ಸಾರಾಂಶ
-ಹುಚ್ಚಾಸ್ಪತ್ರೆಯಲ್ಲಿರೋರನ್ನ ಮೇಲ್ಮನೆಯಲ್ಲಿ ಕೂಡಿಸಿದ ಬಿಜೆಪಿ । ಕೇಂದ್ರದಲ್ಲಿ ನಾವು 3 ಅಂಕಿ ದಾಟಿದ್ರೆ ಆರ್‌ಸ್ಸೆಸ್ ಬ್ಯಾನ್ ಮಾಡ್ತೇವೆ: ಪ್ರಿಯಾಂಕ
----ಕನ್ನಡಪ್ರಭ ವಾರ್ತೆ ಕಲಬುರಗಿ
ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿರುದ್ಧ ಎಮ್.ಎಲ್.ಸಿ ರವಿಕುಮಾರ್ ಅಸಭ್ಯ ಹೇಳಿಕೆಗೆ ಕಿಡಿ ಕಾರಿದ ಸಚಿವ ಖರ್ಗೆ, ಅಸಭ್ಯ, ಅಶ್ಲೀಲವಾಗಿ ಮಾತನಾಡುವವರು ಹುಚ್ಚಾಸ್ಪತ್ರೆಯಲ್ಲಿರಬೇಕು ಅಂತವರನ್ನು ಬಿಜೆಪಿ ಮೇಲ್ಮನೆಯಲ್ಲಿ ಕೂಡಿಸಿದೆ ಎಂದು ಪ್ರಿಯಾಂಕ ಖರ್ಗೆ ಲೇವಡಿ ಮಾಡಿದರು.ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇಲ್ಮನೆಯಲ್ಲಿ ಯಾರಿದ್ದಾರೆ ನೀವೇ ನೋಡಿ ಸ್ವಾಮಿ, ಎಂಎಲ್‌ಸಿ ರವಿಕುಮಾರ್ ಮೂಲತಃ ಬಿಜೆಪಿಯವರಲ್ಲ ಆರ್‌ಸ್ಸೆಸ್ ಶಾಖೆಯಿಂದ ಬಂದವರು, ಅವರು ಮನುಸ್ಮೃತಿ ಹಿನ್ನಲೆಯಿಂದ ಬಂದವರು. ಮನುಸ್ಮೃತಿಯಲ್ಲಿ ಮಹಿಳೆಯರ ಬಗ್ಗೆ ಎನು ಗೌರವ ಇದೆ ಅಂತ ಎಲ್ಲರಿಗೂ ಗೊತ್ತು. ಕೊಳಕು ಬುದ್ಧಿ ರವಿಕುಮಾರ್‌ನಲ್ಲಿದೆ, ರವಿಕುಮಾರ್ ನಿಮ್ಹಾನ್ಸ್ ನಲ್ಲಿರಬೇಕು ಎಂದರು.ತಾವು ಹಾಗೇ ಮಾತೇ ಆಡಿಲ್ಲ, ಅಶ್ಲೀಲ ಮತನಾಡಿದ್ರೆ ನೇಣು ಹಾಕಿಕೊಳ್ತೇನೆಂಬ ರವಿಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಹಾಗಿದ್ರೆ ನೇಣು ಹಗ್ಗ ಕೊಡಿ ಅವರಿಗೆ, ಇವರಿಗೆ ಇದಕ್ಕಿಂದ ಸಾಕ್ಷಿ ಬೇಕಾ ವಿಡಿಯೋದಲ್ಲೆ ಎಲ್ಲಾ ಇದೆ, ರವಿಕುಮಾರ್‌ಗೆ ನಾಚಿಕೆಯಾಗಬೇಕು. ತಮ್ಮ ಹೇಳಿಕೆ ಬಗ್ಗೆ ಸಮರ್ಥನೆ ಬೇರೆ ಮಾಡ್ಕೋತಾರೆ ಎಂದು ಕುಟುಕಿದರು.ಎಂಎಲ್‌ಸಿ ರವಿಕುಮಾರ್ ಗೆ ಮಾನಸಿಕ ಚಿಕಿತ್ಸೆ ಅಗತ್ಯವಿದೆ, ಬಿಪಿಯವರು ಕೇಳುವ ಕ್ಷಮೆಯು ಪಶ್ಚಾತಾಪದ ಕ್ಷಮೆಯಲ್ಲ, ಪಲಾಯನವಾದದ ಕ್ಷಮೆ, ಮಹಿಳಾ ಅಧಿಕಾರಿಗಳನ್ನು ನಿಂದಿಸುವುದು ರವಿಕುಮಾರ್ ಗೆ ಚಟವಾದ ಹಿನ್ನೆಲೆ ಅವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎಂದರು.