ಹುಬ್ಬಳ್ಳಿಯ ಪ್ರಿಯಾಂಕಾ ಕ್ವೀನ್‌ ಆಫ್‌ ಯುನಿವರ್ಸ್‌ 2024

| Published : Aug 29 2024, 12:51 AM IST

ಸಾರಾಂಶ

ಜಾಗತಿಕ ಮಟ್ಟದ ಈ ಸೌಂದರ್ಯ ಸ್ಪರ್ಧೆಯನ್ನು ಮಿ. ಯುನಿವರ್ಸ್‌ ಆ್ಯಂಡ್‌ ಟ್ರಾನ್ಸ್‌ಫಾರ್ಮೆಶನ್‌ ನೈಟ್ಸ್‌ ಎಂಬ ಸಂಸ್ಥೆಯೂ ಆಯೋಜಿಸಿತ್ತು. ವಿವಿಧ 40 ದೇಶಗಳ ಸ್ಪರ್ಧಾಳು ಭಾಗವಹಿಸಿದ್ದರು. ಅದರಲ್ಲಿ ಹುಬ್ಬಳ್ಳಿಯ ಪ್ರಿಯಾಂಕಾ ಕೂಡ ಒಬ್ಬರು. ಆ. 23ರಿಂದ 25ರ ವರೆಗೆ ನಡೆದ ಈ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಹುಬ್ಬಳ್ಳಿ:

ಲಖ್ನೋದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಪ್ರಿಯಾಂಕಾ ಕೋಲ್ವೇಕರ್‌ "ಕ್ವೀನ್‌ ಆಫ್‌ ಯೂನಿವರ್ಸ್‌ 2024 " ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಪ್ರಶಸ್ತಿಗೆ ಭಾಜನರಾಗಿರುವ ಮೊದಲ ಹುಬ್ಬಳ್ಳಿಗರೆನಿಸಿದ್ದಾರೆ.

ಜಾಗತಿಕ ಮಟ್ಟದ ಈ ಸೌಂದರ್ಯ ಸ್ಪರ್ಧೆಯನ್ನು ಮಿ. ಯುನಿವರ್ಸ್‌ ಆ್ಯಂಡ್‌ ಟ್ರಾನ್ಸ್‌ಫಾರ್ಮೆಶನ್‌ ನೈಟ್ಸ್‌ ಎಂಬ ಸಂಸ್ಥೆಯೂ ಆಯೋಜಿಸಿತ್ತು. ವಿವಿಧ 40 ದೇಶಗಳ ಸ್ಪರ್ಧಾಳು ಭಾಗವಹಿಸಿದ್ದರು. ಅದರಲ್ಲಿ ಹುಬ್ಬಳ್ಳಿಯ ಪ್ರಿಯಾಂಕಾ ಕೂಡ ಒಬ್ಬರು. ಆ. 23ರಿಂದ 25ರ ವರೆಗೆ ನಡೆದ ಈ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಪ್ರಿಯಾಂಕಾ ಹುಬ್ಬಳ್ಳಿ ಮೂಲದವರು. ಇವರ ತಾಯಿ ನಿವೃತ್ತಿ ಶಿಕ್ಷಕಿಯಾದರೆ, ತಂದೆ ಬ್ಯುಜಿನೆಸ್‌ ಮೆನ್‌. ಬಿಇ ಮೆಕಾನಿಕಲ್‌, ಎಂಬಿಎ ಮುಗಿಸಿದ್ದಾರೆ. ಪ್ರಾಣಿಗಳ ಬಗ್ಗೆ ಹೆಚ್ಚಿನ ಆಸಕ್ತಿ, ಕಾಳಜಿ ಹೊಂದಿರುವ ಇವರು, ಎನಿಮಲ್‌ ವೆಲ್‌ಫೇರ್‌ನಲ್ಲಿ ಪಿಜಿ ಡಿಪ್ಲೊಮಾ ಮಾಡಿದ್ದಾರೆ. ಇದೀಗ ಎನಿಮಲ್‌ ವೆಲ್‌ಫೇರ್‌ ಬೋರ್ಡ್‌ ಆಫ್‌ ಇಂಡಿಯಾದಲ್ಲಿ ಎನಿಮಲ್‌ ವೆಲ್‌ಫೇರ್‌ ಆಫೀಸರ್‌ ಆಗಿ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಇವೆಂಟ್‌ ಮ್ಯಾನೇಜ್‌ಮೆಂಟ್‌ ಸೇರಿದಂತೆ ವಿವಿಧ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.