ಸಾರಾಂಶ
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 2023-24ರ ಸಾಲಿನ ವಿಶಿಷ್ಟ ಸಾಧನಾ ಪ್ರಶಸ್ತಿ ಪಡೆದಿರುವ ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಸಭಾಭವನದಲ್ಲಿ ಸಂಸ್ಥೆಯ ಸ್ಥಾಪನಾ ದಿನಾಚರಣೆ ನೆರವೇರಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಮಹಿಳೆಯರು ಸಮಾಜದ ಶಕ್ತಿಯಾಗಿದ್ದು ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ ಹಳೆಯಂಗಡಿಯ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಉತ್ತಮ ಸಾಧನೆ ದಾರಿಯಲ್ಲಿ ಮುನ್ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮೂಲ್ಕಿ ತಾಲೂಕು ಶಾಖೆಯ ಅಧ್ಯಕ್ಷೆ ಶರ್ಲಿ ಸುಮಾಲಿನಿ ಹೇಳಿದ್ದಾರೆ.ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 2023-24ರ ಸಾಲಿನ ವಿಶಿಷ್ಟ ಸಾಧನಾ ಪ್ರಶಸ್ತಿ ಪಡೆದಿರುವ ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಸಭಾಭವನದಲ್ಲಿ ನಡೆದ ಸಂಸ್ಥೆಯ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಎಚ್ ವಸಂತ್ ಬರ್ನಾಡ್ ಮಾತನಾಡಿ, ಸೊಸೈಟಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಸೇರಿದಂತೆ ಸ್ವಾವಲಂಬನೆಗೆ ಹೆಚ್ಚಿನ ಹೊತ್ತು ನೀಡುತ್ತಿದ್ದು ಗ್ರಾಹಕರ ಸಹಕಾರದಿಂದ ಕಳೆದ ವರ್ಷದಲ್ಲಿ 42 ಲಕ್ಷ ರು. ಲಾಭ ಪಡೆದಿದೆ. ಮೂಡುಬಿದಿರೆಯಲ್ಲಿ ಮುಂದಿನ ದಿನಗಳಲ್ಲಿ ನೂತನ ಶಾಖೆ ಆರಂಭಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ನಿರ್ದೇಶಕರ ಮತ್ತು ಗ್ರಾಹಕರ ಸಹಕಾರದಿಂದ ಅಭಿವೃದ್ದಿ ಸಾಧ್ಯವೆಂದು ಹೇಳಿದರು.ಕೆಮ್ರಾಲ್ ಮಹಿಳಾ ವಿವಿದ್ದೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹಿನಿ ಬಿ ರಾವ್ ಶುಭ ಕೋರಿದರು. ಸೊಸೈಟಿಯ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ನಿರ್ದೇಶಕರಾದ ಡಾ. ಗಣೇಶ್ ಅಮೀನ್ ಸಂಕಮಾರ್, ಉಮಾನಾಥ ಜೆ ಶೆಟ್ಟಿಗಾರ್, ಗಣೇಶ್ ಪ್ರಸಾದ್ ದೇವಾಡಿಗ, ಮಿರ್ಜಾ ಅಹ್ಮದ್, ಹರೀಶ್ ಪುತ್ರನ್, ವಿಜಯ ಕುಮಾರ್ ಸನಿಲ್, ಜಯಕೃಷ್ಣ ಕೋಟ್ಯಾನ್, ತನುಜಾ ಶೆಟ್ಟಿ, ನವೀನ್ ಸಾಲ್ಯಾನ್ ಪಂಜ, ಸಂದೀಪ್ ಕುಮಾರ್, ಗೌತಮ್ ಜೈನ್ ಇದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸ್ವಾಗತಿಸಿದರು, ಶಾಖಾ ಪ್ರಬಂಧಕಿ ಅಕ್ಷತಾ ಶೆಟ್ಟಿ ನಿರೂಪಿಸಿದರು .ಸಿಬ್ಬಂದಿ ನಿರಂಜಲ ನೀತು ಪ್ರಾರ್ಥಿಸಿದರು. ಲಾವಣ್ಯ ವಂದಿಸಿದರು.