ಕಡೂರಲ್ಲಿ ಜನ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಕೆ.ಎಸ್.ಆನಂದ್
ಕನ್ನಡಪ್ರಭ ವಾರ್ತೆ, ಕಡೂರುಜನ ಸಂಪರ್ಕ ಕಾರ್ಯಕ್ರಮಗಳಿಂದ ಜನರ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳುವ ವೇದಿಕೆ ಇದಾಗಿದ್ದು. ಪ್ರತಿ 2 ತಿಂಗಳಿಗೊಮ್ಮೆ ಈ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಮಂಗಳವಾರ ಕಡೂರು ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಸವಲತ್ತುಗಳನ್ನು ಜನರಿಗೆ ನೀಡುವಲ್ಲಿ ಕಂದಾಯ ಇಲಾಖೆ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿ 2 ತಿಂಗಳಿಗೊಮ್ಮೆ ತಾಲೂಕು ಕಚೇರಿ ಮುಂದೆ ಈ ಕಾರ್ಯಕ್ರಮ ಆಯೋಜಿಸುವ ಮೂಲಕ ಗ್ರಾಮೀಣ ಜನರ ಅನಗತ್ಯ ಓಡಾಟ ತಪ್ಪಿಸುವುದು ಇದರ ಸದುದ್ದೇಶ. ಕೆಲ ದಿನಗಳ ಹಿಂದೆ ಕಂದಾಯ ಇಲಾಖೆ ಕಾರ್ಯವೈಖರಿ ಮತ್ತು ಅಧಿಕಾರಿಗಳ ಬಗ್ಗೆ ಇದ್ದ ತಪ್ಪು ಅಭಿಪ್ರಾಯಗಳನ್ನು ತೊಡೆದು ಹಾಕಲು ತಹಸೀ್ಲ್ದಾರ್ ಮತ್ತು ಅಧಿಕಾರಿಗಳ ಕಾರ್ಯ ನಿರ್ವಹಣೆೆಯಿಂದ ಆರೋಪ ತೊಡೆದು ಹಾಕುವ ಕೆಲಸ ಮಾಡುತಿದ್ದಾರೆ ಎಂದರು. ಕಾಂಗ್ರೆಸ್ ನೇತೃತ್ವದ ನಮ್ಮ ಸರಕಾರವು 70 ವರ್ಷಗಳಿಂದ ಆಗದಿರುವ ಕೆಲಸಗಳನ್ನು ನಮ್ಮ ಸರಕಾರವು ಕಾಲೋನಿಗಳು, ಹಟ್ಟಿಗಳ ನಿವಾಸಿಗಳನ್ನು ಗುರುತಿಸಿ ಇ ಸೊತ್ತು ನೀಡಲು ಕ್ರಮ ವಹಿಸಿ ಸುಮಾರು 3 ಸಾವಿರ ಹಕ್ಕು ಪತ್ರಗಳು ಸಿದ್ದವಿದೆ ಎಂದರು.ದತ್ತಾಂಶ 2 ತಾಂತ್ರಿಕ ಸಮಸ್ಯೆ ಯಿಂದ ಇ- ಸೊತ್ತು ನೀಡಲು ವಿಳಂಬವಾಗುತ್ತಿದೆ. ತಾಲೂಕಿನಲ್ಲಿ 321 ಕಂದಾಯ ಗ್ರಾಮ ಮತ್ತು ಉಪ ಗ್ರಾಮ ಇದ್ದು ತಾವು ಶಾಸಕರಾದ ಮೇಲೆ 131 ಕಂದಾಯ ಗ್ರಾಮ ಗುರುತಿಸಲಾಗಿದೆ. ಇಲ್ಲಿ ಬೇರೆ ಬೇೆರೆೆೆೆೆೆೆೆೆ ಉದ್ದೇಶದಿಂದ 8 ಜನರು ಅಮಾನತ್ತುಗೊಂಡಿದ್ದು, ಇದು ಇಡೀ ರಾಜ್ಯದಲ್ಲಿ ಉಂಟಾಗಿರುವ ಸಮಸ್ಯೆ ಆಗಿದ್ದು ಸದನದಲ್ಲಿ ಮಾತನಾಡುತ್ತೇನೆೆೆೆ. ರೈತರ ಪರವಾಗಿ ನಾವು ಮತ್ತು ನೀವು ಸೇರಿ ತಾಲೂಕಿಗೆ ಮತ್ತು ಸರಕಾರಕ್ಕೆ ಉತ್ತಮ ಹೆಸರು ತರಲು ಕೆಲಸ ಮಾಡೋಣ ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಮಾತನಾಡಿ,ಜನನದಿಂದ ಮರಣದವರೆಗೆ ಎಲ್ಲ ಕೆಲಸಗಳನ್ನು ಜನರಿಗೆ ತಲುಪಿಸುವಲ್ಲಿ ಕಂದಾಯ ಇಲಾಖೆ ಮತ್ತು ಆಡಳಿತದಲ್ಲಿ ಪಾರದರ್ಶಕತೆ ತರಲು ಇಲಾಖೆ ಶ್ರಮಿಸುತ್ತಿದೆ. ಅಲ್ಲದೆ ದಾಖಲೆಗಳು ಇಲ್ಲದ ಕಂದಾಯ ಗ್ರಾಮ ಮತ್ತು ಉಪ ಗ್ರಾಮ, ಅರಣ್ಯ ಎಂದು ಗುರುತಿಸಿ ಶಾಸಕರ ಮಾರ್ಗದರ್ಶನದಿಂದ ಇದುವರೆಗೆ 3ಸಾವಿರ ಹಕ್ಕು ಪತ್ರಗಳ ವಿತರಣೆಗೆ ಅನುಮೋದನೆ ನೀಡಲಾಗಿದೆ.
