ಹಾಸನದಲ್ಲಿ ಸಾರೋಟಿನ ಮೂಲಕ ಮಧ್ವಾಚಾರ್ಯರ ಭಾವಚಿತ್ರದ ಮೆರವಣಿಗೆ

| Published : Feb 19 2024, 01:30 AM IST

ಹಾಸನದಲ್ಲಿ ಸಾರೋಟಿನ ಮೂಲಕ ಮಧ್ವಾಚಾರ್ಯರ ಭಾವಚಿತ್ರದ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದ ರವೀಂದ್ರನಗರ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಮಠದ ಮುಂದೆ ಸಾರೋಟಲ್ಲಿ ಮಧ್ವಾಚಾರ್ಯರ ಭಾವಚಿತ್ರದ ಉತ್ಸವ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು.

ಆರಾಧನೆ । ಶ್ರೀ ಮಧ್ವನವಮಿ ಸ್ವಾಮಿಗಳ ಸ್ಮರಣೆಯ ಉತ್ಸವ । ಶ್ರೀ ಮನ್‌ ಮಧ್ವ ಸಂಘದಿಂದ ಆಯೋಜನೆಕನ್ನಡಪ್ರಭ ವಾರ್ತೆ ಹಾಸನ

ಶ್ರೀ ಮಧ್ವನವಮಿ ಸ್ವಾಮಿಗಳ ಆರಾಧನಾ ಕಾರ್ಯಕ್ರಮದ ಅಂಗವಾಗಿ ನಗರದ ಶ್ರೀ ರಾಘವೇಂದ್ರ ಮಠದಲ್ಲಿ ಶ್ರೀ ಮನ್‌ ಮಧ್ವ ಸಂಘದ ವತಿಯಿಂದ ಮಧ್ವಾಚಾರ್ಯರ ಭಾವಚಿತ್ರವನ್ನು ಸಾರೋಟಿನಲ್ಲಿ ಮೆರವಣಿಗೆ ನಡೆಸಲಾಯಿತು.

ಹಾಸನದ ರವೀಂದ್ರನಗರ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಮಠದ ಮುಂದೆ ಸಾರೋಟಲ್ಲಿ ಮಧ್ವಾಚಾರ್ಯರ ಭಾವಚಿತ್ರದ ಉತ್ಸವ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು.

ನಗರದ ರವೀಂದ್ರನಗರ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಮಠದ ಮುಂದೆ ಸಾರೋಟಲ್ಲಿ ಮಧ್ವಾಚಾರ್ಯರ ಭಾವಚಿತ್ರದ ಉತ್ಸವ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಇದೇ ವೇಳೆ ಭಕ್ತರು ದೇವರ ನಾಮಗಳನ್ನು ಹಾಡುತ್ತ ಭಜನೆ ಪಠಿಸಿದರು. ಇದಕ್ಕೆ ಮೊದಲು ಬೆಳಿಗ್ಗೆ ೭.೩೦ಕ್ಕೆ ಶ್ರೀ ಹರಿವಾಯುಸ್ತುತಿ ಹಾಗೂ ಸುಮಧ್ವವಿಜಯ ಪಾರಾಯಣ ಜರುಗಿತು. ಇದಾದ ನಂತರ ಶ್ರೀ ಮಧ್ವಾಚಾರ್ಯರ ಉತ್ಸವ ಜರುಗಿತು. ಕೊನೆಯಲ್ಲಿ ಭಜನಾ ಕಾರ್ಯಕ್ರಮ ತದನಂತರ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.

ಇದೇ ವೇಳೆ ಮನ್ ಮಧ್ವ ಸಂಘದ ಉಪಾಧ್ಯಕ್ಷ ಎನ್. ಅನಂತಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿ, ಮಧ್ವ ಜಯಂತಿಯನ್ನು ಆಚರಿಸಲಾಗುತ್ತಿದೆ, ಮಧ್ವಾಚಾರ್ಯರು ಕರ್ನಾಟಕದವರಾಗಿದ್ದು, ಉಡುಪಿಯ ಹತ್ತಿರದಲ್ಲಿರುವ ಪಾಜಕ ಗ್ರಾಮದಲ್ಲಿ ಮಧ್ಯಗೇಹ ಭಟ್ಟ ಮತ್ತು ವೇದವತಿ ದಂಪತಿಗೆ ಜನಿಸಿದರು. ತಂದೆ ತಾಯಿ ವಾಸುದೇವನೆಂದು ಹೆಸರಿಟ್ಟಿದ್ದರು. ಬಾಲ್ಯದಲ್ಲೆ ಅಸಾಧಾರಣ ಪ್ರತಿಭೆ ತೋರಿದ ವಾಸುದೇವ, ತನ್ನ ಹನ್ನೆರಡೆನೆಯ ವಯಸ್ಸಿನಲ್ಲಿ ವಿದ್ಯಾಭ್ಯಾಸ ಮತ್ತು ವೇದಾಭ್ಯಾಸಗಳೆರಡನ್ನು ಮುಗಿಸಿ ಗುರು ಅಚ್ಯುತ ಪ್ರಜ್ಞ ಸನ್ಯಾಸವನ್ನು ಪಡೆದು ಪೂರ್ಣಪ್ರಜ್ಞರೆಂಬ ಹೆಸರು ಪಡೆದರು. ಅವರ ಅನುಯಾಯಿ ಭಕ್ತರು, ಸರ್ವೋತ್ತಮ ಶ್ರೀಪತಿಯಾದ ಪರಮಾತ್ಮನ ಅದೇಶವನ್ನು ಪಾಲಿಸಲು ಜೀವೋತ್ತಮನಾದ ಪವಮಾನನು ಶ್ರೀಮದಾನಂದತೀರ್ಥರಾಗಿ ಜನಿಸಿದರು ಎಂದು ಭಾವಿಸುತ್ತಾರೆ. ಶ್ರೀಮಧ್ವಾಚಾರ್ಯರಿಗೆ ಗುರುಗಳು ವೈದಿಕ ಕ್ರಮದಲ್ಲಿ ಪಟ್ಟಾಭಿಶೇಕ ನೆರವೆರಿಸಿ ಇಟ್ಟ ನಾಮ ಆನಂದತೀರ್ಥ ಎಂದರು.

