ನಗರದ ಪ್ರತಿಷ್ಠಿತ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಣಿಶಾಸ್ತ್ರ ವಿಭಾಗದ ಪ್ರೊ.ಎಂ.ಪಿ.ಕೃಷ್ಣ ಅವರನ್ನು ಕಾಲೇಜಿನ ವತಿಯಿಂದ ಬೀಳ್ಕೊಡಲಾಯಿತು.

ಕನ್ನಡಪ್ರಭವಾರ್ತೆ ಮಡಿಕೇರಿ

ನಗರದ ಪ್ರತಿಷ್ಠಿತ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಣಿಶಾಸ್ತ್ರ ವಿಭಾಗದ ಪ್ರೊ.ಎಂ.ಪಿ.ಕೃಷ್ಣ ಅವರನ್ನು ಕಾಲೇಜಿನ ವತಿಯಿಂದ ಬೀಳ್ಕೊಡಲಾಯಿತು.

ಕಾಲೇಜು ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ.ಮೇಜರ್ ರಾಘವ ಬಿ. ತಮ್ಮ ಹುಟ್ಟೂರಿನ ಈ ಕಾಲೇಜ್ ನಲ್ಲಿ ಪದವಿ ಪಡೆದ ಪ್ರೊ.ಎಂ.ಪಿ.ಕೃಷ್ಣ ಅವರು ಇದೇ ಕಾಲೇಜ್ ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದುತ್ತಿರುವುದು ಹೆಮ್ಮೆ ಎನಿಸಿದೆ ಎಂದರು.

ಕಾಲೇಜ್ ನ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವಲ್ಲಿ ಕೈಜೋಡಿಸುತ್ತಿದ್ದ ಪ್ರೊ.ಎಂ.ಪಿ.ಕೃಷ್ಣ ಅವರ ಸೇವೆ ಶ್ಲಾಘನೀಯ. ಸೇವಾ ಮನೋಭಾವ ಮತ್ತು ಬೋಧಕರೊಂದಿಗಿನ ಒಡನಾಟ ಸದಾ ಹಚ್ಚಹಸಿರಾಗಿರಲಿದೆ. ಇವರ ನಿವೃತ್ತಿ ಜೀವನ ಸುಖಕರ ಹಾಗೂ ಸಮೃದ್ಧಿಯಿಂದ ಕೂಡಿರಲಿ ಎಂದು ಹಾರೈಸಿದರು.ಹಿಂದಿ ವಿಭಾಗದ ಪ್ರೊ.ಶ್ರೀಧರ್ ಆರ್. ಹೆಗ್ಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಪ್ರೊ.ಗಾಯತ್ರಿ ದೇವಿ ಎ. ಅವರು ಪ್ರಾರ್ಥಿಸಿದರು.