ಸಾರಾಂಶ
ಪುಸ್ತಕಗಳು ನಮ್ಮ ಉತ್ತಮ ಸ್ನೇಹಿತರು. ನಮಗೆ ಜ್ಞಾನ, ಉತ್ತಮ ಮನಸ್ಸು ಹಾಗೂ ಒಳ್ಳೆಯ ಆಲೋಚನೆಗಳನ್ನು ಮಾಡಲು ಪುಸ್ತಕ ಸಹಾಯಕವಾಗಿದೆ ಎಂದು ಎ.ವಿ.ಕೆ. ಮಹಿಳಾ ಕಾಲೇಜಿನ ಗ್ರಂಥಪಾಲಕ ಎಚ್.ಸತೀಶ ಅಭಿಪ್ರಾಯಪಟ್ಟಿದ್ದಾರೆ.
- ಮಾ.ಸ.ಬ. ಕಾಲೇಜಿನಲ್ಲಿ ಪುಸ್ತಕಗಳ ಪ್ರದರ್ಶನ ಕಾರ್ಯಕ್ರಮ - - - ದಾವಣಗೆರೆ: ಪುಸ್ತಕಗಳು ನಮ್ಮ ಉತ್ತಮ ಸ್ನೇಹಿತರು. ನಮಗೆ ಜ್ಞಾನ, ಉತ್ತಮ ಮನಸ್ಸು ಹಾಗೂ ಒಳ್ಳೆಯ ಆಲೋಚನೆಗಳನ್ನು ಮಾಡಲು ಪುಸ್ತಕ ಸಹಾಯಕವಾಗಿದೆ ಎಂದು ಎ.ವಿ.ಕೆ. ಮಹಿಳಾ ಕಾಲೇಜಿನ ಗ್ರಂಥಪಾಲಕ ಎಚ್.ಸತೀಶ ಅಭಿಪ್ರಾಯಪಟ್ಟರು.
ನಗರದ ಪಿ.ಜೆ. ಬಡಾವಣೆಯ ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನ.14 ರಿಂದ 20ರವರೆಗೆ ಏರ್ಪಡಿಸಿರುವ ಪುಸ್ತಕಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ವರ್ಷವು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಪ್ರಯುಕ್ತ ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ಮತ್ತು ಗ್ರಂಥಾಲಯಕ್ಕೆ ಸೆಳೆಯುವ ಉದ್ದೇಶದಿಂದ ಪುಸ್ತಕ ಪ್ರದರ್ಶನ ಕಾರ್ಯಕ್ರಮ ಆಯೋಜನೆ ಶ್ಲಾಘನೀಯ ಎಂದರು.ಪ್ರಾಚಾರ್ಯೆ ಪ್ರೊ. ಜಿ.ಸಿ.ನೀಲಾಂಬಿಕ ಮಾತನಾಡಿ, ಮಾನವನ ಮನಸ್ಸು ದುರ್ಬಲ ಮನಸ್ಥಿತಿಯನ್ನು ಹೊಂದಿದೆ. ಈ ರೀತಿಯ ನಕಾರಾತ್ಮಕ ಆಲೋಚನೆಗಳಿಗೆ ಮನಸ್ಸು ಬಲಿ ಆಗುವುದನ್ನು ತಡೆಯುವ ಅತ್ಯುತ್ತಮ ಪರಿಹಾರವೆಂದರೆ ಪುಸ್ತಕ. ಒಂದು ಉತ್ತಮ ಪುಸ್ತಕ ನೂರು ಜನ ಒಳ್ಳೆಯ ಸ್ನೇಹಿತರಿಗೆ ಸಮ ಎಂದು ಹೇಳಿದರು.
ಈ ಸಂದರ್ಭ ಸಹಾಯಕ ಗ್ರಂಥಪಾಲಕ ಮಂಜಣ್ಣ, ಉಪನ್ಯಾಸಕರಾದ ಡಾ. ಆರ್.ರಾಘವೇಂದ್ರ, ಡಾ. ಎ.ಬಿ. ವಿಜಯಕುಮಾರ, ಡಾ. ಎಂ.ಮಂಜಣ್ಣ, ಪ್ರೊ. ಟಿ.ಆರ್.ರಂಗಸ್ವಾಮಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.- - - -19ಕೆಡಿವಿಜಿ36: ದಾವಣಗೆರೆಯ ಮಾಸಬ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆದ ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ಎ.ವಿ.ಕೆ. ಮಹಿಳಾ ಕಾಲೇಜಿನ ಗ್ರಂಥಪಾಲಕ ಎಚ್.ಸತೀಶ ಉದ್ಘಾಟಿಸಿದರು.