ದರಖಾಸ್ತು ಪೋಡಿ,ಬಗರ್ ಹುಕುಂಗಳಿಗೆ ಮಂಜೂರಾತಿ ನೀಡಲಾಗಿದೆ. ಅಲ್ಲದೆ 1ರಿಂದ 5 ತಂತ್ರಾಂಶದಲ್ಲಿ ಸರಕಾರದ 268 ಸರ್ವೆ ನಂ. ದಾಖಲೆಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇದುವರೆಗೆ 4700 ಜನರಿಗೆ ಇ- ಪೋತಿ, ಜಂಟಿ ಖಾತೆೆ ನೀಡಲಾಗಿದೆ. ಶೀಘ್ರದಲ್ಲೇ ಇಪೋತಿ ಅಭಿಯಾನ ಕೈಗೊಳ್ಳಲಾಗುವುದು ಎಂದರು.ಸುರಕ್ಷಾ ಯೋಜನೆಯಲ್ಲಿ 37 ಲಕ್ಷ ಪುಟಗಳನ್ನು ಹೊಂದಿದ್ದು ಉಳಿದ 10 ಲಕ್ಷ ಪುಟಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ.. ಮುಂದಿನ ದಿನಗಳಲ್ಲಿ ಮಾನ್ಯುಯಲ್ ನಲ್ಲಿ ನೀಡದೆೆೆೆೆ ಕಾಗದ ರಹಿತ ದಾಖಲೆಗಳನ್ನು ಆನ್ ಲೈನ್ ಮೂಲಕ ನೀಡಲಾಗುವುದು.
ಕಂದಾಯ, ಅರಣ್ಯ ಮತ್ತು ಸರ್ವೆ ಇಲಾಖೆ ಸೇರಿ ತಾಲೂಕಿನ 8 ಗ್ರಾಮಗಳಲ್ಲಿ 34 ಸರ್ವೆ ನಂಬರ್ ಗಳನ್ನು ಜಂಟಿ ಸರ್ವೇ ಮಾಡಿದ್ದು ಅಲ್ಲದೆ ಸರಕಾರದ ವಿವಿಧ ಯೋಜನೆಗಳನ್ನು ಸರಿಯಾಗಿ ಕಂದಾಯ ಇಲಾಖೆೆ ವಿತರಿಸುತ್ತಿದೆ ಎಂದರು.ವಲಯ ಅರಣ್ಯಾಧಿಕಾರಿ ಹರೀಶ್, ಭೂದಾಖಲೆಗಳ ಸಹಾಯಕ ನಿರ್ದೇಶ ಕರಾದ ಶ್ರೀನಿಧಿ, ಜಿ.ಅಶೋಕ್ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಗ್ರಾಮ ಸಹಾಯಕರು, ಶಿರಸ್ತೇದಾರ್ ಗಳು, ಕಂದಾಯ ಇಲಾಖೆಯ ವಿವಿಧ ವಿಭಾಗದ ಅಧಿಕಾರಿಗಳು, ಜನರು ಹಾಜರಿದ್ದರು.
-- ಬಾಕ್ಸ್ ಸುದ್ದಿಗೆ--ಸಭೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಜನರು ವರ್ಷಗಳಿಂದ ಅಲೆದರೂ ಸಮಸ್ಯೆ ಬಗೆಹರಿಸಿಲ್ಲ. 2ವರ್ಷ ಅಲೆಸಿ ಈಗ ಎಸಿ ಕೋರ್ಟ್ ಗೆ ಹೋಗಲು ಹಿಂಬರಹ ನೀಡಿದ್ದಾರೆ. ಬಗರ್ ಹುಕುಂ ಭೂಮಿಗೆ ಸಾಗುವಳಿ ಚೀಟಿ, ನಮ್ಮ ಸ್ವಾಧೀನದ ಭೂಮಿಗೆ ಖಾತೆ, ಕಂದಾಯ ಗ್ರಾಮ, ಉಪ ಗ್ರಾಮ ರಚಿಸಿ ಇ-ಸ್ವತ್ತು ವಿತರಿಸಿ, ಖಾತೆ ಮಾಡಿಕೊಡದ ಬಗ್ಗೆ, ತತ್ಕಾಲ್ ಪೋಡಿ , ಹಿಂದಿನ ತಹಸೀಲ್ದಾರ್ ತಪ್ಪು ಹಿಂಬರಹ ನೀಡಿರುವ ಬಗ್ಗೆ. ಜಾತಿ-ಆದಾಯ ಪ್ರಮಾಣಪತ್ರ ಶೀಘ್ರ ವಿತರಣೆಗೆ ಕೋರಿ ಅರ್ಜಿಗಳು ಸಲ್ಲಿಕೆ ಆದವು. 24ಕೆಕೆಡಿಯು1.
ಕಡೂರು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು.