ಚಿಕ್ಕೋಡಿಯಿಂದ ಪುತ್ರಿ ಪ್ರಿಯಾಂಕಾಗೆ ಟಿಕೆಟ್‌ ಬಗ್ಗೆ ಚರ್ಚೆ: ಜಾರಕಿಹೊಳಿ

| Published : Mar 11 2024, 01:17 AM IST

ಚಿಕ್ಕೋಡಿಯಿಂದ ಪುತ್ರಿ ಪ್ರಿಯಾಂಕಾಗೆ ಟಿಕೆಟ್‌ ಬಗ್ಗೆ ಚರ್ಚೆ: ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧೆ ಕುರಿತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಬೆಳಗಾವಿಗೆ ಬಂದ ಸಮಯದಲ್ಲಿ ಚರ್ಚೆ ನಡೆಸಿದ್ದು ನಿಜ. ಆದರೆ, ಈ ಸಂಬಂಧ ಪ್ರಿಯಾಂಕಾ ಅವರ ಅಭಿಪ್ರಾಯ ಪಡೆಯುವುದಾಗಿ ನಾಯಕರಿಗೆ ತಿಳಿಸಿದ್ದೇನೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು.

- ಸಿದ್ದು, ಡಿಕೆಶಿ ಬೆಳಗಾವಿಗೆ ಬಂದಾಗ ಚರ್ಚೆ ಆಗಿತ್ತುಕನ್ನಡಪ್ರಭ ವಾರ್ತೆ ಬೆಳಗಾವಿ

ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧೆ ಕುರಿತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಬೆಳಗಾವಿಗೆ ಬಂದ ಸಮಯದಲ್ಲಿ ಚರ್ಚೆ ನಡೆಸಿದ್ದು ನಿಜ. ಆದರೆ, ಈ ಸಂಬಂಧ ಪ್ರಿಯಾಂಕಾ ಅವರ ಅಭಿಪ್ರಾಯ ಪಡೆಯುವುದಾಗಿ ನಾಯಕರಿಗೆ ತಿಳಿಸಿದ್ದೇನೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು.

ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಜಿಲ್ಲೆ ನಾಯಕರ ಜತೆ ಇನ್ನೊಂದು ಬಾರಿ ಚರ್ಚಿಸಿ ಹೇಳುತ್ತೇನೆಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ತಿಳಿಸಿದ್ದೇನೆ. ಈ ಬಗ್ಗೆ ಅಭ್ಯರ್ಥಿ ಆಗುವವರ ಅಭಿಪ್ರಾಯ ಕೇಳಬೇಕು. ಅವರೇನಾದರೂ ತಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದರೆ ಕಷ್ಟ ಎಂದರು.

ಬೆಳಗಾವಿ, ಚಿಕ್ಕೋಡಿ ಕ್ಷೇತ್ರಗಳ ಆಯ್ಕೆಗಾಗಿ ಒಂದು ಸುತ್ತಿನ ಚರ್ಚೆ ನಡೆದಿದೆ. ಅಭ್ಯರ್ಥಿಗಳ ಆಯ್ಕೆಗಾಗಿ ಇನ್ನೂ ಸಮಯ ಇದೆ. ಇನ್ನೊಂದು ಸುತ್ತಿನ ಚರ್ಚೆ ಮಾಡುತ್ತೇವೆ. ಎಲ್ಲವನ್ನೂ ಅಳೆದು, ತೂಗಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಚುನಾವಣೆ ಘೋಷಣೆ ನಂತರ 15 ದಿನ ಸಮಯ ಇದ್ದು, ಬೆಳಗಾವಿ, ಚಿಕ್ಕೋಡಿ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ 2ನೇ, 3ನೇ ಅಥವಾ ಕೊನೇ ಹಂತದವರೆಗೆ ಹೋಗುತ್ತದೆ ಎಂದರು.