ಕಾರ್ಖಾನೆಯ ಲಾಭ, ನಷ್ಟ ಎಲ್ಲವೂ ನಿಮ್ಮದೇ

| Published : Nov 16 2024, 12:35 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚಡಚಣ ಸಕ್ಕರೆ ಕಾರ್ಖಾನೆ ರೈತರದ್ದು, ಲಾಭವು ನಿಮ್ಮದೇ, ನಷ್ಟವು ನಿಮ್ಮದೇ ರೈತರು ತಮ್ಮ ಫಸಲನ್ನು ಸಂಪೂರ್ಣ ದಿನಗಳು ತುಂಬಿದ ಅಂದರೆ 12 ತಿಂಗಳು ಬಲಿತ ಕಬ್ಬನ್ನು ಕಟಾವು ಮಾಡಿದರೆ ಒಳ್ಳೆಯ ಲಾಭದಾಯಕ ಉತ್ಪಾದನೆ, ಇಳುವರಿ ಸಾಧ್ಯ. ಇಲ್ಲವಾದಲ್ಲಿ ಸಂಸ್ಥೆ ಸಂಪೂರ್ಣ ನಷ್ಟಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಚಡಚಣ

ಸಕ್ಕರೆ ಕಾರ್ಖಾನೆ ರೈತರದ್ದು, ಲಾಭವು ನಿಮ್ಮದೇ, ನಷ್ಟವು ನಿಮ್ಮದೇ ರೈತರು ತಮ್ಮ ಫಸಲನ್ನು ಸಂಪೂರ್ಣ ದಿನಗಳು ತುಂಬಿದ ಅಂದರೆ 12 ತಿಂಗಳು ಬಲಿತ ಕಬ್ಬನ್ನು ಕಟಾವು ಮಾಡಿದರೆ ಒಳ್ಳೆಯ ಲಾಭದಾಯಕ ಉತ್ಪಾದನೆ, ಇಳುವರಿ ಸಾಧ್ಯ. ಇಲ್ಲವಾದಲ್ಲಿ ಸಂಸ್ಥೆ ಸಂಪೂರ್ಣ ನಷ್ಟಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

2024-25ನೇ ಸಾಲಿನ ಮರಗೂರ ಶ್ರೀ ಭೀಮಾಶಂಕರ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮು ಪ್ರಾರಂಭೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಸಂಸ್ಕೃತಿ, ಸಂಪ್ರದಾಯದಂತೆ ಇಂಡಿ, ಸಿಂದಗಿ, ಚಡಚಣ ಎಲ್ಲ ತಾಲೂಕಿನ ಮಠಾಧೀಶರ ಉಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಸಂಸ್ಥೆಗೆ ಲಾಭವಾದಾಗ ಹೆಚ್ಚಿನ ರೀತಿಯಲ್ಲಿ ರೈತರಿಗೆ ಸಹಾಯ ಮಾಡಲು ಸಾಧ್ಯ. ನಾವು ಪ್ರತಿ ವರ್ಷ ₹ 55 ಕೋಟಿ ಖರ್ಚು ಮತ್ತು ಬ್ಯಾಂಕಿನ ಹಣ ಕಟ್ಟಬೇಕಾಗುತ್ತದೆ. ಇಲ್ಲಿವರೆಗೂ ನಾವು ಬ್ಯಾಂಕಿನ ವ್ಯವಹಾರ ಅಚ್ಚುಕಟ್ಟಾಗಿ ಇಟ್ಟಿದ್ದು, ಇನ್ನು ಮುಂದೆಯೂ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವೆ. ಸರ್ಕಾರ ಮತ್ತು ರೈತರ ಸಹಾಯವಿಲ್ಲದೇ ಏನು ಮಾಡಲು ಸಾಧ್ಯ ಇಲ್ಲ. ಸಂಸ್ಥೆಗೆ ಹಲವಾರು ಜನರು ಮತ್ತು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿರುವ ಸಹಾಯಕ್ಕೆ ನಾನು ಚಿರಋಣಿ, ನಾವು ಇಲ್ಲಿಯವರೆಗೆ ಎಫ್‌ಆರ್‌ಪಿ ನಿಗದಿಗಿಂತ ಹೆಚ್ಚಿನ ದರವನ್ನೇ ರೈತರ ಖಾತೆಗೆ ವರ್ಗಾಯಿಸಿದ್ದೇವೆ. ಇನ್ನು ಮುಂದೆಯೂ ರೈತರಿಗೆ ಯೋಗ್ಯ ದರವನ್ನೇ ನೀಡುವುದಾಗಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಆಲಮೇಲದ ಗುರುಲಿಂಗ ಶಿವಾಚಾರ್ಯ, ಗುರೂಪಾದೇಶ್ವರ ಶಿವಾಚಾರ್ಯ ಹತ್ತಳ್ಳಿ ಹಾವಿನಾಳ, ತಡವಲಗಾ ರಾಚೋಟೇಶ್ವರ ಶಿವಾಚಾರ್ಯ, ತದ್ದೇವಾಡಿಯ ಮಹಾಂತೇಶ ಹಿರೇಮಠ, ಎಸಿ ಅಬೀದ್‌ ಗದ್ಯಾಳ, ಝಳಕಿ ಠಾಣಾ ಅಧಿಕಾರಿ ಎಸ್.ಬಿ.ಪಾಟೀಲ, ಮಲ್ಲನಗೌಡ ಪಾಟೀಲ, ಜೆಟ್ಟಪ್ಪ ರವಳಿ, ಬಿ.ಎಂ.ಕೋರೆ ಸಾವಕಾರ, ಸುರೇಶಗೌಡ ಪಾಟೀಲ, ಧನರಾಜ ಮುಜಗೊಂಡ, ಅಣ್ಣಾರಾಯ ಬಬಲಾದಿ, ನೀಲಕಂಠ ರೂಗಿ, ಸಣ್ಣಪ್ಪ ತಳವಾರ, ಬಿ.ಕೆ.ಪಾಟೀಲ ಸೇರಿದಂತೆ 5 ತಾಲೂಕಿನ ರೈತರು, ಶೇರುದಾರರು ಉಪಸ್ಥಿತರಿದ್ದರು.