ತಮ್ಮ ಹನ್ನೊಂದನೇ ವರ್ಷದಲ್ಲಿ ಉಡುಪಿಯಲ್ಲಿದ್ದ ಅಚ್ಯುತ ಪ್ರೇಕ್ಷಕರಿಂದ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿದನು. ಅವರು ಅವನಿಗೆ ಸನ್ಯಾಸ ದೀಕ್ಷೆ ಕೊಡುವಾಗ ಪೂರ್ಣಪ್ರಜ್ಞರೆಂದು ನಾಮಕರಣ ಮಾಡಿದರು. ಅವರು ಸಂನ್ಯಾಸ ದೀಕ್ಷೆಯನ್ನು ತೆಗೆದುಕೊಂಡ ಒಂದು ತಿಂಗಳ ನಂತರ ಪಂಡಿತೋತ್ತಮರನ್ನು ವೇದಾಂತ ತರ್ಕದಲ್ಲಿ ಸೋಲಿಸಿದರು. ಅದನ್ನು ನೋಡಿ ಅಚ್ಯುತಪ್ರೇಕ್ಷರು ಅವರಿಗೆ ವೇದಾಂತ ಸಾಮ್ರಾಜ್ಯದ ಚಕ್ರವರ್ತಿಯೆಂದು ಹೇಳಿ ಆನಂದತೀರ್ಥರೆಂಬ ಬಿರುದನ್ನು ಕೊಟ್ಟರು. ನಂತರ ಅವರು ವೇದದ ಬಲಿಷ್ಠ ಸೂಕ್ತದಲ್ಲಿ ಇರುವ ಮಧ್ವ ಹೆಸರನ್ನು ಆಯ್ದುಕೊಂಡು ಆ ಹೆಸರಿನಲ್ಲಿ ಗ್ರಂಥ ರಚಿಸಿ, ಮಧ್ವಾಚಾರ್ಯರೆಂದು ಪ್ರಸಿದ್ಧರಾದರು. ಅವರು ಪ್ರಚುರಪಡಿಸಿದ ದ್ವೈತ ಸಿದ್ಧಾಂತ ತತ್ವವಾದ ಅಥವಾ ದ್ವೈತ ಮತವೆಂದು ಪ್ರಸಿದ್ಧವಾಗಿದೆ ಎಂದು ಹೇಳಿದರು.

ಮೆರವಣಿಗೆಯಲ್ಲಿ ಆಡಳಿತ ಮಂಡಳಿ ಸದಸ್ಯರು ಮತ್ತು ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಕೆ.ಪಿ.ಎಸ್.ಪ್ರಮೋದ್, ಕಾರ್ಯದರ್ಶಿ ಎನ್. ಸುಧೀಂದ್ರ, ಸಹಕಾರ್ಯದರ್ಶಿ ಆರ್. ಪೂರ್ಣಿಮ ನಾಗರಾಜು, ಖಜಾಂಚಿ ನರಹರಿ ಶೇಷು ನಾಯಕ, ದುರ್ಗಾಪ್ರಸಾದ್ ಕೆದಿಲಾಯ, ಎಸ್. ವೆಂಕಟೇಶ್, ಪ್ರಭಂಜನ್, ಬಿ.ವಿ. ಗುರುರಾಜು ರಾವ್, ಮುರುಳೀಧರ್ ಪೂಜಾರ್, ಆರ್.ವಸುಂಧರಾ ಕೇಶವಮೂರ್ತಿ, ಮಮತ ಸುರೇಶ್ ಬಾಬು, ಜಯಂತಿ ಪ್ರಸಾದ್, ವಿ.ಸಿ. ಕವಿತ, ರಾಧಿಕಾ ಮೂರ್ತಿ ಇದ್ದರು.ಶ್ರೀ ಮಧ್ವನವಮಿ ಸ್ವಾಮಿಗಳ ಆರಾಧನಾ ಕಾರ್ಯಕ್ರಮದ ಅಂಗವಾಗಿ ಹಾಸನದ ಶ್ರೀ ರಾಘವೇಂದ್ರ ಮಠದಲ್ಲಿ ಶ್ರೀ ಮನ್‌ ಮಧ್ವ ಸಂಘದ ವತಿಯಿಂದ ಮಧ್ವಾಚಾರ್ಯರ ಭಾವಚಿತ್ರವನ್ನು ಸಾರೋಟಿನಲ್ಲಿ ಮೆರವಣಿಗೆ ನಡೆಸಲಾಯಿತು. ಇದೇ ವೇಳೆ ಭಕ್ತರು ದೇವರ ನಾಮಗಳನ್ನು ಹಾಡುತ್ತ ಮೆರವಣಿಗೆಯಲ್ಲಿ ಸಾಗಿದರು.