ಸಾರಾಂಶ
ಕೆ.ಆರ್. ನಗರ : ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ರಾಜಕಾರಣದ ಜತೆಗೆ ಸಾಹಿತ್ಯ ಕೃಷಿ ಹಾಗೂ ಬರವಣಿಗೆಯನ್ನು ಮೈಗೂಡಿಸಿಕೊಂಡಿದ್ದು ಇದು ದೇಶದ ಇತರ ರಾಜಕಾರಣಿಗಳಿಗೆ ಮಾದರಿ ಎಂದು ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ. ಮುಜಾಫರ್ ಅಸ್ಸಾದಿ ಹೇಳಿದರು.
ಪಾರ್ಲಿಮೆಂಟ್ ಪ್ರದಕ್ಷಿಣೆಗಳು ಪುಸ್ತಕ ಬಿಡುಗಡೆಗಾಗಿ ಲಂಡನ್ ನಗರಕ್ಕೆ ತೆರಳುತ್ತಿರುವ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರಿಗೆ ಪಟ್ಟಣದ ಕೃಷ್ಣ ಮಂದಿರದಲ್ಲಿ ಅಭಿಮಾನಿಗಳು ಮತ್ತು ಸ್ನೇಹಿತರು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ರಾಜಕಾರಣಿಗಳು ತಮ್ಮ ಬದುಕು ಮತ್ತು ಸೇವೆಯ ಜತೆಗೆ ಸಾಧನೆಯನ್ನು ಪುಸ್ತಕ ರೂಪದಲ್ಲಿ ದಾಖಲಿಸಿದರೆ ಅದು ಭವಿಷ್ಯದಲ್ಲಿ ಇತರರಿಗೆ ಮಾರ್ಗದರ್ಶನದ ದಾರಿ ದೀಪವಾಗಲಿದ್ದು ಈ ಕೆಲಸವನ್ನು ಯುವ ರಾಜಕಾರಣಿಗಳು ಚಾಚು ತಪ್ಪದೆ ಮಾಡಬೇಕು ಎಂದರು.
ದೇಶದ ಸ್ವರೂಪ ಬದಲಿಸಿದ ಹಳೆಯ ಪಾರ್ಲಿಮೆಂಟ್ ಭಾರತದ ಜನರಿಗೆ ದೇವಾಲಯದಂತೆ ಇದ್ದು ಅದರ ಮೇಲೆ ನಮಗೆ ಸದಾ ಗೌರವ ಮತ್ತು ಭಕ್ತಿ ಇರಬೇಕು. ನಮಗೆ ಬದುಕು ಕಲ್ಪಿಸಿ ಕಟ್ಟಿಕೊಟ್ಟ ಆಸ್ಮಿತೆಯ ಸಂಕೇತವಾಗಿರುವ ಅದು ನಿತ್ಯ ನಿರಂತರವಾಗಿರಲಿ ಎಂದು ಅವರು ಆಶಿಸಿದರು.
ಪಾಶ್ಚಾತ್ಯ ದೇಶಗಳ ಸಂಸತ್ತುಗಳಲ್ಲಿ ಸಂಸದರು ಗಂಭೀರವಾಗಿ ಚರ್ಚಿಸಿ ಸರಳ ಜೀವನ ನಡೆಸಿ ಉತ್ತಮ ಕೆಲಸ ಮಾಡಿ ಸಂಸತ್ತಿನ ಗೌರವ ಹೆಚ್ಚಿಸುತ್ತಾರೆ. ಆದರೆ ನಮ್ಮಲ್ಲಿ ಸಂಸತ್ತಿನ ಘನತೆ ಅದೋಗತಿಗಿಳಿದಿರುವುದು ವಿಷಾದನೀಯ ಎಂದು ಅವರು ನುಡಿದರು.
