ಮತದಾನ ಪ್ರಮಾಣವನ್ನು ಹೆಚ್ಚಿಸಲು ಪಂಜಿನ ಮೆರವಣಿಗೆ

| Published : Apr 26 2024, 12:45 AM IST

ಸಾರಾಂಶ

ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಏ.೨೬ರಂದು ಮತದಾನ ನಡೆಲಿದ್ದು, ಬಹಿರಂಗ ಪ್ರಚಾರಕ್ಕೆ ಏ.೨೪ ಅಂತಿಮ ದಿನವಾಗಿದ್ದರೂ ಸಹ ಸ್ಪೀಪ್ ಸಮಿತಿಯಿಂದ ಕೊನೆ ಕ್ಷಣದ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಗರದ ತಾಲೂಕು ಕಚೇರಿ ಮುಂಭಾಗದ ಅಂಬೇಡ್ಕರ್ ವೃತ್ತದಲ್ಲಿ ಏರ್ಪಡಿಸಲಾಗಿತ್ತು.

ಚಳ್ಳಕೆರೆ: ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಏ.೨೬ರಂದು ಮತದಾನ ನಡೆಲಿದ್ದು, ಬಹಿರಂಗ ಪ್ರಚಾರಕ್ಕೆ ಏ.೨೪ ಅಂತಿಮ ದಿನವಾಗಿದ್ದರೂ ಸಹ ಸ್ಪೀಪ್ ಸಮಿತಿಯಿಂದ ಕೊನೆ ಕ್ಷಣದ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಗರದ ತಾಲೂಕು ಕಚೇರಿ ಮುಂಭಾಗದ ಅಂಬೇಡ್ಕರ್ ವೃತ್ತದಲ್ಲಿ ಏರ್ಪಡಿಸಲಾಗಿತ್ತು.

ಸಹಾಯಕ ಚುನಾವಣಾಧಿಕಾರಿ ಬಿ.ಆನಂದ ಸ್ಪೀಪ್ ಸಮಿತಿಯಿಂದ ಆಯೋಜನೆಗೊಂಡ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದರು. ಮತದಾನ ಪ್ರತಿಯೊಬ್ಬನ ಹಕ್ಕು ಹಾಗೂ ಕರ್ತವ್ಯವಾಗಿದ್ದು, ಮತದಾನ ಪ್ರಕ್ರಿಯೆಯಲ್ಲಿ ಎಲ್ಲಾ ಮತದಾರರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಮತದಾನ ಮಾಡುವುದು ತಮ್ಮ ಪವಿತ್ರವಾದ ಜವಾಬ್ದಾರಿ ಎಂಬುವುದನ್ನು ಎಲ್ಲರೂ ಅರಿಯಬೇಕು. ಚುನಾವಣಾ ಆಯೋಗದ ನಿರ್ದೇಶನದಂತೆ ಸ್ಪೀಫ್ ಸಮಿತಿ ಮತದಾರ ಜಾಗೃತಿ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ. ಹೆಚ್ಚು ಪ್ರಮಾಣದಲ್ಲಿ ಮತದಾನವಾದರೆ ಈ ಕಾರ್ಯದ ಉದ್ದೇಶ ಸಫಲವಾಗುತ್ತದೆ ಎಂದರು.

ತಹಸೀಲ್ದಾರ್ ರೇಹಾನ್‌ ಪಾಷ, ತಾಲೂಕು ಸ್ಪೀಫ್ ಸಮಿತಿ ಅಧ್ಯಕ್ಷ, ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಲಕ್ಷ್ಮಣ್, ಸ್ಪೀಪ್ ಸಮಿತಿ ಕಾರ್ಯದರ್ಶಿ, ಪೌರಾಯುಕ್ತ ಜೀವನ್‌ ಕಟ್ಟಿಮನಿ, ಹಿರಿಯ ಆರೋಗ್ಯ ನಿರೀಕ್ಷಕರಾದ ಗಣೇಶ್, ಸುನೀಲ್, ಗೀತಾ ಕುಮಾರಿ, ತಿಪ್ಪೇಸ್ವಾಮಿ, ವೀರಭದ್ರಿ, ಚೇತನ್, ಎಸ್.ಎಲ್.ಮಂಜಣ್ಣ, ಚುನಾವಣಾಧಿಕಾರಿ ಇಲಾಖೆ ಶ್ರೀಧರ, ಓಬಳೇಶ ಮುಂತಾದವರು ಉಪಸ್ಥಿತರಿದ್ದರು.