ಸಾರಾಂಶ
ಸಾಂವಿಧಾನಿಕ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯವನ್ನು ಪ್ರಾಮಾಣಿಕವಾಗಿ ಜಾರಿ ಮಾಡಿದರೆ ದೇಶದ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ರಾಜ್ಯ ಸಮಿತಿ ಸದಸ್ಯ ಫಯಾಜ್ ಅಹ್ಮದ್ ಹೇಳಿದ್ದಾರೆ.
- ಎಸ್‍ಡಿಪಿಐ ನೇತೃತ್ವದಲ್ಲಿ ದಿಟ್ಟ ನಾಯಕತ್ವ-ಬಲಿಷ್ಠ ಕಾರ್ಯಕರ್ತ ಸಮಾವೇಶ
- - -ಕನ್ನಡಪ್ರಭ ವಾರ್ತೆ ಹರಿಹರ
ಸಾಂವಿಧಾನಿಕ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯವನ್ನು ಪ್ರಾಮಾಣಿಕವಾಗಿ ಜಾರಿ ಮಾಡಿದರೆ ದೇಶದ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ರಾಜ್ಯ ಸಮಿತಿ ಸದಸ್ಯ ಫಯಾಜ್ ಅಹ್ಮದ್ ಹೇಳಿದರು.ನಗರದ ಅಂಜುಮನ್ ಕಲ್ಯಾಣ ಮಂಟಪದಲ್ಲಿ ಎಸ್‍ಡಿಪಿಐಯಿಂದ ಆಯೋಜಿಸಿದ್ದ ದಿಟ್ಟ ನಾಯಕತ್ವ- ಬಲಿಷ್ಠ ಕಾರ್ಯಕರ್ತ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ನಿರಾಕರಿಸಿದಾಗ ದೇಶದ ನಿವಾಸಿಗಳಿಂದ ಅಸಹನೆ ವ್ಯಕ್ತವಾಗುತ್ತದೆ. ಅಂತಹ ಅಸಹನೆ ವ್ಯಕ್ತವಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಆಡಳಿತ ನಡೆಸುವವರ ಮೇಲಿದೆ ಎಂದರು.
ರಾಷ್ಟ್ರ, ರಾಜ್ಯಮಟ್ಟದ ಜೊತೆಗೆ ಸ್ಥಳೀಯವಾಗಿ ಇರುವಂತಹ ಸಮಸ್ಯೆಗಳ ನಿವಾರಣೆಗೂ ಪಕ್ಷದ ಕಾರ್ಯಕರ್ತ ಧ್ವನಿ ಎತ್ತಬೇಕು. ಸಮಸ್ಯೆಗಳಿಗೆ ಪರಿಹಾರ ದೊರಕಿಸಿದರೆ, ಪಕ್ಷದ ಕಾರ್ಯಕರ್ತರು ಬಲಿಷ್ಠ ನಾಯಕರಾಗಿ ಬೆಳೆಯುತ್ತಾರೆಂದು ಹೇಳಿದರು.ನಿಸ್ವಾರ್ಥ ಸೇವೆ ಸಲ್ಲಿಸುವುದು ಸುಲಭವಲ್ಲ. ದೌರ್ಜನ್ಯಕ್ಕೆ ಒಳಗಾದವರ ನೆರವಿಗೆ ಧಾವಿಸುವ ಮನೋಭಾವನೆ ಪಕ್ಷವು ಕಾರ್ಯಕರ್ತರಲ್ಲಿ ಬೆಳೆಸುತ್ತಿದೆ. ಸಂವಿಧಾನದ ಹಕ್ಕುಗಳ ಜಾರಿಗೆ ಹೋರಾಟ ಮಾಡುತ್ತಿರುವ ಈ ಪಕ್ಷವು ರಾಜ್ಯ ಹಾಗೂ ರಾಷ್ಟ್ರದಲ್ಲಿ ವೇಗವಾಗಿ ಬಲವರ್ಧನೆ ಪಡೆಯುತ್ತಿದೆ ಎಂದರು.
ಸಮಾವೇಶದ ಅಂತ್ಯದಲ್ಲಿ ಬಲಿಷ್ಠ ಸಂಘಟನೆ ನಿರ್ಮಾಣಕ್ಕೆ ಸಂಕಲ್ಪ ಕೈಗೊಳ್ಳಲಾಯಿತು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಆರ್. ತಾಹೀರ್, ಜಿಲ್ಲಾ ಕೋಶಾಧಿಕಾರಿ ಮೊಹಮ್ಮದ್ ಅಜರುದ್ದೀನ್, ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಜುನೈದ್, ಹರಿಹರ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಸಮೀಉಲ್ಲಾ, ಹಾಗೂ ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರು, ಕಾರ್ಯಕರ್ತರು ಮತ್ತು ಸದಸ್ಯರು ಭಾಗವಹಿಸಿದ್ದರು.- - -
(** ಈ ಪೋಟೋ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಿ)-21ಎಚ್‍ಆರ್‍ಆರ್04.ಜೆಪಿಜಿ:
ಹರಿಹರದಲ್ಲಿ ಬುಧವಾರ ಎಸ್‍ಡಿಪಿಐಯಿಂದ ಆಯೋಜಿಸಿದ್ದ ದಿಟ್ಟ ನಾಯಕತ್ವ-ಬಲಿಷ್ಠ ಕಾರ್ಯಕರ್ತ ಸಮಾವೇಶದಲ್ಲಿ ಪಕ್ಷದ ಮುಖಂಡ ಫಯಾಜ್ ಅಹ್ಮದ್ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಹೀರ್, ಕೋಶಾಧಿಕಾರಿ ಮೊಹಮ್ಮದ್ ಅಜರುದ್ದೀನ್, ಮೊಹಮ್ಮದ್ ಜುನೈದ್, ಸಮೀಉಲ್ಲಾ ಇತರರಿದ್ದರು.