ರಾಜ್ಯ ರೈತ ಸಂಘದಿಂದ ಪ್ರೊ.ಎಂ.ಡಿ.ನಂಜುಂಡಸ್ವಾಮಿ 89ನೇ ಜನ್ಮದಿನಾಚರಣೆ

| Published : Feb 14 2025, 12:35 AM IST

ರಾಜ್ಯ ರೈತ ಸಂಘದಿಂದ ಪ್ರೊ.ಎಂ.ಡಿ.ನಂಜುಂಡಸ್ವಾಮಿ 89ನೇ ಜನ್ಮದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ಬೆನ್ನು ಬಗ್ಗಿಸಿ ದುಡಿಯುತ್ತಾ ನಿತ್ಯ ನಿರಂತರ ಶೊಷಣೆಗೆ ಒಳಗಾಗುತ್ತಿದ್ದ ರೈತರ ಬದುಕಿನಲ್ಲಿ ಜಾಗೃತಿ ಮೂಡಿಸಿ ಘನತೆ ಮತ್ತು ಸ್ವಾಭಿಮಾನದ ಬೊಧನೆ ಮೂಲಕ ಎದೆಯುಬ್ಬಿಸಿ ನಡೆಯುವುದನ್ನು ಕಲಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ರಾಜ್ಯ ರೈತ ಸಂಘದ ಸಂಸ್ಥಾಪಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 89ನೇ ಜನ್ಮ ದಿನಾಚರಣೆಯನ್ನು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು.

ಪಟ್ಟಣದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ರೈತ ಚೈತನ್ಯಕೇಂದ್ರದಲ್ಲಿ ಕಸಾಪ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ನಾಗರೀಕರು, ರೈತರು, ವಿದ್ಯಾರ್ಥಿಗಳು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ವಿಶ್ವ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ಬೆನ್ನು ಬಗ್ಗಿಸಿ ದುಡಿಯುತ್ತಾ ನಿತ್ಯ ನಿರಂತರ ಶೊಷಣೆಗೆ ಒಳಗಾಗುತ್ತಿದ್ದ ರೈತರ ಬದುಕಿನಲ್ಲಿ ಜಾಗೃತಿ ಮೂಡಿಸಿ ಘನತೆ ಮತ್ತು ಸ್ವಾಭಿಮಾನದ ಬೊಧನೆ ಮೂಲಕ ಎದೆಯುಬ್ಬಿಸಿ ನಡೆಯುವುದನ್ನು ಕಲಿಸಿದರು ಎಂದು ಗುಣಗಾನ ಮಾಡಿದರು.

‘ರೈತ ಸಾಲಗಾರನಲ್ಲ ಸರ್ಕಾರವೇ ಬಾಕಿದಾರ’ ಎಂಬ ಉದ್ಗೋಷ ಮೊಳಗಿಸಿ ಸರ್ಕಾರದ ಅವೈಜ್ಞಾನಿಕ ಸಾಲನೀತಿ ಖಂಡಿಸಿ ಸಮಗ್ರ ಕೃಷಿ ನೀತಿ ತಂದು ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹಿಸಿದ್ದನ್ನು ಗಣ್ಯರು ಉಲ್ಲೇಖಿಸಿದರು.

ನೀರಾ ನೀತಿ ಖಂಡಿಸಿ ನೀರಾ ಚಳವಳಿ, ವಿಶ್ವ ವಾಣಿಜ್ಯ ಒಪ್ಪಂದ ವಿರೋಧಿಸಿ ಬೃಹತ್ ರೈತ ಸಮಾವೇಶ, ಕುಲಾಂತರಿ ಬೀಜ ತಳಿ ವಿರೊಧಿಸಿ ಡೈರಕ್ಟ್ ಆಕ್ಷನ್‌ಗೆ ಕರೆ ನೀಡಿ, ಕೆಂಟುಕಿ ಚಿಕನ್ ದ್ವಂಸಗೊಳಿಸಿದ್ದನ್ನು ನೆನೆದರು. ಗುಣಮಟ್ಟದ ವಿದ್ಯುತ್ ನೀಡಲು ಆಗ್ರಹಿಸಿ ಕರ ನಿರಾಕರಣೆ ಚಳವಳಿಗೆ ಕರೆನೀಡಿದ್ದು, ಮರು ಜಪ್ತಿ ಚಳವಳಿ ಪ್ರಮುಖವಾದವು ಎಂದು ಸ್ಮರಿಸಿದರು.

