ಪ್ರೊ. ಕೃಷ್ಣಪ್ಪ ಪ್ರತಿಮೆ ಅನಾವರಣದ ಭಿತ್ತಿಪತ್ರ ಬಿಡುಗಡೆ

| Published : Jun 04 2024, 12:31 AM IST

ಸಾರಾಂಶ

ಯಾದಗಿರಿ ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ರಾಜ್ಯ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ ಕಲ್ಯಾಣ ಕರ್ನಾಟಕದ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಸಭೆ ಜರುಗಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ರಾಜ್ಯ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ ಕಲ್ಯಾಣ ಕರ್ನಾಟಕದ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಸಭೆ ಜರುಗಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥಾಪಕರೂ ಆದ ರಾಜ್ಯಾಧ್ಯಕ್ಷ ಪರಶುರಾಮ ನೀಲ ನಾಯಕ ಅವರು, ದಲಿತ ಚಳುವಳಿಗೆ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಹಾಗೂ ಪ್ರೊ. ಬಿ. ಕೃಷ್ಣಪ್ಪ ಅವರ 86ನೇ ಜಯಂತಿ ಕಾರ್ಯಕ್ರಮದ ಅಂಗವಾಗಿ ಜೂ.9ರಂದು ಬಾಗಲಕೋಟೆಯ ನವನಗರದ ಬುದ್ಧಭೂಮಿಯಲ್ಲಿ ಪ್ರೊ. ಬಿ. ಕೃಷ್ಣಪ್ಪ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. ದಸಂಸ ಜಿಲ್ಲಾ ಸಂಚಾಲಕ ಶರಣು ಎಸ್. ನಾಟೇಕರ್, ರಾಜ್ಯ ಸಂಘಟನಾ ಸಂಚಾಲಕ ಭೀಮರಾಯ ಸಿಂಧಿಗೇರಿ, ಓಂಕಾರ ಕುಪ್ಪಗಲ್ ಬಳ್ಳಾರಿ, ಬಳ್ಳಾರಿ ಜಿಲ್ಲಾ ಸಂಚಾಲಕ ನಿಂಗಪ್ಪ, ಕಲಬರಗಿ ಜಿಲ್ಲಾಧ್ಯಕ್ಷ ಕಾಶಿನಾಥ ಶೆಳ್ಳಗಿ, ವಿಭಾಗೀಯ ಸಂಚಾಲಕ ಶಿವಶಂಕರ, ರಾಜ್ಯ ಸಮಿತಿ ಸದಸ್ಯರಾದ ಶಿವಶರಣಪ್ಪ ವಾಡಿ, ರಾಜ್ಯ ಮಹಿಳಾ ಸಂಘಟನಾ ಸಂಚಾಲಕ ಮಂಜುಳಾ ಸುರಪುರ, ಯಾದಗಿರಿ ತಾಲೂಕು ಸಂಚಾಲಕ ಶರಣಪುರ, ಗುರುಮಠಕಲ್ ತಾಲೂಕು ಸಂಚಾಲಕ ಸಾಬಣ್ಣ ಬಿ. ಯಂಪಾಡ, ವಡಗೇರಾ ತಾಲೂಕು ಸಂಚಾಲಕ ಸಲೀಮ್ ಅಹ್ಮದ್, ಸುರಪುರ ಸಂಚಾಲಕ ಬಸವರಾಜ, ಶಹಾಪುರ ಸಂಚಾಲಕ ಮಲ್ಲು ನಾಟೇಕರ್ ಇತರರಿದ್ದರು.