ರಸ್ತೆ ಗುಂಡಿಮಯ: ಜನರು, ಮಕ್ಕಳ ಪರದಾಟ

| Published : Jul 22 2024, 01:24 AM IST

ಸಾರಾಂಶ

ತಾಲೂಕು ನಿಟ್ಟೂರು ಹೋಬಳಿ ಕಾರೆಹಳ್ಳಿ ಗ್ರಾಮಕ್ಕೆ ಸಮರ್ಪಕವಾದ ರಸ್ತೆ ಇಲ್ಲ ಮಾಡಿಕೊಡಿ

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕು ನಿಟ್ಟೂರು ಹೋಬಳಿ ಕಾರೆಹಳ್ಳಿ ಗ್ರಾಮಕ್ಕೆ ಸಮರ್ಪಕವಾದ ರಸ್ತೆ ಇಲ್ಲ ಮಾಡಿಕೊಡಿ ಎಂದು ಮನವಿ ಪತ್ರ ನೀಡಿದರೂ ಸಹ ಇಲ್ಲಿಯವರೆಗೂ ಯಾವ ಅಧಿಕಾರಿಗಳಾಗಲಿ, ರಾಜಕಾರಣಿಗಳಾಗಲಿ ಈ ಗ್ರಾಮವನ್ನು ಕಡೆಗಣಿಸಿದ್ದಾರೆ ಎಂದು ಗ್ರಾಮದ ಜನರು ದೂರಿದ್ದಾರೆ.

ಗ್ರಾಮದ ಜನರು ಗುಂಡಿ ಬಿದ್ದ ರಸ್ತೆಯಲ್ಲಿಯೇ ನಾಟಿ ಮಾಡುವ ಮೂಲಕ ರಸ್ತೆ ದುರಸ್ತಿ ಮಾಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಆದಷ್ಟು ಬೇಗ ಈ ಗ್ರಾಮಕ್ಕೆ ಸಿಸಿ ರಸ್ತೆಯನ್ನು ಮಾಡಿಸಬೇಕೆಂದು ಮನವಿ ಮಾಡಿದರು.

ಸುಮಾರು 20 ವರ್ಷಗಳಿಂದಲೂ ಸಹ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು ಮಳೆಗಾಲದಲ್ಲಂತೂ ಗ್ರಾಮದ ಜನರು, ಶಾಲಾ ಮಕ್ಕಳು ರಸ್ತೆಯಲ್ಲಿ ಓಡಾಡಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಉಂಟಾಗಿದೆ. 2003ರಲ್ಲಿ ಲೋಕೋಪಯೋಗಿ ಕಾಟಾಚಾರಕ್ಕೆ ರಸ್ತೆ ಮಾಡಿ ಹೋಗಿದ್ದರು. ಆದರೆ ಈ ರಸ್ತೆ ಹೇಮಾವತಿ ನಾಲೆಯ ದಂಡೆಯ ಸ್ವಲ್ಪ ದೂರದಲ್ಲಿ ಇರುವುದರಿಂದ ಹೇಮಾವತಿ ನೀರಿನ ಜೋಪು ಹರಿಯುವುದರಿಂದ ರಸ್ತೆ ಕಿತ್ತು ಗುಂಡಿಯಾಗಿದೆ ಮಳೆ ಬಂದರೆ ಗುಂಡಿಯಲ್ಲಿ ನೀರು ನಿಂತು ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದರು.

ಕೆಲವು ವೇಳೆ ಬೈಕ್ ಸವಾರರು ಗುಂಡಿ ಕಾಣದೆ ಬೈಕ್‌ನಿಂದ ಬಿದ್ದು ಕೈ ಕಾಲು ಮುರಿದು ಮುರಿದುಕೊಂಡು ಆಸ್ಪತ್ರೆ ಸೇರುವ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದರು.