ಸಾರಾಂಶ
ಸಮಾಜ ಮೆಚ್ಚುವಂತ ಕೆಲಸವನ್ನು ಮಾಡಬೇಕು
ಅಧಿಕಾರ ನೀಡಿದವರ ಋಣ ತೀರಿಸಬೇಕು-
ಮಿರ್ಲೆ ಶ್ರೀನಿವಾಸಗೌಡಕನ್ನಡಪ್ರಭ ವಾರ್ತೆ ಕೆ.ಆರ್.ನಗರಅಧಿಕಾರ ಶಾಶ್ವತವಲ್ಲ ತಮ್ಮ ಅವಧಿಯಲ್ಲಿ ಶಾಶ್ವತವಾಗಿ ನೆನಪಿನಲ್ಲಿಡುವಂತ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅಧಿಕಾರ ನೀಡಿದವರ ಋಣವನ್ನು ತೀರಿಸಿ ಎಂದು ವಸ್ತು ಪ್ರದರ್ಶನದ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ ಸಲಹೆ ನೀಡಿದರು.
ಪಟ್ಟಣದ ಒಕ್ಕಲಿಗ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಒಕ್ಕಲಿಗ ನೌಕರರ ಸ್ನೇಹ ಬಳಗದ ಅಧ್ಯಕ್ಷ ಶಂಕರೇಗೌಡ ಮತ್ತು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ದೊಡ್ಡಕೊಪ್ಪಲು ವಿನಯ್ ಅವರಿಗೆ ಅಭಿನಂದಿಸಿ ಮಾತನಾಡಿದ ಅವರು, ಜವಾಬ್ದಾರಿ ಹೆಚ್ಚಿದೆ ಸಮಾಜ ಮೆಚ್ಚುವಂತ ಕೆಲಸವನ್ನು ಮಾಡುವಂತೆ ತಿಳಿ ಹೇಳಿದರು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ. ಅರುಣ್ ಕುಮಾರ್, ಒಕ್ಕಲಿಗ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ವಡ್ಡರಕೊಪ್ಪಲು ಶಿವರಾಮು, ವಕೀಲ ಅಂಕನಹಳ್ಳಿ ತಿಮ್ಮಪ್ಪ, ಉಪನ್ಯಾಸಕ ಮಿರ್ಲೆ ಧನಂಜಯ, ನೂತನ ಅಧ್ಯಕ್ಷರಾದ ಶಂಕರೇಗೌಡ, ವಿನಯ್ ದೊಡ್ಡ ಕೊಪ್ಪಲು ಮಾತನಾಡಿದರು.
ಪದವೀಧರ ಸಹಕಾರ ಸಂಘದ ಮಾಜಿ ಕಾರ್ಯದರ್ಶಿ ರಾಧಾಕೃಷ್ಣ, ಎಂಡಿಸಿಸಿ ಬ್ಯಾಂಕ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಸುಧೀರ್ ಬ್ಯಾಂಕಿನ ಸಿಬ್ಬಂದಿಜೀವನ್, ಹೇಮಂತ್ ಮೊದಲಾದವರು ಇದ್ದರು.
ಸಮಾಜ ಮೆಚ್ಚುವಂತ ಕೆಲಸವನ್ನು ಮಾಡಬೇಕು