ರಾಯಲ್ ಚಾಲೆಂಜರ್ಸ್ ಮೈಸೂರು ತಂಡಕ್ಕೆ ಬಹುಮಾನ

| Published : Jan 13 2024, 01:31 AM IST

ಸಾರಾಂಶ

ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ಸ್ ಅಂಡ್ ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ 23ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಛಾಯಾ ವೃತ್ತಿ ಪರ ಸಂಘದ ಸದಸ್ಯರ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಮೈಸೂರು ತಂಡವು ಪ್ರಥಮ ಸ್ಥಾನ ಪಡೆಯುವ ಮೂಲಕ ಟ್ರೋಫಿ ಹಾಗೂ 60 ಸಾವಿರ ರೂ. ಬಹುಮಾನ ಪಡೆದಿದೆ. ಹೊಳಲ್ಕೆರೆ ತಂಡವು ದ್ವಿತೀಯ, ಅರಕಲಗೂಡು ತಂಡವು 3ನೇ ಸ್ಥಾನ ಪಡೆಯಿತು. ವಿಜೇತ ತಂಡಕ್ಕೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಬಹುಮಾನ ವಿತರಿಸಿದರು. ಸಂಘದ ಅಧ್ಯಕ್ಷ ದಡದಳ್ಳಿ ಮಹೇಶ್, ಉಪಾಧ್ಯಕ್ಷ ಮಂಜುನಾಥ್, ಫೋಟೋಗ್ರಾಫರ್ಸ್ ಸಂಘದ ರಾಜ್ಯಾಧ್ಯಕ್ಷ ನಾಗೇಶ್, ಕಾರ್ಯದರ್ಶಿ ಜಿ.ಎಂ. ಸುದರ್ಶನ್, ಸಹ ಕಾರ್ಯದರ್ಶಿ ಆರ್. ಪ್ರಮೋದ್, ಖಜಾಂಚಿ ಬಿ. ಮಾದೇಶ, ಪದಾಧಿಕಾರಿಗಳಾದ ಶಿವಕುಮಾರ್, ಚೈತನ್ಯ ರಾವ್, ನಿರ್ದೇಶಕರಾದ ಎಂ. ಲೋಕೇಶ್, ಎ. ಮೋಹನ್, ಜೆ. ರವಿಚಂದ್ರ, ಬಿ. ಮಂಜುನಾಥ, ಕೆ. ಉಮೇಶ, ಎಂ.ಎಸ್. ಕಾಂತರಾಜ್, ಕುಮಾರ್, ಧನಂಜಯ ಮೊದಲಾದವರು ಇದ್ದರು.