ಮಾಡಿದ ತಪ್ಪನ್ನೇ ಪದೇ ಪದೇ ಮಾಡುವುದು, ಮತ್ತೆ ಮತ್ತೆ ಕ್ಷಮೆ ಕೇಳುವುದು ಬಿಜೆಪಿಯವರಿಗೆ ಸಾವರ್ಕರ್ ರಿಂದ ಬಂದ ರಕ್ತಗತ ಗುಣ ಇರಬಹುದು, ಮಹಿಳಾ ಅಧಿಕಾರಿಗಳನ್ನೇ ಈ ಪರಿ ನಿಂದಿಸುವ ಬಿಜೆಪಿಯವರು ಸಾಮಾನ್ಯ ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಬಹುದು? ಎಂಬುದನ್ನು ಜನರೇ ತೀರ್ಮಾನಿಸಬೇಕು ಎಂದು ಖರ್ಗೆ ಹೇಳಿದರು.
.......ಬಾಕ್ಸ್....ಆರ್‌ಸ್ಸೆಸ್ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
ಆರ್‌ಎಸ್ಸೆಸ್ ಸಂಘಟನೆ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ಕಿಡಿ ಕಾರಿದ್ದಾರೆ.ಯಾವ ಸಂಘಟನೆ ಜಾತಿ, ಕೋಮು ಭಾವನೆ ಪ್ರಚೋದಿಸುವುದೋ ಅದು ದೇಶದ್ರೋಹಿ ಸಂಘಟನೆ ಅಂತ ಅಂಬೇಡ್ಕರ್ ಹೇಳಿದ್ದಾರೆ. ಆರ್‌ಸ್ಸೆಸ್ ಕಳೆದ 100 ವರ್ಷದಿಂದ ಏನ್ ಮಾಡ್ತಾ ಹೊರಟಿದೆ? ಕೋಮು ಭಾವನೆ ಕೇರಳಿಸೋದು ತಾನೆ? ಹೀಗಾಗಿ ಈಗಾಗಲೇ ಮೂರು ಬಾರಿ ನಿಷೇಧ ಹೇರಲ್ಪಟ್ಟಿರೋ ಸಂಘಟನೆಯನ್ನ ಮತ್ತೆ ನಿಷೇಧಿಸಬೇಕು ಎಂದು ವಾಗ್ದಾಳಿ ನಡೆಸಿದರು.
ಆರ್‌ಸ್ಸೆಸ್ ಸಂಘಟನೆ ಮೂರು ಬಾರಿ ಬ್ಯಾನ್ ಆದ ಸಂಘಟನೆ, ಬ್ಯಾನ್ ತೆಗೆದಿದ್ದೇ ದೊಡ್ಡ ತಪ್ಪಾಗಿದೆ ಎಂದರು.ಇನ್ನು ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ. ಆರ್‌ಸ್ಸೆಸ್ಸ್ ಬ್ಯಾನ್ ಹೇಗೆ ಮಾಡ್ತಿರಿ ಎನ್ನುವ ಬಿಜೆಪಿ ಹೇಳಿಕೆಗೆ ಆಕ್ರೋಶ ಹೊರಹಾಕಿದ ಖರ್ಗೆ, ಅವರಿಗೆ ಜೈಲಿಗೆ ಹೋಗಲು ಅಷ್ಟೊಂದು ಅವಸರ? ನಾವು ಅಧಿಕಾರ ಬಂದಾಗ ಖಂಡಿತ ಆರ್‌ಸ್ಸೆಸ್ ಬ್ಯಾನ್ ಮಾಡುವೆವು ಎಂದರು.
