ಚಿಕ್ಕಆಸಂಗಿಯಲ್ಲಿ ಪಂಚ ಗ್ಯಾರಂಟಿಗಳ ಪ್ರಗತಿ ಪರಿಶೀಲನೆ

| Published : Feb 15 2025, 12:33 AM IST

ಚಿಕ್ಕಆಸಂಗಿಯಲ್ಲಿ ಪಂಚ ಗ್ಯಾರಂಟಿಗಳ ಪ್ರಗತಿ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಕೊಲ್ಹಾರ ತಾಲೂಕು ಗ್ಯಾರಂಟಿ ಸಮಿತಿ ಪ್ರಗತಿ ಪರಿಶೀಲನಾ ಸಭೆಯು ತಾಲ್ಲೂಕಿನ ಚಿಕ್ಕ ಆಸಂಗಿ ಗ್ರಾಮದ ಭೂದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿತು. ಪಂಚ ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಸಂತೋಷ ಗಣಾಚಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚಿಕ್ಕಆಸಂಗಿ ಗ್ರಾಮದಲ್ಲಿ ಐದು ಗ್ಯಾರಂಟಿ ಯೋಜನೆಯ ಲಾಭಗಳನ್ನು ಪಡೆದುಕೊಂಡ ಫಲಾನುಭವಿಗಳು ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ತಾಲೂಕು ಗ್ಯಾರಂಟಿ ಸಮಿತಿ ಪ್ರಗತಿ ಪರಿಶೀಲನಾ ಸಭೆಯು ತಾಲ್ಲೂಕಿನ ಚಿಕ್ಕ ಆಸಂಗಿ ಗ್ರಾಮದ ಭೂದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿತು.

ಪಂಚ ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಸಂತೋಷ ಗಣಾಚಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚಿಕ್ಕಆಸಂಗಿ ಗ್ರಾಮದಲ್ಲಿ ಐದು ಗ್ಯಾರಂಟಿ ಯೋಜನೆಯ ಲಾಭಗಳನ್ನು ಪಡೆದುಕೊಂಡ ಫಲಾನುಭವಿಗಳು ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.

ನಂತರ ವಂಚಿತ ಕುಟುಂಬಗಳ ಮಾಹಿತಿ ಪಡೆದು ಮಾತನಾಡಿದ ಸಂತೋಷ ಗಣಾಚಾರಿ ಅತೀ ಶೀಘ್ರದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪುರುಷರಂತೆ ಮಹಿಳೆಯರು ಸಮಾನವಾಗಿ ಬೆಳೆಯಬೇಕು ಅನ್ನುವುದು ಸರಕಾರ ಉದ್ದೇಶ. ಗೃಹಜ್ಯೋತಿ ಯೋಜನೆ ಪ್ರತಿ ಕುಟುಂಬಕೆ 200 ಯುನಿಟ್ ಉಚಿತ ಇರುವುದರಿಂದ ಪುರುಷರ ಹಣ ಉಳಿತಾಯ ಮಾಡಿದಂತೆ. ಅನ್ನಭಾಗ್ಯ ಯೋಜನೆ 5 ಕೆಜಿ, ಅಕ್ಕಿ 5 ಕೆಜಿ ಅಕ್ಕಿ ಬದಲಾಗಿ ₹ 170 ಪ್ರತಿ ಕುಟುಂಬಕ್ಕೆ ನೀಡಲಾಗುತ್ತಿದೆ. ಗೃಹಲಕ್ಷ್ಮೀ ಯೋಜನೆ ಪ್ರತಿ ಕುಟುಂಬದ ಯಜಮಾನಿ ಅಕೌಂಟ್‌ಗೆ ₹ 2000 ನೀಡುವ ಯೋಜನೆಯಾಗಿದೆ. ಯುವನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಡಿಗ್ರಿ ಪಾಸಾದ ವಿದ್ಯಾರ್ಥಿಗಳಿಗೆ ₹ 3000, ಡಿಪ್ಲೋಮ ಪದವೀಧರಿಗೆ ₹1500 ಭತ್ತೆ ನೀಡುತ್ತಿದೆ ಎಂದರು.

ಪಂಚ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಹಸೀಲ್ದಾರ್‌ ಎಸ್.ಎಸ್.ನಾಯಕಲ್ಮಠ, ಗ್ಯಾರಂಟಿ ಸಮಿತಿ ಸದಸ್ಯೆ ಕಮಲವ್ವ ಮಾಕಾಳಿ, ಕಸ್ತೂರಿ ಪೂಜಾರಿ, ಚೇತನ ರೆಡ್ಡಿ, ಪರಶುರಾಮ ಬಿರಾದಾರ, ಸಿದ್ದಪ್ಪ ಕುಂಬಾರ, ಸಿಕಂದರ ಕೂಡಗಿ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಮಲಘಾಣ ಹಾಗೂ ಪಂಚ ಗ್ಯಾರಂಟಿಯ ಅಧಿಕಾರಿಗಳು ಇತರರು ಹಾಜರಿದ್ದರು.