ನೂತನ ಬಸ್ ಘಟಕ ಪರಿಶೀಲಿಸಿದ ಪ್ರೀಯಾಂಗಾ

| Published : Jun 28 2024, 12:49 AM IST

ಸಾರಾಂಶ

ಬಾಗಲಕೋಟೆ ನವನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬಸ್ ಘಟಕಕ್ಕೆ ಹುಬ್ಬಳ್ಳಿ ವಾ.ಕ.ರ.ಸಾ ಸಂಸ್ಥೆಯ ಕೇಂದ್ರ ಕಚೇರಿಯ ವ್ಯವಸ್ಥಾಪಕ ನಿರ್ದೇಶಕಿ ಪ್ರೀಯಾಂಗಾ ಎಂ. ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನವನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬಸ್ ಘಟಕಕ್ಕೆ ಹುಬ್ಬಳ್ಳಿ ವಾ.ಕ.ರ.ಸಾ ಸಂಸ್ಥೆಯ ಕೇಂದ್ರ ಕಚೇರಿಯ ವ್ಯವಸ್ಥಾಪಕ ನಿರ್ದೇಶಕಿ ಪ್ರೀಯಾಂಗಾ ಎಂ. ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬುಧವಾರ ಜಿಲ್ಲೆಗೆ ಭೇಟಿ ನೀಡಿದ ಅವರು ನವನಗರದಲ್ಲಿರುವ ವಿಭಾಗೀಯ ಕಾರ್ಯಾಗಾರ, ಟೈರ್ ಸಂಸ್ಕರಣೆ ಘಟಕಗಳಿಗೆ ಭೇಟಿ ನೀಡಿ ವಾಹನಗಳ ದುರಸ್ತಿ ಸೇರಿ ಹಲವು ಕೆಲಸಗಳ ಬಗ್ಗೆ ಬಗ್ಗೆ ಪರಿಶೀಲನೆ ನಡೆಸಿದರು. ನಂತರ ವಿಭಾಗೀಯ ಉಗ್ರಾಣ ಶಾಖೆಗೆ ಭೇಟಿ ನೀಡಿ, ಉಗ್ರಾಣ ದಾಸ್ತಾನುಗಳ ನಿರ್ವಹಣೆ ವ್ಯವಸ್ಥೆ, ತಂತ್ರಾಂಶ ಅನುಷ್ಠಾನ ಕುರಿತಂತೆ ಮಾಹಿತಿ ಪಡೆದುಕೊಂಡರು. .

ನವನಗರದಲ್ಲಿ ಅಪೂರ್ಣವಾಗಿ ನಿರ್ಮಾಣಗೊಂಡ ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ನಂತರ ಬಾಗಲಕೋಟೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ವಾಣಿಜ್ಯ ಮಳಿಗೆ, ನಮ್ಮ ಕಾರ್ಗೋ ಪಾರ್ಸಲ್ ಕೌಂಟರ್, ಸಾರಿಗೆ ನಿಯಂತ್ರಕರ ಬಿಂದುಗಳ ಕಾರ್ಯನಿರ್ವಹಣೆ ಕುರಿತು ಪರಿಶೀಲಿಸಿದರು. ಚಾಲಕ ಮತ್ತು ನಿರ್ವಾಹಕ ಹಾಗೂ ತಾಂತ್ರಿಕ ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿದರು. ವಿಭಾಗೀಯ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿಭಾಗದ ಸರ್ವತೋಮುಖ ಬೆಳೆವಣಿಗೆಗೆ ಬಗ್ಗೆ ಸೂಕ್ತ ಸಲಹೆ ಸೂಚನೆ ನೀಡಿದರು.

ಭೇಟಿ ಸಮಯದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ನಿತೀನ ಹೆಗಡೆ, ಡಿಟಿಒ ಪಡಿಯಪ್ಪ ಮೈತ್ರಿ, ಡಿಎಂಇ ಸಲೀಮ್‌, ಘಟಕ ವ್ಯವಸ್ಥಾಪಕ ಎ.ಎ. ಕೋರಿ ಸೇರಿದಂತೆ ಇತರರು ಇದ್ದರು.