ಸಾರಾಂಶ
ಕನ್ನಡಪ್ರಭ ವಾರ್ತೆ, ತರೀಕೆರೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೂಲಕ ನಿಜವಾದ ಫಲಾನುಭವಿಗಳಿಗೆ ಯೋಜನೆಯ ನೆರವುಗಳನ್ನು ತಲುಪಬೇಕು ಎಂದು ಜಿಲ್ಲಾ ಯೋಜನಾ ನಿರ್ದೇಶಕ ಪ್ರಕಾಶ್ ರಾವ್ ಹೇಳಿದ್ದಾರೆ.ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ತರೀಕೆರೆಯಿಂದ ಯೋಜನಾ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ತರೀಕೆರೆ ತಾಲೂಕಿನ ಯೋಜನೆಗಳ ಸಂಪೂರ್ಣ ಸಾಧನೆ ವರದಿ ನೀಡಿ ಮಾತನಾಡಿದರು.
ತರೀಕೆರೆ ತಾಲೂಕಿನಲ್ಲಿ 19048 ಮಂದಿ ಸದಸ್ಯರು ಕ್ರೀಯಾಶೀಲ ಗುಂಪುಗಳಲ್ಲಿ ಸಕ್ರಿಯವಾಗಿದ್ದಾರೆ. ಸ್ವಉದ್ಯೋಗ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಮೂಲಭೂತ ಸೌಕರ್ಯ ಹಾಗೂ ಇತರ ಉದ್ದೇಶಗಳಿಗೆ ವಿನಿಯೋಗಿಸಲು 100 ಕೋಟಿ ಮೊತ್ತ ಪ್ರಗತಿ ನಿಧಿ ಚಾಲ್ತಿಯಲ್ಲಿದೆ. ಸಣ್ಣ ಮತ್ತು ಕಿರು ಉದ್ದಿಮೆಗಳ ಸ್ವ ಉದ್ಯೋಗ ಪ್ರೋತ್ಸಾಹಕ್ಕೆ 134 ಕುಟುಂಬ ಗಳಿಗೆ ಸಿಡ್ಬಿ ಪ್ರಯಸ್ ಯೋಜನೆ ಮೂಲಕ ವಿತರಿಸಲಾಗಿದೆ ಎಂದು ಹೇಳಿದರು.ವ್ಯಕ್ತಿ ಭದ್ರತೆ, ಕುಟುಂಬ ಭದ್ರತೆ, ಸಂಘ ಭದ್ರತೆಗೋಸ್ಕರ ಮೇಕ್ರೋಬಚತ್ ಎಲ್ಐಸಿ ಸೌಲಭ್ಯ ಜಾರಿಗೆ ತಂದಿದ್ದು, ಒಟ್ಟು ವಲಯದಲ್ಲಿ 6946 ಪಾಲಿಸಿಗಳನ್ನು ಮಾಡಿಸಲಾಗಿದೆ. ಸದಸ್ಯರ ಆರೋಗ್ಯ ದೃಷ್ಠಿಯಿಂದ ಆರೋಗ್ಯ ರಕ್ಷಾ ಸಂಪೂರ್ಣ ಸುರಕ್ಷಾ ಕಾರ್ಯಕ್ರಮ ಜಾರಿಗೆ ತರಲಾಗಿದೆ. ವಲಯದಲ್ಲಿ 104 ಜನ ಸದಸ್ಯರಿಗೆ ಆರೋಗ್ಯ ರಕ್ಷಾ ವಿಮೆಯನ್ನು ಕೇಂದ್ರ ಕಚೇರಿಯಿಂದ ಮಂಜೂರು ಮಾಡಿಸಲಾಗಿದೆ, ಯೋಜನೆ ಸದಸ್ಯರ ಮಕ್ಕಳಿಗೆ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಅನುಕೂಲವಾಗುವಂತೆ ಸುಜ್ಞಾನ ನಿಧಿ ಶಿಷ್ಯವೇತನ ಜಾರಿಗೆ ತಂದಿದ್ದು ಪ್ರಸಕ್ತ ವರ್ಷದಲ್ಲಿ ತಾಲೂಕಿನ 102 ವಿದ್ಯಾರ್ಥಿ ಗಳಿಗೆ ಸುಜ್ಞಾನ ನಿಧಿ ನೀಡಲಾಗುತ್ತಿದೆ ಎಂದು ವಿವರಿಸಿದರು.
