ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ನ.9ರಂದು ಚಾಲನೆ

| Published : Oct 21 2025, 01:00 AM IST

ಸಾರಾಂಶ

ಪಂ ಕೇಂದ್ರ ಸ್ಥಾನದಲ್ಲಿ ನಡೆಸುತ್ತಿರುವ ಮನೆ ಮನೆಗೆ ಶಾಸಕರು,

ಕೊಟ್ಟೂರು: ಕೂಡ್ಲಿಗಿ ಕ್ಷೇತ್ರದ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಇದ್ದ ತೊಂದರೆಗಳನ್ನು ನಿವಾರಿಸಲಾಗಿದ್ದು . ರಾಜವಾಳ ಬಳಿಯ ವಿದ್ಯುತ್ ಕಾಮಗಾರಿಯೂ ಪೂರ್ಣಗೊಂಡು ಪ್ರಾಯೋಗಿಕ ಪರೀಕ್ಷೆ ನಡಸಲಾಗಿದೆ. ನ.9ರಂದು ಕೂಡ್ಲಿಗಿಯಲ್ಲಿನ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ, ಸಚಿವರು ಪಾಲ್ಗೊಂಡು ಯೋಜನೆಗೆ ಚಾಲನೆ ನೀಡಲಿದ್ದಾರೆಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ ಹೇಳಿದರು.ತಾಲೂಕಿನ ನಿಂಬಳಗೆರೆ ಗ್ರಾಮದಲ್ಲಿ ಮನೆ ಮನೆಗೆ ಶಾಸಕರು, ಮನೆ ಬಾಗಿಲಿಗೆ ನಮ್ಮ ಸರ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆಗೊಳ್ಳುವ ಎಲ್ಲ ಲಕ್ಷಣಗಳು ಇದೀಗ ಸ್ಪಷ್ಟವಾಗಿವೆ ಎಂದರು.

ಗ್ರಾಪಂ ಕೇಂದ್ರ ಸ್ಥಾನದಲ್ಲಿ ನಡೆಸುತ್ತಿರುವ ಮನೆ ಮನೆಗೆ ಶಾಸಕರು, ಮನೆ ಬಾಗಿಲಿಗೆ ನಮ್ಮ ಸರಕಾರ ಕಾರ್ಯಕ್ರಮವನ್ನು, ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿಯಲ್ಲಿ ಹಮ್ಮಿಕೊಳ್ಳುವ ಮೂಲಕ ಜನತೆಗೆ ಸಮಸ್ಯೆಗೆ ನೆರವಾಗುತ್ತೇನೆಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ ಹೇಳಿದರು.

ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ ಮಾತನಾಡಿ, ಶಾಸಕರ ದೂರದೃಷ್ಟಿತ್ವ ಹಾಗೂ ಅಭಿವೃದ್ಧಿ ಕನಸಿನ ಫಲವಾಗಿ ಕಸಾಪುರದಲ್ಲಿ ಶೇಂಗಾ ಹಾಗೂ ಹುಣಸೆ ಸಂಸ್ಕರಣಾ ಘಟಕ ಸ್ಥಾಪನೆಯಾಗಿದೆ. ಆರೋಗ್ಯ, ಶಿಕ್ಷಣ ಸೇರಿ ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ಧಿ ನಿಟ್ಟಿನಲ್ಲಿ ಶಾಸಕರು ಕೈಗೊಳ್ಳುತ್ತಿರುವ ಕಾರ್ಯಗಳು ಉತ್ತಮವಾಗಿವೆ ಎಂದರು.

ಜಿಪಂ ಮಾಜಿ ಸದಸ್ಯ ಕೆ.ಎಂ.ಶಶಿಧರ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಸರಕಾರದಲ್ಲಿ ಅಭಿವೃದ್ಧಿಗೆ ಅನುದಾನ ಕೊರತೆ ಎಂದು ಆರೋಪಿಸುವ ವಿಪಕ್ಷದವರು, ನಮ್ಮ ಶಾಸಕರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿದರೆ ಅವರ ಆರೋಪ ತಪ್ಪು ಎಂದು ಅವರಿಗೆ ತಿಳಿಯುತ್ತದೆ. ಕ್ಷೇತ್ರದ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಿಂದ ಅಂತರ್ಜಲ ಹೆಚ್ಚಳವಾಗಿ ಕೃಷಿ ಚಟುವಟಿಕೆ ಹೆಚ್ಚಲಿದೆ ಎಂದರು.

ತಹಸೀಲ್ದಾರ ಜಿ.ಕೆ. ಅಮರೇಶ, ತಾಪಂ ಇಒ ಡಾ.ಆನಂದ್‌ಕುಮಾರ್, ಬಿಇಒ ಮೈಲೇಶ್ ಬೇವೂರು, ಗ್ರಾಪಂ ಅದ್ಯಕ್ಷ ಶ್ರೀಕಾಂತ್, ಉಪಾಧ್ಯಕ್ಷೆ ಮಲ್ಲಮ್ಮ, ಸದಸ್ಯರಾದ ಬಸವರಾಜ, ಉಮೇಶ, ಎಂ.ಸಿದ್ದಪ್ಪ, ಗಂಗಮ್ಮ ಮುಖಂಡರಾದ ಎಸ್. ರಾಜೇಂದ್ರಪ್ರಸಾದ್, ಜಿಲಾನ್ ಭಾಷ, ಕಲ್ಲೇಶಪ್ಪ, ಚನ್ನಬಸವನಗೌಡ, ಮಹಾಂತೇಶ್, ವಿಜಯ, ರಾಜಶೇಖರ, ಈಶಣ್ಣ, ಸುರೇಶ, ಚಿನ್ನಪ್ಪ ಇತರರು ಇದ್ದರು. ಕಾನಾಮಡುಗು ಶರಣಪ್ಪ ನಿರ್ವಹಿಸಿದರು. ನಂತರ ಜನರಿಂದ ಅರ್ಜಿ ಸ್ವೀಕರಿಸಿದ ಶಾಸಕರು, ಸಮಸ್ಯೆಗಳ ಪರಿಹಾರಕ್ಕೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.