಧ್ಯಕ್ಷ ಡಾ.ರಮೇಶ್ ಚಕ್ರವರ್ತಿ ತಮಟೆ ಚಳುವಳಿ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.