ತಾತ್ವಿಕ ಭಿನ್ನಾಭಿಪ್ರಾಯದಿಂದ ಇಬ್ಬಾಗವಾಗಿರುವ ರೈತ ಸಂಘಟನೆ ಏಕಿಕೃತಗೊಂಡು ರೈತ ಸರ್ಕಾರ ಸ್ಥಾಪಿಸುವಲ್ಲಿ ಶ್ರಮಿಸಬೇಕು ಎಂದು ಮುಖಂಡರು ಕರೆ ನೀಡಿದರು. ಭಾರತದ ಸಂವಿಧಾನ ರಕ್ಷಣಾ ಸಮಿತಿ ಕಾರ್ಯಕರ್ತರು ಪ್ರೊ.ಎಂ.ಡಿ. ನಂಜುಂಡಸ್ವಾಮಿ ಜಯಂತಿ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಯಂಯಿಯಲ್ಲಿ ಭಾಗಿಯಾದ ವೇಳೆ ರಾಜ್ಯ ಘಟಕದ ಉಪಾಧ್ಯಕ್ಷ ಕೃಷ್ಣ, ಜಿಲ್ಲಾಧ್ಯಕ್ಷ ರವೀಂದ್ರ. ತಾಲೂಕು ಅಧ್ಯಕ್ಷ ಶಿವಲಿಂಗೇಗೌಡ, ಕಾರ್ಯದರ್ಶಿ ಬಸವರಾಜ್, ಗೌರವಾಧ್ಯಕ್ಷ ಶಂಕರೇಗೌಡ, ಉಪಾಧ್ಯಕ್ಷ ಚನ್ನಪ್ಪ ಉಪ್ಪಿನಕೆರೆ ಶಿವರಾಮೇಗೌಡ, ನಾರಾಯಣ್, ಮದ್ದೂರು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸಿದ್ದೇಗೌಡ, ಮಂಡ್ಯ ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಬೊರೇಗೌಡ ಇದ್ದರು.

ಕಸಾಪ ವತಿಯಿಂದ ಆಚರಣೆ:

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮುಖಾಂತರ ಆಚರಿಸಲಾಯಿತು.

ಕಸಾಪ ತಾಲೂಕು ಕೋಣಸಾಲೆ ಸುನೀಲ್ ಕುಮಾರ್ ಮಾತನಾಡಿ, ನಂಜುಂಡಸ್ವಾಮಿ ಅವರು ಹಾಕಿಕೊಟ್ಟ ರೈತ ಚಳವಳಿ ಭದ್ರ ಬುನಾದಿಯು ಇನ್ನೂ ಗಟ್ಟಿಯಾಗಿ ನೆಲೆಗೊಂಡು ಅವರ ಆಶಯವು ಈಡೇರಲಿ ಎಂದರು.

ನಾನು ಕೂಡ 1982ರಲ್ಲಿ ವಿದ್ಯಾರ್ಥಿ ರೈತ ಚಳವಳಿಯಲ್ಲಿ ಭಾಗವಹಿಸುವ ಮೂಲಕ ಮದ್ದೂರಿನ ಧ್ವಜ ಸತ್ಯಾಗ್ರಹ ಸಾಧದಿಂದ ಬೆಂಗಳೂರಿನ ಕಬ್ಬನ್ ಪಾರ್ಕ್ ವರೆಗೆ ಮೂರು ದಿನಗಳ ಪಾದಯಾತ್ರೆ, ಚಳವಳಿಯಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಂಡರು.

ಈ ವೇಳೆ ಕಸಾಪ ಮಾಜಿ ಅಧ್ಯಕ್ಷ ಅಪೂರ್ವಚಂದ್ರ, ಉಪಾಧ್ಯಕ್ಷ ಶ್ರೀಧರ್ ಕುದುರೆಗುಂಡಿ, ಸಂಘಟನಾ ಕಾರ್ಯದರ್ಶಿ ಎಂ.ರಮೇಶ್, ಸೊಳ್ಳೆಪುರ ರಮೇಶ್, ದಿನೇಶ್ ಬಾಬು ಪ್ರಗತಿಪರ ಸಂಘಟನೆಯ ನ.ಲಿ.ಕೃಷ್ಣ ಮತ್ತು ಆಶಿಪ್ ಪಾಷಾ ಭಾಗವಹಿಸಿದ್ದರು.