ಸಾರಾಂಶ
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಂಬಾಡಿ ಅಣೆಕಟ್ಟೆ ನಿರ್ಮಿಸುವ ಮೂಲಕ ರೈತರು ಸದಾ ನೆನಪಿಸಿಕೊಳ್ಳುವಂತಹ ಕೆಲಸ ಮಾಡಿದರು. ಅದೇ ರೀತಿ ಬಿ.ವೈ.ನೀಲೇಗೌಡರು ಸಹಕಾರ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡುವ ಜತೆಗೆ ಕಬ್ಬು ಬೆಳೆಯುವ ರೈತ ನೆಮ್ಮದಿಯಾಗಿ ಬದುಕು ಕಟ್ಟಿಕೊಳ್ಳಲಿ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಮರೆಯಾದ ನಂತರವೂ ಸಾಧಕರ ಹೆಸರು ಜೀವಂತವಾಗಿರಬೇಕಾದರೆ ಅವರ ಹೆಸರಿನಲ್ಲಿ ಒಂದಿಲ್ಲೊಂದು ಕಾರ್ಯಕ್ರಮ ನಡೆಯುತ್ತಿರಬೇಕು ಎಂದು ಗ್ರಾಮರಂಗ ಸಾಂಸ್ಕೃತಿಕೆ ವೇದಿಕೆ ಅಧ್ಯಕ್ಷ ನಾಗಲಿಂಗೇಗೌಡ ತಿಳಿಸಿದರು.ತಾಲೂಕಿನ ಹರವು ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅವರಣದಲ್ಲಿ ನಡೆದ ಸಹಕಾರಿ ಧುರೀಣ, ಪಿಎಸ್‌ಎಸ್‌ಕೆ ಕಾರ್ಖಾನೆ ನಿರ್ಮಾತೃ, ಮಾಜಿ ಶಾಸಕ ಬಿ.ವೈ.ನೀಲೇಗೌಡರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಂಬಾಡಿ ಅಣೆಕಟ್ಟೆ ನಿರ್ಮಿಸುವ ಮೂಲಕ ರೈತರು ಸದಾ ನೆನಪಿಸಿಕೊಳ್ಳುವಂತಹ ಕೆಲಸ ಮಾಡಿದರು. ಅದೇ ರೀತಿ ಬಿ.ವೈ.ನೀಲೇಗೌಡರು ಸಹಕಾರ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡುವ ಜತೆಗೆ ಕಬ್ಬು ಬೆಳೆಯುವ ರೈತ ನೆಮ್ಮದಿಯಾಗಿ ಬದುಕು ಕಟ್ಟಿಕೊಳ್ಳಲಿ ಎಂದು ಪಿಎಸ್‌ಎಸ್‌ಕೆ ಕಾರ್ಖಾನೆ ಸ್ಥಾಪಿಸಿದರು. ಇಂತಹ ಮಹಾನ್ ವ್ಯಕ್ತಿಗಳನ್ನು ಜನ ಎಂದೂ ಮರೆಯಬಾರದು ಎಂದರು.ನೀಲೇಗೌಡರು ಪಾಂಡವಪುರ ಕ್ಷೇತ್ರದ ಮೊದಲ ಶಾಸಕರಾಗಿ ಸಹಕಾರ ಕ್ಷೇತ್ರದ ಮೂಲಕ ತಾಲೂಕಿಗೆ ಅಪಾರ ಕೊಡುಗೆ ನೀಡಿ ಹೋಗಿದ್ದಾರೆ. ಮಕ್ಕಳು ಇಂತಹ ಮಹನೀಯರನ್ನು ಆದರ್ಶವಾಗಿಟ್ಟುಕೊಂಡು ಎಲ್ಲಾ ರಂಗದಲ್ಲೂ ಸಾಧನೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಎಂಜಿನಿಯರ್ ರಾಜೀವ್, ಎಚ್.ಕೆ.ವೆಂಕಟೇಶ್, ಎಚ್.ಸಿ.ಪುನೀತ್ ರಾಜ್, ಬಿ.ವಿ.ಕಿಶೋರ್, ಎಚ್.ವಿ. ಗೋವಿಂದ ರಾಜು, ಆರ್.ಮಧುಸೂದನ್, ರೇಣುಕಮ್ಮ, ಅರುಣ, ಜ್ಯೋತಿ, ಎಸ್.ಆರ್.ಶೃತಿ, ಎಚ್.ಎನ್.ನಿಂಗರಾಜು, ಎಚ್.ವಿ.ನವೀನ್ ಕುಮಾರ್ ಇತರರು ಇದ್ದರು.