ಹತ್ತಾರು ದೇಶಗಳ ಸಂಸತ್ತಿನ ರೀತಿ, ರಿವಾಜು ಮತ್ತು ಆಡಳಿತ ವೈಖರಿಯ ಬಗ್ಗೆ ಅಧ್ಯಯನ ಮಾಡಿ ಅದನ್ನು ಪುಸ್ತಕದಲ್ಲಿ ದಾಖಲಿಸಿರುವ ಎಚ್. ವಿಶ್ವನಾಥ್ ನಮ್ಮ ನಡುವೆ ಬಿನ್ನವಾಗಿ ನಿಲ್ಲುವ ವ್ಯಕ್ತಿತ್ವದ ಭಿನ್ನ ರಾಜಕೀಯ ನಾಯಕ ಎಂದು ಅವರು ಬಣ್ಣಿಸಿದರು.
ಲೇಖಕಿ ಶುಭದ ಪ್ರಸಾದ್ ಎಚ್. ವಿಶ್ವನಾಥ್ ಅವರ ಸಾಹಿತ್ಯ ಜೀವನ ಮತ್ತು ರಾಜಕೀಯ ಸಾಧನೆಯ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಕಾಶಕ ಸೃಷ್ಟಿ ನಾಗೇಶ್ ಅವರನ್ನು ಸನ್ಮಾನಿಸಲಾಯಿತು.
ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್. ಚನ್ನಬಸಪ್ಪ, ಮಾಜಿ ಸದಸ್ಯರಾದ ಎಂ.ಟಿ. ಕುಮಾರ್, ಅಮಿತ್ ವಿ. ದೇವರಹಟ್ಟಿ, ನವ ನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ, ಮೂಳೆ ತಜ್ಞ ಡಾ. ಮೆಹಬೂಬ್ ಖಾನ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಜಿ. ಸುಬ್ರಹ್ಮಣ್ಯ, ಸದಸ್ಯ ಕೆ.ಪಿ. ಪ್ರಭುಶಂಕರ್, ಮಾಜಿ ಸದಸ್ಯರಾದ ಕೆ.ಎಸ್. ಉಮಾಶಂಕರ್, ಪೆರಿಸ್ವಾಮಿ, ಹಿರಿಯ ಪತ್ರಕರ್ತ ಕೆ. ಶಿವಕುಮಾರ್, ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಎಚ್.ಡಿ. ಪ್ರಭಾಕರ ಜೈನ್, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೈ.ಎಸ್. ಕುಮಾರ್, ತಾಲೂಕು ಕಸಾಪ ಅಧ್ಯಕ್ಷ ಡಿಂಡಿಮ ಶಂಕರ್, ಹಿಂದೂ ಸೇನಾ ಸಮಿತಿ ಅಧ್ಯಕ್ಷ ಯು. ಕೃಷ್ಣಭಟ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಸ್.ಎಸ್. ಸಂದೇಶ್, ಸಾಲಿಗ್ರಾಮ ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಬೆಣಗನಹಳ್ಳಿ ಪ್ರಸನ್ನ, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಸಾಹಿತಿಗಳಾದ ಹೆಗ್ಗಂದೂರು ಪ್ರಭಾಕರ್, ತಿಪ್ಪೂರು ಕೃಷ್ಣ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅರ್ಜುನಹಳ್ಳಿ ಗಣೇಶ್, ಸುಕೃತಾ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವೈ.ಆರ್. ಶಿವಕುಮಾರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ, ನಿರ್ದೇಶಕ ಕೆ.ಎಚ್. ಬುಡೀಗೌಡ, ಜಿಲ್ಲಾ ನಿರ್ದೇಶಕ ದಿಡ್ಡಹಳ್ಳಿ ಬಸವರಾಜು, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ. ರವಿಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ. ನಟರಾಜು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ, ದಲಿತ ಮುಖಂಡ ಹನಸೋಗೆ ನಾಗರಾಜು, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ಪಿ. ಆನಂದ್, ಕ್ರೈಸ್ತ ಮುಖಂಡ ರವೀಶ್ ಮೊದಲಾದವರು ಇದ್ದರು.