ಸಾರಾಂಶ
ನ್ಯಾಮತಿ: ಪಟ್ಟಣದ ಆಜಾದ್ ರಸ್ತೆಯಲ್ಲಿ ವಾಸವಾಗಿರುವ ಕಂಚುಗಾರನಹಳ್ಳಿ ಗುರುಶಾಂತಪ್ಪನವರು ಹೈದಾರಬಾದ್‌ನಲ್ಲಿ ನಡೆದ ಪಾನ್ ಇಂಡಿಯಾ ಮಾಸ್ಟರ್ ಗೇಮ್ಸ್‌ನಲ್ಲಿ ಎರಡನೇ ಸ್ಥಾನ ಲಭಿಸಿ, ಬಹುಮಾನ ಪಡೆದಿದ್ದಾರೆ.
ನ್ಯಾಮತಿ: ಪಟ್ಟಣದ ಆಜಾದ್ ರಸ್ತೆಯಲ್ಲಿ ವಾಸವಾಗಿರುವ ಕಂಚುಗಾರನಹಳ್ಳಿ ಗುರುಶಾಂತಪ್ಪನವರು ಹೈದಾರಬಾದ್‌ನಲ್ಲಿ ನಡೆದ ಪಾನ್ ಇಂಡಿಯಾ ಮಾಸ್ಟರ್ ಗೇಮ್ಸ್‌ನಲ್ಲಿ ಎರಡನೇ ಸ್ಥಾನ ಲಭಿಸಿ, ಬಹುಮಾನ ಪಡೆದಿದ್ದಾರೆ.
ಗುರುಶಾಂತಪ್ಪನವರು ಥಾಯಲೆಂಡ್‌ನ ಮಾಸ್ಟರ್ ಗೇಮ್ಸ್‌ನಲ್ಲಿ ಭಾಗವಹಿಸಿ ಹ್ಯಾಮರ್ ಥ್ರೋಬಾಲ್ ನಲ್ಲಿ ಮೂರನೇ ಸ್ಥಾನ ಪಡೆದಿದ್ದು, ಹೈದರಬಾದ್‌ನಲ್ಲಿ ನಡೆದ ಪಾನ್ ಇಂಡಿಯಾ ಮಾಸ್ಟರ್ ಗೇಮ್ಸ್‌ನಲ್ಲಿ ಲಾಂಗ್ ಜಂಪ್ ಮತ್ತು ಟ್ರಿಪಲ್ ಜಂಪ್‌ನ ಕ್ರೀಡಾಕೂಟದಲ್ಲಿ ಭಾಗವಹಿಸಿ ಎರಡನೇ ಸ್ಥಾನ ಪಡೆದು ಬಹುಮಾನ ಪಡೆದಿದ್ದಾರೆ.ಮುಂದಿನ ದಿನಗಳಲ್ಲಿ ಜಪಾನ್‌ನಲ್ಲಿ ನಡೆಯುವ ಮಾಸ್ಟರ್ ಅಥ್ಲಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸ ಲಿದ್ದಾರೆ.