ತಾಲೂಕಿನಲ್ಲಿ 120 ಸದಸ್ಯರಿಗೆ ಮಾಸಾಶನ ವಿತರಿಸಲಾಗುತ್ತಿದೆ. ಹಸಿರು ಇಂಧನ ಕಾರ್ಯಕ್ರಮಗಳಿಗೆ ಪ್ರೇರಣೆ ನೀಡುವ ಸಲುವಾಗಿ 246 ಕುಟುಂಬಗಳಿಗೆ ಸೋಲಾರ್ ದೀಪಗಳನ್ನು, ಸೋಲಾರ್ ಮತ್ತು ಅಡಿಗೆಗೆ ಪೂರಕವಾಗಿ ಗ್ರೀನ್-ವೆ ಕುಕ್ ಸ್ಟವ್ ಸೇವೆಗಳು ಒಟ್ಟು 474 ಒದಗಿಸಲಾಗಿದೆ ಎಂದು ತಿಳಿಸಿದರು. ಪ್ರಗತಿ ಬಂಧು ಸ್ವಸಹಾಯ ಸಂಘಗಳ ಸದಸ್ಯರಿಗೆ ಇದುವರೆಗೂ 200ಕ್ಕೂ ಹೆಚ್ಚು ಕೃಷಿ, ಹೈನುಗಾರಿಕಾ ತರಬೇತಿ ನಡೆಸಿ ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭ ಗಳಿಸಲು ಮಾಹಿತಿ ನೀಡಲಾಗಿದೆ. ಕೃಷಿ ಸ್ವಉದ್ಯೋಗ ಉದ್ದೇಶಕ್ಕಾಗಿ ಸ್ಥಳೀಯ ಫಲಾನುಭವಿ ಸದಸ್ಯರಿಗೆ 100 ಪ್ರವಾಸ ಗಳನ್ನು ಕೈಗೊಳ್ಳಲಾಗಿದೆ. ತಾಲೂಕಿನಲ್ಲಿ 25 ಜ್ಞಾನವಿಕಾಸ ಕೇಂದ್ರಗಳಿದ್ದು ಪ್ರತಿ ತಿಂಗಳು ಸಭೆಯಲ್ಲಿ ಮಹಿಳೆಯರಿಗೆ ಬೇಕಾದ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಮಹಿಳೆಯರು ಅರ್ಥಿಕ, ಸಾಮಾಜಿಕ ನೆಲೆಯಲ್ಲಿ ಮುಂದೆ ಬಂದಿದ್ದಾರೆ. ಟೈಲರಿಂಗ್ ತರಬೇತಿ, ಶಾಲಾ ಮಕ್ಕಳಿಗೆ ಟ್ಯೂಷನ್ ಕಾರ್ಯಕ್ರಮ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು ಯೋಜನೆಯ ಸಾಧನಾ ಪೂರ್ಣ ಮಾಹಿತಿ ನೀಡಿದರು.ಯೋಚನಾಧಿಕಾರಿ ಕೆ.ಕುಸುಮಾಧರ್, ಜ್ಞಾನವಿಕಾಸ ಸಮನ್ವಯಾಧಿಕಾರಿ ನಂದಿನಿ, ಕೃಷಿ ಅಧಿಕಾರಿ ಸಂತೋಷ್ ಮತ್ತಿತರರು ಭಾಗವಹಿಸಿದ್ದರು.9ಕೆಟಿಆರ್.ಕೆ 8ಃ
ತರೀಕೆರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ನಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಯೋಜನಾಧಿಕಾರಿ ಪ್ರಕಾಶ ರಾವ್, ಯೋಜನಾಧಿಕಾರಿ ಕೆ.ಕುಸುಮಾಧರ್, ಜ್ಞಾನವಿಕಾಸ ಸಮನ್ವಯಾಧಿಕಾರಿ ನಂದಿನಿ, ಕೃಷಿ ಅಧಿಕಾರಿ ಸಂತೋಷ್ ಭಾಗವಹಿಸಿದ್ದರು.