ವಿಶ್ವಮಾನ್ಯ ಬಾಬಾ ಸಾಹೇಬ್ ಅಂಬೇಡ್ಕರ್’ ಪುಸ್ತಕ ಬಿಡುಗಡೆ

| Published : Sep 02 2024, 02:00 AM IST

ಸಾರಾಂಶ

, ಸಮಾಜದಲ್ಲಿನ ಶೋಷಣೆ ವಿರುದ್ಧ ಹೊರಹೊಮ್ಮುತ್ತಿದ್ದ ಮೊದಲ ಧ್ವನಿ ಮಹೇಶ್ ಚಂದ್ರಗುರು ಅವರದ್ದಾಗಿತ್ತು

ಕನ್ನಡಪ್ರಭ ವಾರ್ತೆ ಮೈಸೂರುಮಹೇಶ್ ಚಂದ್ರಗುರು ಆಶಯ ಮುಂದುವರೆಸಿಕೊಂಡು ಆದರ್ಶ ಪಾಲಿಸಬೇಕಿದೆ ಎಂದು ವಿಚಾರವಾದಿ ಪ್ರೊ.ಕೆ.ಎಸ್. ಭಗವಾನ್ ಹೇಳಿದರು.ಮಾನಸ ಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿ.ವಿ ಸಂಶೋಧಕರ ಸಂಘ, ವಿದ್ಯಾರ್ಥಿ ಹಾಗೂ ಪ್ರಗತಿಪರ ಸಂಘಟನೆ ಸಂಯುಕ್ತ ಆಶ್ರಯಲ್ಲಿ ಭಾನುವಾರ ನಡೆದ ಪ್ರೊ.ಬಿ.ಪಿ. ಮಹೇಶ್ ಚಂದ್ರಗುರು ಅವರ ವಿಶ್ವಮಾನ್ಯ ಬಾಬಾ ಸಾಹೇಬ್ ಅಂಬೇಡ್ಕರ್’ ಪುಸ್ತಕ ಬಿಡುಗಡೆ ಹಾಗೂ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗುರು ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರಿಂದ ಬಹಳ ಪ್ರಭಾವಿತರಾಗಿದ್ದರು. ಸದಾ ಅಧ್ಯಯನಶೀಲತೆ ಮತ್ತು ಆಲೋಚನೆಯಲ್ಲಿದ್ದ ಅವರು ಗಾಢ ಚಿಂತನೆ ಹೊಂದಿದ್ದರು. ಈಗ ನಾವು ಅವರ ಆಶಯ ಮುಂದುವರೆಸಬೇಕು ಎಂದರು.ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಾತನಾಡಿ, ಸಮಾಜದಲ್ಲಿನ ಶೋಷಣೆ ವಿರುದ್ಧ ಹೊರಹೊಮ್ಮುತ್ತಿದ್ದ ಮೊದಲ ಧ್ವನಿ ಮಹೇಶ್ ಚಂದ್ರಗುರು ಅವರದ್ದಾಗಿತ್ತು. ದಮನಿತರ, ಶೋಷಿತರ ಪರವಾಗಿ ಬೆಳಕಾಗಿದ್ದರು ಎಂದರು.ಗಾಂಧಿನಗರದ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಅಂಬೇಡ್ಕರ್ ವಾದಿಗಳು ಅವಕಾಶವಾದಿಗಳಾಗಿ ಕೈಚೆಲ್ಲಿದ್ದಾರೆ. ಈ ಅವಕಾಶವಾದಿತನ ಶಾಶ್ವತ ಗುಲಾಮಗಿರಿಗೆ ತಳ್ಳಿದೆ. ಸಾಧಕರು ಸಮಯಸಾಧಕರಾದಾಗ ಸಮಾಜ ಏನು ಆಗಲಿದೆ ಎಂಬುದನ್ನು ವಿಶಿಷ್ಟವಾಗಿ ಕೃತಿಯಲ್ಲಿ ದಾಖಲು ಮಾಡಿದ್ದಾರೆ ಎಂದು ತಿಳಿಸಿದರು.ಮಾಜಿ ಮೇಯರ್ ಪುರುಷೋತ್ತಮ್, ಮೈಸೂರು ವಿ.ವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ.ಡಿ. ಆನಂದ್, ಪ್ರಸಾರಂಗ ನಿರ್ದೇಶಕ ಪ್ರೊ. ನಂಜಯ್ಯ ಹೊಂಗನೂರು, ಹಿರಿಯ ಪತ್ರಕರ್ತ ಕೆ. ಶಿವಕುಮಾರ್, ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್, ಮಹೇಶ್ ಚಂದ್ರಗುರು ಪತ್ನಿ ಹೇಮಾವತಿ, ಎಂ. ದಿಲೀಪ್ ನರಸಯ್ಯ ಇದ್ದರು.