ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಕಳೆದ ಎರಡು ದಿನಗಳಿಂದ ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪವರ್ ಲಿಫ್ಟರ್ಸ್ ಸಂಸ್ಥೆ ಮತ್ತು ರಾಜ್ಯ ಪವರ್ ಲಿಫ್ಟರ್ಸ್ ಸಂಸ್ಥೆ ಮಂಗಳೂರು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೪೯ನೇ ಪುರುಷರ ಮತ್ತು ೪೧ನೇ ಮಹಿಳೆಯರ ರಾಜ್ಯ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಬಹುಮಾನವನ್ನು ವಿತರಿಸಲಾಯಿತು.ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ನಿಂದ ನಡೆದ ೫೯ ಕೆ.ಜಿ. ವಿಭಾಗದಲ್ಲಿ ಮಂಗಳೂರಿನ ಬಾಲಾಂಜನೇಯ ಜಿಮ್ ನ ಕೆ. ಸಚಿನ್ ಪ್ರಥಮ ಸ್ಥಾನ ಗಳಿಸಿದರು. ೬೬ ಕೆ.ಜಿ. ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಎ. ನಾಗರಾಜು, ೭೪ ಕೆ.ಜಿ. ವಿಭಾಗದಲ್ಲಿ ದಾವಣಗೆರೆಯ ಕಾರ್ಪನ್ ಜಿಮ್ ತನ್ವೀರ್ ಅಹಮದ್, ೮೩ ಕೆ.ಜಿ. ವಿಭಾಗದಲ್ಲಿ ಆರ್. ಅರುಣ್ ಸಾಯಿ ಕುಮಾರ್, ೯೩ ಕೆ.ಜಿ. ವಿಭಾಗದಲ್ಲಿ ಬೆಂಗಳೂರಿನ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ನ ಸಂದೀಪ್ ನಾಯ್ಡ್, ೧೦೫ ಕೆ.ಜಿ. ವಿಭಾಗದಲ್ಲಿ ಮಂಗಳೂರಿನ ಬಾಲಾಂಜನೇಯ ಜಿಮ್ ನ ಸಿದ್ದಾರ್ಥ ಸುವರ್ಣ, ೧೨೦ ಕೆ.ಜಿ. ವಿಭಾಗದಲ್ಲಿ ಮಂಗಳೂರಿನ ಬಾಲಾಂಜನೇಯ ಜಿಮ್‌ನ ಪ್ರಸಾದ್ ಡಿಸೋಜಾ, ತ್ರಿಶೂಲ್ ಆರ್. ಅರ್ಚನ ಪ್ರಥಮ ಬಹುಮಾನ ಪಡೆದುಕೊಂಡರು. ಇನ್ನು ಮಹಿಳೆಯರ ೪೭ ಕೆ.ಜಿ. ವಿಭಾಗದಲ್ಲಿ ಹಾಸನದ ಏರೋ ಫಿಟ್ನೆಸ್ ಜಿಮ್ ನ ಡಿ.ಆರ್. ಸಿಂಚನಾ, ೫೨ ಕೆ.ಜಿ. ವಿಭಾಗದಲ್ಲಿ ಬೆಂಗಳೂರಿನ ಪವರ್ ಲಿಪ್ಟಿಂಗ್ ಅಸೋಸಿಯೇಶನ್ ಮಿಟಾಲಿ ಬಿಸ್ವಾಲ್, ೫೭ ಕೆ.ಜಿ. ವಿಭಾಗದಲ್ಲಿ ಮಂಗಳೂರಿನ ಐರನ ಡೆನ್ ನ ಕೆ.ಎನ್. ದೇವಿ, ೬೩ ಕೆ.ಜಿ. ವಿಭಾಗದಲ್ಲಿ ಬೆಂಗಳೂರಿನ ಬಾಲಾರ್ಕ ಫೀಟ್ನೆಸ್ ನ ಪವಿತ್ರ ಶಂಕರನ್, ೬೯ ಕೆ.ಜಿ. ವಿಭಾಗದಲ್ಲಿ ಹುಬ್ಬಳ್ಳಿಯ ಎಂಟರನಲ್ ಜಿಮ್‌ನ ನಾಗಶ್ರೀ, ೭೬ ಕೆ.ಜಿ. ವಿಭಾಗದಲ್ಲಿ ಹುಬ್ಬಳ್ಳಿಯ ಎಂಟರನಲ್ ಜಿಮ್ ನ ಫಹರನಜ್ ಎ. ಹುಸೇನ್, ೮೪ ಕೆ.ಜಿ. ವಿಭಾಗದಲ್ಲಿ ಮಂಗಳೂರಿನ ಐರನ್ ಡೆನ್ ನ ಎನ್. ದೀಪಾ ಮತ್ತು ರಕ್ಷಾ ಬೇಕಲ್ ಬಹುಮಾನ ಗಳಿಸಿದರು. ಕಾರ್ಯಕ್ರಮದಲ್ಲಿ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಸಂಸ್ಥೆ ಅಧ್ಯಕ್ಷರು ಹಾಗೂ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ ವಹಿಸಿದ್ದರು. ರಾಜ್ಯ ಪವರ್ ಲಿಫ್ಟರ್ಸ್ ಸಂಸ್ಥೆಯ ಕಾರ್ಯದರ್ಶಿಗಳಾದ, ಸತೀಶ್ ಕುದ್ರೋಳಿಯವರು ಬಹುಮಾನ ವಿತರಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ಕೃಷ್ಣರಾಜು, ವಿಜಯಕುಮಾರ್, ಪ್ರತಾಪ್, ಯೋಗನಾಥ್, ಲೋಕೇಶ್, ಸಂಜಯ್, ರಾಜು, ಜಗದೀಶ್, ಹೇಮಂತ್, ಲೋಹಿತ್ ಗೌಡ, ಅಂತಾರಾಷ್ಟ್ರೀಯ ಪವರ್ ಲಿಫ್ಟರ್ಸ್ ಹನುಮಂತಗೌಡ, ಎಚ್.ಆರ್. ಯಶೋಧರ, ರಘು, ಧರ್ಮೇಗೌಡ, ಕ್ರೀಡಾ ಪರಿಷತ್ ಕಾರ್ಯದರ್ಶಿಗಳಾದ ನಿರಂಜನ ರಾಜ್ ಉಪಸ್ಥಿತರಿದ್ದರು.