ರಾಸುಗಳ ಸ್ಪರ್ಧೆಯಲ್ಲಿ ಆಯ್ಕೆಯಾದ ಎತ್ತುಗಳಿಗೆ ಬಹುಮಾನ

| Published : Jan 21 2025, 12:34 AM IST

ರಾಸುಗಳ ಸ್ಪರ್ಧೆಯಲ್ಲಿ ಆಯ್ಕೆಯಾದ ಎತ್ತುಗಳಿಗೆ ಬಹುಮಾನ
Share this Article
  • FB
  • TW
  • Linkdin
  • Email

ಸಾರಾಂಶ

ತಂತ್ರಜ್ಙಾನ ಬೆಳೆದಂತೆಲ್ಲಾ ಕೃಷಿಯಲ್ಲೂ ಅಧುನಿಕತೆ ಅಳವಡಿಕೆಯಾಗುತ್ತಿದ್ದು, ಇತ್ತಿಚ್ಚಿನ ದಿನಗಳಲ್ಲಿ ಎತ್ತುಗಳನ್ನು, ದನ ಕರುಗಳನ್ನು ಸಾಕುವವರ ಸಂಖ್ಯೆ ತೀರಾ ಕಡಿಮೆಯಾಗುತ್ತಿರುವ ನಡುವೆಯೇ ನಾಟಿ ದನಗಳ ಉಳಿಯುವಿಕೆಗೆ ಈ ರೀತಿ ಪ್ರೋತ್ಸಾಹ ನೀಡುತ್ತಿರುವ ಇಂತಹ ಕಾರ್ಯಕ್ರಮಗಳು ಪ್ರಶಂಸನೀಯ.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಇತಿಹಾಸ ಪ್ರಸಿದ್ಧ ಕೆಂಗಲ್ ದನಗಳ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ರಾಸುಗಳು ಸ್ಪರ್ಧೆ ಕಾರ್ಯಕ್ರಮದಲ್ಲಿ ಆಯ್ಕೆಯಾದ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಯಿತು.ಕೆಂಗಲ್ ಅಯ್ಯನಗುಡಿ ದನಗಳ ಜಾತ್ರಾ ಸೇವಾ ಟ್ರಸ್ ವತಿಯಿಂದ ಆಯೋಜಿಸಿದ್ದ ಸ್ಪರ್ಧಾ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಂಡಿದ್ದ ರಾಸುಗಳ ಪೈಕಿ ವಿವಿಧ 15 ವಿಭಾಗಗಳಲ್ಲಿ ಉತ್ತಮ ರಾಸುಗಳನ್ನು ತೀರ್ಪುಗಾರರು ಆಯ್ಕೆ ಮಾಡಿ ಚಿನ್ನದ ಪದಕ ನೀಡಿದರು.ಜಾತ್ರೆಗೆ ಆಗಮಿಸಿ ಸ್ಪರ್ಧೆಗೆ ಹೆಸರು ನೋಂದಾಯಿಸಿಕೊಂಡಿದ್ದ ರಾಸುಗಳ ಪೈಕಿ ಎರಡು, ನಾಲ್ಕು, ಆರು ಹಲ್ಲುಗಳು, ಜೋಡಿ ಹೆಣ್ಣು ಹಸುಗಳು, ಬಿತ್ತನೆ ಹೋರಿಗಳನ್ನು ಮೈಕಟ್ಟು, ಗುಣಲಕ್ಷಣ, ನಡಿಗೆ, ತೂಕ ಸಾಕಣೆ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಪರಿಶೀಲನೆ ನಡೆಸಿ ಉತ್ತಮ ರಾಸುಗಳನ್ನು ಆಯ್ಕೆ ಮಾಡಿ ಪ್ರಥಮ, ದ್ವೀತಿಯ, ತೃತೀಯ ಹಾಗೂ ಸಮಾಧನಾಕರ ಬಹುಮಾನಗಳನ್ನು ನೀಡಲಾಯಿತು.ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ತಂತ್ರಜ್ಙಾನ ಬೆಳೆದಂತೆಲ್ಲಾ ಕೃಷಿಯಲ್ಲೂ ಅಧುನಿಕತೆ ಅಳವಡಿಕೆಯಾಗುತ್ತಿದ್ದು, ಇತ್ತಿಚ್ಚಿನ ದಿನಗಳಲ್ಲಿ ಎತ್ತುಗಳನ್ನು, ದನ ಕರುಗಳನ್ನು ಸಾಕುವವರ ಸಂಖ್ಯೆ ತೀರಾ ಕಡಿಮೆಯಾಗುತ್ತಿರುವ ನಡುವೆಯೇ ನಾಟಿ ದನಗಳ ಉಳಿಯುವಿಕೆಗೆ ಈ ರೀತಿ ಪ್ರೋತ್ಸಾಹ ನೀಡುತ್ತಿರುವ ಇಂತಹ ಕಾರ್ಯಕ್ರಮಗಳು ಪ್ರಶಂಸನೀಯವೆಂದರು.ಗ್ರಾಮೀಣ ಭಾಗದಲ್ಲಿ ಹೋದರೆ ಮನೆ ಹಿಂದೆ, ಮುಂದೆ, ಹಾದಿಬಿದಿಯಲ್ಲಿ ಕಾಣುತ್ತಿದ್ದ ದನಕರುಗಳು ಇಂದು ಹುಡುಕಿದರೂ ಸಿಗುತ್ತಿಲ್ಲ. ಇದರಿಂದ ನಾಟಿದನಗಳ ಸಂತತಿ ನಾಶವಾಗುವ ಅಪಾಯವಿದ್ದು, ಅದನ್ನು ಉಳಿಸಿಬೆಳೆಸಲು ಈ ರೀತಿಯ ಕಾರ್ಯಕ್ರಮಗಳು ಸಹಕಾರಿಯೆಂದು ರಾಸುಗಳ ಸ್ಪರ್ಧೆ ಕಾರ್ಯಕ್ರಮಕ್ಕೆ ಮೆಚ್ಚುಗೆ ಸೂಚಿಸಿದರು.ಕಾರ್ಯಕ್ರಮದಲ್ಲಿ ಅಯ್ಯನಗುಡಿ ಸೇವಾ ಟ್ರಸ್ಟ್ ಅಧ್ಯಕ್ಷ ಎಚ್.ಎಲ್.ಪಾರ್ಥಸಾರಥಿ, ಕೆಂಗಲ್ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿ.ಬಿ.ಚಂದ್ರು, ನಾಗೇಶ್, ಮಾಜಿ ಶಾಸಕ ಜಿಲ್ಲಾ ಗ್ಯಾರಂಟಿ ಅಧ್ಯಕ್ಷ ಕೆ.ರಾಜು, ಚಂದ್ರಶೇಖರ್ ಸೇರಿದಂತೆ ಅನೇಕರು ಹಾಜರಿದ್ದರು.