ಕನ್ನಡಕ್ಕಾಗಿ ಹೋರಾಡುವಲ್ಲಿ ಕನ್ನಡಪರ ಸಂಘಟನೆಗಳ ಪಾತ್ರ ಹಿರಿದು

| Published : Nov 14 2024, 12:47 AM IST

ಕನ್ನಡಕ್ಕಾಗಿ ಹೋರಾಡುವಲ್ಲಿ ಕನ್ನಡಪರ ಸಂಘಟನೆಗಳ ಪಾತ್ರ ಹಿರಿದು
Share this Article
  • FB
  • TW
  • Linkdin
  • Email

ಸಾರಾಂಶ

Pro-Kannada organizations played a role in fighting for Kannada

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಕರ್ನಾಟಕ ರಾಜ್ಯ ಹಾಗೂ ಗಡಿನಾಡಿನಲ್ಲಿ ಕನ್ನಡದ ಬಳಕೆ ಮಾಡುವಂತೆ ಮಹತ್ವದ ಹೋರಾಟ ಮಾಡಿ ಭಾಷೆಯ ರಕ್ಷಣೆಗೆ ಕನ್ನಡಪರ ಸಂಘಟನೆಗಳ ಪಾತ್ರ ಹಿರಿದಾದುದು ಎಂದು ಶಾಸಕ ಮಾನಪ್ಪ ವಜ್ಜಲ್ ಬಣ್ಣಿಸಿದರು.

ಪಟ್ಟಣದ ಪದವಿ ಪೂರ್ವ ಕಾಲೇಜು ಮುಂಭಾಗದಲ್ಲಿ ನಮ್ಮ ಕರ್ನಾಟಕ ಸೇನೆ ವತಿಯಿಂದ ನಡೆದ ರಾಜ್ಯೋತ್ಸವ ಆಚರಣೆ ಸಮಾರಂಭದಲ್ಲಿ ಪಾಳ್ಗೊಂಡು ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ಗಡಿನಾಡಿನಲ್ಲಿ ಇತರೇ ಭಾಷಿಕರ ಉಪಟಳ ಹಾಗೂ ಕನ್ನಡಕ್ಕೆ ಆಗುತ್ತಿದ್ದ ಅನ್ಯಾಯವನ್ನು ಸದೆಬಡಿದು ಕನ್ನಡ ಭಾಷೆ ರಕ್ಷಣೆ ಮಾಡಿದ್ದು ಕನ್ನಡ ಪರ ಸಂಘಟನೆಗಳು. ಕನ್ನಡಕ್ಕಾಗಿ ಪ್ರತ್ಯೇಕ ಹೆಸರಿನ ಸಂಘಟನೆಗಳು ಇದ್ದರೂ ಆ ಸಂಘಟನೆಗಳ ಕೂಗು ಕನ್ನಡ ರಕ್ಷಣೆ ಆಗಿದೆ ಎಂದು ಹೇಳಿದರು.

ಈ ವೇಳೆ ಯರಡೋಣಿ ಮುರುಗೇಂದ್ರ ಶ್ರೀ, ಜಿಲ್ಲಾಧ್ಯಕ್ಷ ಕೆ.ಕೊಂಡಪ್ಪ, ತಾಲೂಕ ಅಧ್ಯಕ್ಷ ಶಿವರಾಜ ನಾಯ್ಕ, ಎನ್.ಸ್ವಾಮಿ, ಪುರಸಭೆ ಸದಸ್ಯ ಮುದುಕಪ್ಪ ನಾಯಕ, ಬಿಜೆಪಿ ಅಧ್ಯಕ್ಷ ನ್ಯಾಯವಾದಿ ಅಯ್ಯಪ್ಪ ಮಾಳೂರು, ಗುತ್ತೆದಾರ ಶ್ರೀನಿವಾಸ ಅಮ್ಮಾಪುರ, ವೀರನಗೌಡ ಲೆಕ್ಕಿಹಾಳ, ಯಂಕನಗೌಡ ಗುಡದನಾಳ, ಚಂದ್ರು ನಾಯಕ, ನಿರುಪಾದಿ. ಮಾಣಿಕ ಇಂಗಳೆ, ಚಂದ್ರಕಾAತ ಬೋವಿ, ಮಹಾಂತಯ್ಯ ಸ್ವಾಮಿ, ಶಂಕರ ಚವ್ಹಾಣ ಸೇರಿದಂತೆ ಇದ್ದರು.-----