ಸಂಭ್ರಮದ ಯುಗಾದಿ ಸಂಗೀತೋತ್ಸವ

| Published : Apr 01 2025, 12:46 AM IST

ಸಾರಾಂಶ

ಮೊದಲ ದಿನ ಖ್ಯಾತ ಹಿನ್ನಲೆ ಗಾಯಕರಾದ ಅಜಯ್ ವಾರಿಯರ್, ಇಂದು ನಾಗರಾಜ್ಸ ಕಂಬದ ರಂಗಯ್ಯ, ಶಶಿಕಲಾ ಮತ್ತು ತಂಡದವರು ಸಂಗೀತಾ ರಸದೌತಣ ನೀಡಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಅರಮನೆ ಆವರಣದಲ್ಲಿ ಮೈಸೂರು ಅರಮನೆ ಮಂಡಳಿಯು ಆಯೋಜಿಸಿರುವ 3 ದಿನಗಳ ಯುಗಾದಿ ಸಂಗೀತೋತ್ಸವವನ್ನು ಶಾಸಕರಾದ ಕೆ. ಹರೀಶ್ ಗೌಡ, ಟಿ.ಎಸ್. ಶ್ರೀವತ್ಸ ಭಾನುವಾರ ಸಂಜೆ ಉದ್ಘಾಟಿಸಿದರು.ಮೊದಲ ದಿನ ಖ್ಯಾತ ಹಿನ್ನಲೆ ಗಾಯಕರಾದ ಅಜಯ್ ವಾರಿಯರ್, ಇಂದು ನಾಗರಾಜ್ಸ ಕಂಬದ ರಂಗಯ್ಯ, ಶಶಿಕಲಾ ಮತ್ತು ತಂಡದವರು ಸಂಗೀತಾ ರಸದೌತಣ ನೀಡಿದರು.ಅಲ್ಲದೆ, ಎಸ್. ಲಿಖಿತ್ ತಂಡದಿಂದ ಸ್ಯಾಕ್ಸೋಫೋನ್ ವಾದನ, ಡಾ. ಶ್ರೀಧರಮೂರ್ತಿ ಅವರಿಂದ ಪಂಚಾಂಗ ಶ್ರವಣ, ಆರ್. ಚಂದನ ತಂಡದವರಿಂದ ನಾಡಗೀತೆ ಮತ್ತು ಮೈಸೂರು ಸಂಸ್ಥಾನ ಗೀತೆ ಪ್ರಸ್ತುತಿ ಸಹ ಜರುಗಿತು.ವಿಧಾನಪರಿಷತ್ತು ಸದಸ್ಯ ಡಾ.ಡಿ. ತಿಮ್ಮಯ್ಯ, ನಗರ ಪಾಲಿಕೆ ಮಾಜಿ ಸದಸ್ಯ ಜೆ. ಗೋಪಿ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಮೊದಲಾದವರು ಇದ್ದರು.