ಸಾರಾಂಶ
ಬಸವೇಶ್ವರ ಪ್ರಸ್ತುತತೆ, ವಿಚಾರ ನಾಡಿನ ಜನರಿಗೆ ತಿಳಿಸುವಲ್ಲಿ ಪ್ರೊ. ಸಿ.ಎಂ. ಕುಂದಗೋಳ ಪಾತ್ರ ಅನನ್ಯ
ಧಾರವಾಡ: ಯಾವುದೇ ವ್ಯಕ್ತಿ ಪ್ರಾಮಾಣಿಕವಾಗಿ, ಅರ್ಪಣಾ ಮನೋಭಾವದಿಂದ ಕೆಲಸ ಮಾಡಿದಾಗ ಆ ವ್ಯಕ್ತಿಯು ಮಾಡಿದ ಕಾರ್ಯ ಸಮಾಜದಲ್ಲಿ ಗುರುತಿಸಲ್ಪಡುತ್ತದೆ ಎಂದು ಕರ್ನಾಟಕ ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ.ಬಿ.ಗುಡಸಿ ಹೇಳಿದರು.
ಕವಿವಿ ಬಸವೇಶ್ವರ ಪೀಠದ ಸಂಯೋಜಕ ಪ್ರೊ. ಸಿ.ಎಂ. ಕುಂದಗೋಳ ರಾಜ್ಯ ಹಿಂದುಳಿದ ಅಭಿವೃದ್ಧಿ ಆಯೋಗದ ಸದಸ್ಯರಾದ ಹಿನ್ನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಬಸವೇಶ್ವರ ಪೀಠವನ್ನು ದೇಶದಲ್ಲಿ ಮಾದರಿ ಪೀಠವನ್ನಾಗಿ ಮಾಡಿದ ಕೀರ್ತಿ ಪ್ರೊ. ಸಿ.ಎಂ. ಕುಂದಗೋಳ ಅವರಿಗೆ ಸಲ್ಲುತ್ತದೆ ಎಂದರು.ಹಣಕಾಸು ಅಧಿಕಾರಿ ಪ್ರೊ. ಸಿ.ಕೃಷ್ಣಮೂರ್ತಿ ಮಾತನಾಡಿ, ಬಸವೇಶ್ವರ ಪ್ರಸ್ತುತತೆ, ವಿಚಾರ ನಾಡಿನ ಜನರಿಗೆ ತಿಳಿಸುವಲ್ಲಿ ಪ್ರೊ. ಸಿ.ಎಂ. ಕುಂದಗೋಳ ಪಾತ್ರ ಅನನ್ಯ ಎಂದರು. ಡಾ.ಮಲ್ಲಿಕಾರ್ಜುನ ಪಾಟೀಲ ಮಾತನಾಡಿದರು.
ಪ್ರೊ. ಸಿ.ಎಂ.ಕುಂದಗೋಳ ಸನ್ಮಾನ ಸ್ವೀಕರಿಸಿ, ದಾಸೋಹ ತತ್ವದ ಅನುಗುಣವಾಗಿ ಹಲವಾರು ಪುಸ್ತಕ ಪ್ರಕಟಣೆ, ವಚನಾಮೃತ, ವಚನಗಳಲ್ಲಿ ವ್ಯಕ್ತಿತ್ವ ವಿಕಾಸ ಎಂಬ ವಿಷಯದ ವಿವಿಧ ಕಾಲೇಜುಗಳಲ್ಲಿ ಹಲವಾರು ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದ್ದು ತೃಪ್ತಿ ತಂದಿದೆ ಎಂದರು.ಪ್ರೊ. ಸಿ.ಕೃಷ್ಣಮೂರ್ತಿ, ಡಾ. ವೀರಣ್ಣ ರಾಜೂರ, ಶಿವಾನಂದ ಶೆಟ್ಟರ್, ಪ್ರೊ.ಬಿ.ಎಂ. ಪಾಟೀಲ, ಪ್ರೊ. ಎಸ್.ಟಿ.ನಂದಿಬೇವೂರ, ಪ್ರೊ. ವೇದಮೂರ್ತಿ, ಪ್ರೊ. ಮಲ್ಲಿಕಾರ್ಜುನ ಪಾಟೀಲ, ಪ್ರೊ.ಪವಾರ್, ಪ್ರೊ. ರವೀಂದ್ರ ಕಾಂಬಳೆ ಮತ್ತಿತರರು ಇದ್ದರು.