ಸಾರಾಂಶ
ನರಗುಂದ: ಜಮ್ಮು ಕಾಶ್ಮೀರದ ಪಹಲ್ಗಾಂ ಪ್ರದೇಶದಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಪಟ್ಟಣದಲ್ಲಿ ಕನ್ನಡ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ತಹಸೀಲ್ದಾರ್ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಕನ್ನಡಪರ ಸಂಘಟನೆ ಮುಖಂಡ ರಾಘವೇಂದ್ರ ಗುಜಮಾಗಡಿ, ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ ಕೊಂದು ಹಾಕಿರುವುದನ್ನು ಖಂಡಿಸಿದರು.
ಮಂಗಳವಾರ ಉಗ್ರರು ಹಿಂದುಗಳನ್ನು ಗುರಿಯಾಗಿಸಿ ಹಿಂದುಗಳು ಹೌದು ಅಲ್ಲವೆಂದು ಬಟ್ಟೆ ಬಿಚ್ಚಿಸಿ ಹಿಂದುಗಳನ್ನು ಗುಂಡಿಕ್ಕಿ ಕೊಂದದ್ದು ಅವಮಾನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕನ್ನಡಪರ ಸಂಘಟನೆ ಮುಖಂಡ ಚನ್ನು ನಂದಿ ಮಾತನಾಡಿ, ಭಾರತ ದೇಶ ಶಾಂತಿಯುತ ದೇಶವಾಗಿದೆ, ಕಳೆದ 2 ದಶಕಗಳಿಂದ ಜಮ್ಮು-ಕಾಶ್ಮೀರ ಪ್ರದೇಶ ಉಗ್ರರರಿಂದ ಮುಕ್ತವಾಗಿದ್ದು, ಆದರೆ ಮಂಗಳವಾರ ಮತ್ತೆ ಉಗ್ರರರು ಅಮಾಯಕ ಪ್ರವಾಸಗರ ಮೇಲೆ ಗುಂಡಿನ ದಾಳಿ ಮಾಡಿ 26 ಪ್ರವಾಸಿಗರನ್ನು ಗುಂಡಿಕ್ಕಿ ಕೊಂದದ್ದು ನೋವಿನ ಸಂಗತಿ. ಕೇಂದ್ರ ಸರ್ಕಾರ ಯಾವುದೇ ಮೂಲಾಜಿಲ್ಲದೆ ಉಗ್ರರನ್ನು ಕೊಂದು ಹಾಕಿ, ಅವರು ಜೀವಂತವಾಗಿ ಸಿಕ್ಕರೆ ಅವರನ್ನು ಸಾರ್ವಜನಿಕರ ಎದುರಲ್ಲಿ ಗಲ್ಲು ಹಾಕಬೇಕೆಂದು ಮನವಿ ಮಾಡಿಕೊಂಡರು.
ಶಿರಸ್ತೇದಾರಾದ ಸುನಾಂದವರು ಪ್ರತಿಭಟನೆಗಾರರ ಮನವಿ ಸ್ವೀಕರಿಸಿ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ರವಾನೆ ಮಾಡಲಾಗುವುದೆಂದು ಹೇಳಿದರು.ಈ ಸಂದರ್ಭದಲ್ಲಿ ಬಸವರಾಜ ತಾವರೆ, ವಿಕಾಶ ಮುಧೋಳೆ, ಬಸವರಾ ಸತ್ತಿಗೇರ, ಶಿವಯೋಗಿ ಬೆಂಡಿಗೇರಿ, ನಬಿಸಾಬ ಕಿಲ್ಲೇದಾರ, ಶಂಕರಪ್ಪ ಜಾಲಗಾರ, ನಾಗರಾಜ, ಶರಣಪ್ಪ ಗುದಗಿ, ಸೇರಿದಂತೆ ಮುಂತಾದವರು ಇದ್ದರು.