ಸಾರಾಂಶ
ವಕ್ಫ್ ಕಾಯ್ದೆ ಹೆಸರಿನಲ್ಲಿ ರಾಜ್ಯ ವಕ್ಫ್ ಮಂಡಳಿ ಸ್ವತ್ತಿನ ಜಿಹಾದ್ ಮೂಲಕ ರಾಷ್ಟ್ರ ಹಾಗೂ ರಾಜ್ಯದಲ್ಲಿ ಇಸ್ಲಾಮೀಕರಣ ಮಾಡುವ ದುರುದ್ದೇಶ ಹೊಂದಿದೆ. ಇದರಿಂದ ರೈತರ ಜಮೀನು ಹಾಗೂ ನಾಗರೀಕರಣ ಆಸ್ತಿಗಳನ್ನು ವಕ್ಫ್ ಹೆಸರಿನಲ್ಲಿ ನುಂಗಿ ಹಾಕಲು ಮುಂದಾಗಿದೆ. ಕಾಂಗ್ರೆಸ್ ಸರ್ಕಾರ ಸಹ ಕುಮ್ಮಕ್ಕು ನೀಡುತ್ತಿದೆ ಎಂದು ಕಿಡಿಕಾರಿದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ವಕ್ಫ್ ಮಂಡಳಿ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ಪಟ್ಟಣದ ಕುವೆಂಪು ವೃತ್ತದಿಂದ ಮುಖ್ಯ ರಸ್ತೆ ಮಾರ್ಗವಾಗಿ ತೆರಳಿ ತಾಲೂಕು ಕಚೇರಿ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿ, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಘೋಷಣೆ ಕೂಗಿದರು.
ವಕ್ಫ್ ಕಾಯ್ದೆ ಹೆಸರಿನಲ್ಲಿ ರಾಜ್ಯ ವಕ್ಫ್ ಮಂಡಳಿ ಸ್ವತ್ತಿನ ಜಿಹಾದ್ ಮೂಲಕ ರಾಷ್ಟ್ರ ಹಾಗೂ ರಾಜ್ಯದಲ್ಲಿ ಇಸ್ಲಾಮೀಕರಣ ಮಾಡುವ ದುರುದ್ದೇಶ ಹೊಂದಿದೆ. ಇದರಿಂದ ರೈತರ ಜಮೀನು ಹಾಗೂ ನಾಗರೀಕರಣ ಆಸ್ತಿಗಳನ್ನು ವಕ್ಫ್ ಹೆಸರಿನಲ್ಲಿ ನುಂಗಿ ಹಾಕಲು ಮುಂದಾಗಿದೆ. ಕಾಂಗ್ರೆಸ್ ಸರ್ಕಾರ ಸಹ ಕುಮ್ಮಕ್ಕು ನೀಡುತ್ತಿದೆ ಎಂದು ಕಿಡಿಕಾರಿದರು.ರೈತರ ಜಮೀನುಗಳನ್ನು ನುಂಗಿ ಹಾಕಲು ಹುನ್ನಾರ ನಡೆಸುತ್ತಿರುವ ವಕ್ಫ್ ಮಂಡಳಿಯನ್ನು ಸಂಪೂರ್ಣ ರದ್ದು ಮಾಡಬೇಕು ಎಂದು ಒತ್ತಾಯಿಸಿ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಬಿಜೆಪಿ ನಗರ ಘಟಕ ಉಮೇಶ್ ಕುಮಾರ್, ಮುಖಂಡರಾದ ಹೇಮಂತ್, ಟಿ. ಶ್ರೀಧರ್, ಮನು, ಆನಂದ, ಅಭಿ, ಪ್ರಗರ ಪರ ಹೋರಾಗಾರ ಸತ್ಯಮೂರ್ತಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಪುಣ್ಯಕೋಟಿ, ಬಜರಂಗದಳ ಮೈಸೂರು ವಿಭಾಗ ಸಂಯೋಜಕ ಹೊಸ ಆನಂದೂರು ಬಸವರಾಜು, ಬೆಳಗೊಳ ಸುನಿಲ್, ಬಜರಂಗದಳ ತಾಲೂಕು ಸಂಚಾಲಕ ಶಂಕರ್, ಸನತ್, ಯತೀಶ್, ರವಿಚರಣ್ ಬಿ.ಎಸ್, ಪಶ್ಚಿಮವಾಹಿನಿ ಸರಸ್ವತಿ, ಬಿಎಂಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಾಸುದೇವ್ ಸೇರಿ ಇತರರು ಇದ್ದರು.