ಆರ್‌ಎಸ್ಸೆಸ್ ದೇಶ ಪ್ರೇಮಿ ಸಂಘಟನೆ ಆಗಿದ್ದರೆ, ರಾಷ್ಟ್ರಧ್ವಜ ಹಾರಿಸಲು 50ವರ್ಷ ಏಕೆ ತೆಗೆದುಕೊಳ್ಳುತ್ತಿದ್ದರು? ದೇಶದ ಐಕ್ಯತೆ, ಸಾಮರಸ್ಯ ಕಾಪಾಡಲು ಈ ಸಂಘಟನೆ ಇದುವರೆಗೂ ಮಾಡಿರುವ 10 ಕೆಲಸಗಳನ್ನು ಪಟ್ಟಿ ಮಾಡಿ ಹೇಳಲಿ ಎಂದು ಸವಾಲು ಹಾಕಿದರು.....ಬಾಕ್ಸ್........
ಅವ್ರು ಮೊದ್ಲು ತಮ್ಮ ಮನೆಗಳಲ್ಲಿ ಮನುಸ್ಮೃತಿ ಜಾರಿಗೆ ತರ್ಲಿಮನುಸ್ಮೃತಿಯಲ್ಲಿ ಮಹಿಳೆಯರಿಗೆ ಏನೆಲ್ಲಾ ಸ್ಥಾನಮಾನವಿದೆ ಗೊತ್ತಾ? ಮೊದ್ಲು ಬಿಜೆಪಿ, ಸಂಘ ಪರಿವಾರದವರು ಅದನ್ನ ಚೆನ್ನಾಗ ಓದಿಕೊಳ್ಳಲಿ, ತಮ್ಮ ಮನೆಗಳಲ್ಲಿ ಮನುಸ್ಮೃತಿ ಜಾರಿಗೆ ತರಲಿ, ಮೊದಲು ಬಿಜೆಪಿಯವರು ತಮ್ಮ ಹೆಂಡತಿ ಮಕ್ಕಳ ಮೇಲೆ ಮನುಸ್ಮೃತಿ ಜಾರಿಗೊಳಿಸಲಿ ಎಂದು ಬಿಜೆಪಿಯವರಿಗೆ ಸಚಿವ ಪ್ರೀಯಾಂಕ್ ಖರ್ಗೆ ಸವಾಲು ಹಾಕಿದರು. ಆರ್‌ಸ್ಸೆಸ್ ದೇಶದ್ರೋಹಿ ಸಂಘಟನೆ ಎಂದು ಅಂಬೇಡ್ಕರ್ ಅವರೇ ಹೇಳಿದ್ದಾರೆ, ಪ್ರಸ್ತುತ ವಿಷಯದಲ್ಲಿ ಯಾರು ಕೋಮು ಬೀಜ ಬಿತ್ತುತ್ತಿದ್ದಾರೆ ? ಯಾರು ಒನ್ ರಿಲಿಜನ್ ಒನ್ ನೇಷನ್ ಎನ್ನುತ್ತಿದ್ದಾರೆ? ಇಂತವರನ್ನೇ ಅಂಬೇಡ್ಕರ್, ದೇಶದ್ರೋಹಿಗಳು ಎಂದಿದ್ದು, ಬಿಜೆಪಿಯವರು ಆರ್‌ಸ್ಸೆಸ್ ನ ಚೇಲಾಗಳು ಎಂದು ತಿವಿದರು.
-----ಫೋಟೋ- ಪಿಕೆ 1
ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ. ಶಾಸಕರಾದ ಅಲ್ಲಂಪ್ರಭು ಪಟೀಲ್, ಎಂಎಲ್‌ಸಿ ಜಗದೇವ ಗುತ್ತೇದಾರ್, ತಿಪ್ಪಣ್ಣ ಕಮಕನೂರ್, ಕುಡಾ ಅದ್ಯಕ್ಷ ಮಜರ್ ಅಲಂ ಖಾನ್ ಇದ್ದರು.----