ಸಾರಾಂಶ
ಖಾಸಗಿ ಡೇರಿಗಳು ರೈತರಿಗೆ ೧ ರಿಂದ ೨ರು. ಹಣ ಹೆಚ್ಚಿಗೆ ನೀಡುತ್ತವೆ. ಆದರೆ ರೈತರಿಗೆ ನಯಾಪೈಸೆಯಷ್ಟು ಪ್ರೋತ್ಸಾಹ ಧನ, ರೈತಮಕ್ಕಳಿಗೆ ಸ್ಕಾಲರ್ ಶಿಪ್, ರೈತ ಕಲ್ಯಾಣ ಟ್ರಸ್ಟ್ ವಿಮೆಯಂತಹ ಯಾವುದೇ ಸೌಲಭ್ಯಗಳನ್ನು ಖಾಸಗಿ ಡೇರಿ ನೀಡುವುದಿಲ್ಲ .
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಉತ್ತಮ ಗುಣಮಟ್ಟದ ಹಾಲು ನೀಡುವುದರಿಂದ ಸಂಘದ ಅಭಿವೃದ್ಧಿಯ ಜೊತೆಗೆ ನಿಮ್ಮ ಕುಟುಂಬದ ಅಭಿವೃದ್ಧಿ ಆಗುತ್ತದೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು.ಸಮೀಪದ ಕರಿಯನಕಟ್ಟೆ ಗ್ರಾಮದ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಸಂಘಗಳು ರೈತರಿಗೆ ಸಹಕಾರಿಯಾಗಿದ್ದು, ಉತ್ಪಾದಕರಿಗೆ ಅನುಕೂಲಕರ ಕಾರ್ಯಕ್ರಮಗಳನ್ನು ಸದಾ ನೀಡುತ್ತವೆ. ಸರ್ಕಾರವು ಹಾಲಿಗೆ ಪ್ರೋತ್ಸಾಹ ಧನ ನೀಡುತ್ತದೆ. ಈಗ 5 ರು. ಪ್ರೋತ್ಸಾಹ ಧನ ರೈತರಿಗೆ ನೇರವಾಗಿ ನೀಡುವ ಯೋಜನೆ ಇದೆ ಎಂದರು.ರೈತರು ರಾಸುಗಳ ಪ್ರಾಣಕ್ಕೆ ಕಂಟಕ ತರುವ ಕಳಪೆ ಗುಣಮಟ್ಟದ ಪಶು ಆಹಾರಕ್ಕೆ ಮೊರೆ ಹೋಗದೆ ಒಕ್ಕೂಟ ನೀಡುವ ಪಶು ಆಹಾರಗಳನ್ನು ಬಳಸಿ, ಹಸುಗಳ ಆರೋಗ್ಯ ಕಾಪಾಡಿಕೊಳ್ಳವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಚಾಮುಲ್ ಅಧ್ಯಕ್ಷ ವೈ. ಸಿ. ನಾಗೇಂದ್ರ ಮಾತನಾಡಿ, ಖಾಸಗಿ ಡೇರಿಗಳು ರೈತರಿಗೆ ೧ ರಿಂದ ೨ರು. ಹಣ ಹೆಚ್ಚಿಗೆ ನೀಡುತ್ತವೆ. ಆದರೆ ರೈತರಿಗೆ ನಯಾಪೈಸೆಯಷ್ಟು ಪ್ರೋತ್ಸಾಹ ಧನ, ರೈತಮಕ್ಕಳಿಗೆ ಸ್ಕಾಲರ್ ಶಿಪ್, ರೈತ ಕಲ್ಯಾಣ ಟ್ರಸ್ಟ್ ವಿಮೆಯಂತಹ ಯಾವುದೇ ಸೌಲಭ್ಯಗಳನ್ನು ಖಾಸಗಿ ಡೇರಿ ನೀಡುವುದಿಲ್ಲ ಎಂದರು.ಶಿಲಾನ್ಯಾಸವನ್ನು ಚಾಮುಲ್ ನಿರ್ದೇಶಕ ಬಸವರಾಜು ನೆರವೇರಿಸಿದರೆ, ಶೇಖರಣಾ ವಿಭಾಗವನ್ನು ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ ಉದ್ಘಾಟಿಸಿದರು. ವರ್ಗಿಸ್ ಕುರಿಯನ್ ಭಾವಚಿತ್ರವನ್ನು ನಾಮ ನಿರ್ದೇಶಕ ಕೆ.ಕೆ. ರೇವಣ್ಣ ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ದುಂಡಮ್ಮ, ಮಾಜಿ ಅಧ್ಯಕ್ಷ ಚಿನ್ನಸ್ವಾಮಿ, ಗ್ರಾಪಂ ಸದಸ್ಯೆ ನಿಂಗಮ್ಮ, ಹಾಲಿನ ಡೇರಿ ಮಾಜಿ ಅಧ್ಯಕ್ಷರಾದ ಕೆ. ವಿ. ಮಹೇಶ್, ಚಿನ್ನಮುತ್ತು, ಕೆ.ಎಂ, ಮಾದೇವೇಗೌಡ, ಕೆ. ವಿ. ವೀರಣ್ಣ, ಕೆ. ಸಿ. ಮಹೇಶ್, ಚಾಮುಲ್‌ನ ಪ್ರಭಾರ ವ್ಯವಸ್ಥಾಪಕ ಶರತ್‌ಕುಮಾರ್, ಚಾಮುಲ್ ಸಹಾಯಕ ವ್ಯವಸ್ಥಾಪಕ ಡಾ.ಎನ್.ಅಮರ್, ವಿಸ್ತರಣಾಧಿಕಾರಿ ಮುತ್ತು , ಆಡಳಿತಾಧಿಕಾರಿ ರಾಜು ಪಿ., ಚೂಡಾ ಮಾಜಿ ಅಧ್ಯಕ್ಷ ಕೆ ಪುಟ್ಟಸ್ವಾಮಿಗೌಡ, ಮುಖಂಡರಾದ ಚಿಕ್ಕಣ್ಣ, ಗೋವಿಂದಗೌಡ, ಚಂದಾಸೇಗೌಡ, ಡಿ. ನಾಗರಾಜು, ರಮೇಶ್, ತಾಯಮ್ಮ, ರುದ್ರಮ್ಮ, ಕೆ .ಸಿ. ರಾಘವೇಂದ್ರ, ಜಯಪ್ರಕಾಶ್, ಮುಖ್ಯ ಕಾರ್ಯನಿರ್ವಾಹಕ ರಾಜು ಸಿ., ಹಾಲು ಪರೀಕ್ಷಕ ರಾಜು ಆರ್. ಸೇರಿ ಹಾಲು ಉತ್ಪಾದಕರು, ಗ್ರಾಮಸ್ಥರು ಇದ್ದರು.