ಸದೃಢ ಸಂಘಟನೆಯಿಂದ ಪ್ರಗತಿ: ಶಾಸಕ ಶಿವರಾಮ ಹೆಬ್ಬಾರ

| Published : Feb 06 2025, 11:48 PM IST

ಸದೃಢ ಸಂಘಟನೆಯಿಂದ ಪ್ರಗತಿ: ಶಾಸಕ ಶಿವರಾಮ ಹೆಬ್ಬಾರ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರದ್ಧೆಯಿಂದ ಸಮಾಜದ ಸಂಘಟನೆ ನಡೆಯಬೇಕಾದರೆ ಮುಂದೆ ಗುರಿ ಮತ್ತು ಹಿಂದೆ ಗುರು ಇದ್ದರೆ ಮಾತ್ರ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಅಲ್ಲದೇ ಸಾಮಾಜಿಕ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು.

ಮುಂಡಗೋಡ: ಸಮಾಜ ಸಣ್ಣದಾಗಿದ್ದಷ್ಟು ಸಂಘಟನೆ ಶಕ್ತಿಯುತವಾಗಿ ಬೆಳೆಯುತ್ತದೆ. ಸದೃಢ ಸಂಘಟನೆಯಿಂದ ಮಾತ್ರ ಸಮಾಜ ಆರ್ಥಿಕ ಹಾಗೂ ರಾಜಕೀಯವಾಗಿ ಬೆಳೆಯಲು ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.ಪಟ್ಟಣದಲ್ಲಿ ಜಿಲ್ಲಾ ಸೂರ್ಯವಂಶ ಕ್ಷತ್ರಿಯ ಕಲಾಲ್ ಕಾಟಿಕ ಸಮಾಜದ ವತಿಯಿಂದ ಸೂರ್ಯನಾರಾಯಣ ದೇವರ ಜಯಂತಿ ಹಾಗೂ ದಿನದರ್ಶಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶ್ರದ್ಧೆಯಿಂದ ಸಮಾಜದ ಸಂಘಟನೆ ನಡೆಯಬೇಕಾದರೆ ಮುಂದೆ ಗುರಿ ಮತ್ತು ಹಿಂದೆ ಗುರು ಇದ್ದರೆ ಮಾತ್ರ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಅಲ್ಲದೇ ಸಾಮಾಜಿಕ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಕೋರಿದರು. ವಿ.ಎಸ್. ಪಾಟೀಲ್ ಮಾತನಾಡಿ, ಪ್ರಯತ್ನದಿಂದ ಏನು ಬೇಕಾದರೂ ಸಾಧನೆ ಮಾಡಬಹುದು. ಸಮಯಪ್ರಜ್ಞೆ ತೀವ್ರ ಮುಖ್ಯ. ಇದಕ್ಕೆ ದಿನದರ್ಶಿಕೆ ಅತ್ಯವಶ್ಯವಾಗಿರುತ್ತದೆ ಎಂದರು. ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ಕಲಾಲ ಸಮಾಜ ಚಿಕ್ಕದಾಗಿಲ್ಲ. ಅದು ಕ್ಷತ್ರಿಯ ಸಮಾಜದ ಒಂದು ಅಂಗವಾಗಿದೆ. ಮೂಲ ಕ್ಷತ್ರಿಯರು. ಕ್ಷತ್ರಿಯದಲ್ಲಿ ೮೦ ಪಂಗಡಗಳಿವೆ. ಛತ್ರಪತಿ ಶಿವಾಜಿ ಒಂದು ಸಮುದಾಯಕ್ಕೆ ಸೀಮಿತರಲ್ಲ. ವಿಶ್ವಕ್ಕೆ ಪ್ರಚಲಿತರು. ಕ್ಷತ್ರಿಯರೆಲ್ಲ ಒಂದಾಗಿ ಸಂಘಟನೆ, ಹೋರಾಟದ ಮೂಲಕ ಒಗ್ಗಟ್ಟು ತೋರಿಸಬೇಕು ಎಂದರು. ಸೂರ್ಯವಂಶ ಕಲಾಲ್ ಕಾಟಿಕ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜ ಕಲಾಲ, ಪಪಂ ಅಧ್ಯಕ್ಷೆ ಜಯಸುಧಾ ಭೋವಿ, ಕೃಷ್ಣ ಹಿರೇಹಳ್ಳಿ, ಎಂ.ಸಿ. ಕಲಾಲ, ರಹಿಮಾಬಾನು ಕುಂಕೂರ, ಜ್ಞಾನದೇವ ಗುಡಿಯಾಳ, ಯಲ್ಲಪ್ಪ ಕಲಾಲ, ಅಡಿವೆಪ್ಪ ಕಲಾಲ, ಮಂಜುನಾಥ ಕಲಾಲ, ಅಶೋಕ ಮಿರಜಕರ, ಜ್ಞಾನದೇವ ಗುಡಿಯಾಳ, ಶಶಿಕಲಾ ಮಿರಜಕರ ಮುಂತಾದವರು ಉಪಸ್ಥಿತರಿದ್ದರು. ಶ್ರೀಶೈಲ ಐನಾಪುರ ನಿರೂಪಿಸಿದರು.೯ರಂದು ಚಿಕ್ಕಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ

ದಾಂಡೇಲಿ: ನಗರದ ವೆಸ್ಟ್‌ಕೋಸ್ಟ್‌ ಕಾಗದ ಕಾರ್ಖಾನೆ ಮತ್ತು ಧಾರವಾಡದ ವಿಠಲ ಮಕ್ಕಳ ವೈದ್ಯಕೀಯ ಹಾಗೂ ಸ್ಪೆಷಾಲಿಟಿ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಫೆ. ೯ರಂದು ಬೆಳಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯವರೆಗೆ ೧೨ ವರ್ಷದ ಒಳಗಿನ ಚಿಕ್ಕಮಕ್ಕಳ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಔದ್ಯೋಗಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಕ್ಕಳ ತಜ್ಞ ಡಾ. ರಾಜನ್ ದೇಶಪಾಂಡೆ ಅವರ ನೇತೃತ್ವದಲ್ಲಿ ನಡೆಯಲಿರುವ ಶಿಬಿರದಲ್ಲಿ ಒಟ್ಟು ೧೨ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ. ಶಿಬಿರ ನಡೆಯುವ ದಿನದಂದು ಬೆಳಗ್ಗೆ ೮ ಗಂಟೆಗೆ ರಂಗನಾಥ ಸಭಾಭವನದ ಆವರಣದಲ್ಲಿನ ಕೌಂಟರ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನಗರದ ಸುತ್ತಮುತ್ತಲ ಗ್ರಾಮೀಣ ಭಾಗದ ಜನರಿಗೆ ವಾಹನದ ವ್ಯವಸ್ಥೆ ಮಾಡಲಾಗುತ್ತಿದೆ. ಊಟ, ಉಪಹಾರದ ಜತೆಗೆ ಉಚಿತವಾಗಿ ಔಷಧಿಗಳನ್ನು ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ರಾಘವೇಂದ್ರ ಜೆ.ಆರ್., ನಗರಸಭಾ ಸದಸ್ಯ ಮೋಹನ ಹಲವಾಯಿ ಉಪಸ್ಥಿತರಿದ್ದರು.