ಸಾರಾಂಶ
ಶಿಗ್ಗಾಂವಿ: ಕನ್ನಡ ನಾಡು, ನುಡಿ, ನೆಲ, ಭಾಷೆ ಸಂಸ್ಕೃತಿ ಉಳಿಯಬೇಕಾದರೆ ಕನ್ನಡ ಪರ ಹೋರಾಟಗಾರರ ಅವಶ್ಯಕತೆ ಇದೆ ಎಂದು ಕರವೇ ಗಜಪಡೆ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಮರಾಠೆ ಹೇಳಿದರು. ಕರ್ನಾಟಕ ರಕ್ಷಣಾ ವೇದಿಕೆ ಗಜಪಡೆ ಸಂಘಟನೆ ವತಿಯಿಂದ ತಾಲೂಕಿನ ತಡಸ ಗ್ರಾಮದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತ ಕಡೆ ಗೋವಾ, ಮಹಾರಾಷ್ಟ್ರ, ಆಂಧ್ರ , ಕೇರಳ , ತಮಿಳುನಾಡು, ಈ ರಾಜ್ಯವನ್ನು ಕಬಳಿಸುವ ಹುನ್ನಾರ ನಡೆದಾಗ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡದ್ದಿದ್ದರೆ ಇಡೀ ಕರ್ನಾಟಕ ರಾಜ್ಯವು ಹರಿದು ಹಂಚಿ ಹೋಗುತ್ತಿತ್ತು. ಕನ್ನಡಿಗರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳು ಕನ್ನಡ ಹಬ್ಬಆಚರಣೆ ಮಾಡಲಾಗುತ್ತಿದೆ ಎಂದು ನುಡಿದರು.ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದರೆ, ಅಂಗನವಾಡಿ ಕಾರ್ಯಕರ್ತೆಯರಿಗೆ. ಆಶಾ ಕಾರ್ಯಕರ್ತೆಯರಿಗೆ. ಆರೋಗ್ಯ ಇಲಾಖೆಯ ಆಂಬ್ಯುಲೆನ್ಸ್ ಚಾಲಕರಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು,ಈ ಸಂದರ್ಭದಲ್ಲಿ ತಡಸ ಗ್ರಾಮ ಪಂಚಾಯತ್ ಅಧ್ಯಕ್ಷರು, ಕರವೇ ಗಜಪಡೆ ಜಿಲ್ಲಾ ಪದಾಧಿಕಾರಿಗಳು ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಂಘಟನೆಯ ಕಾರ್ಯಕರ್ತರು, ಶಾಲಾ ಕಾಲೇಜೀನ ವಿದ್ಯಾರ್ಥಿಗಳು,ಊರಿನ ಗ್ರಾಮಸ್ಥರು, ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು, ಈ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ಶಂಕರ.ಎಸ್. ಬಡಿಗೇರ, ಉಪಾಧ್ಯಕ್ಷ ನಾರಾಯಣ ಬಡಿಗೇರ, ಪ್ರಧಾನ ಕಾರ್ಯದರ್ಶಿ ಶಿಂದಯ್ಯ ಹಿರೇಮಠ, ಸಂಘಟನಾ ಕಾರ್ಯದರ್ಶಿ ಬ್ರಹ್ಮಾನಂದ ಕಮ್ಮಾರ, ನಾರಾಯಣ ಬಡಿಗೇರ, ಅದುಸಾಬ ಕೂಲಾಪುರ, ತಡಸ ಗ್ರಾಮ ಘಟಕದ ಅಧ್ಯಕ್ಷ ಮಹಾವೀರ ಹಳ್ಳಿಯವರ, ತಾಲೂಕು ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷ ನಾಗಪ್ಪ ಬೆಂತೂರ, ತಡಸ ಹೋಬಳಿ ಮಟ್ಟದ ಅಧ್ಯಕ್ಷ ಈರಣ್ಣ ಎಲ್. ಬೋಸಲೆ, ವಿನಾಯಕ ರೇವರ್ಣಕರ, ರಾಮಣ್ಣ ಕಮ್ಮಾರ, ಮೌಲಾಲಿ ಹುಚ್ಚು ಸಾಬನವರ, ಮಮಸಾಬ ಪಿಟಗಿ, ಮಮಗೌಸ ಅಣ್ಣಿಗೇರಿ, ಶ್ರೀಧರ ಬಡಿಗೇರ, ಹರೇಶ ಗೂಧಕರ, ಮಂಜುನಾಥ ಅಬೂಲೇಸ, ಉಮೇಶ ಬಡಿಗೇರ, ದೇವೇಂದ್ರ ಹಾನಗಲ್, ಸುರೇಜ ಕಾಯಿವರ ಸೇರಿದ ಹಲವರು ಕಾರ್ಯಕ್ರಮದಲ್ಲಿ ಇದ್ದರು.