ನೆನಗುದಿಗೆ ಬಿದ್ದಿರುವ ಯೋಜನೆಗಳಿಗೆ ಮರುಜೀವ ಕೊಡಬೇಕು: ಮಾಜಿ ಸಚಿವ ಬಿ.ಶಿವರಾಂ

| Published : Jun 30 2024, 12:45 AM IST

ನೆನಗುದಿಗೆ ಬಿದ್ದಿರುವ ಯೋಜನೆಗಳಿಗೆ ಮರುಜೀವ ಕೊಡಬೇಕು: ಮಾಜಿ ಸಚಿವ ಬಿ.ಶಿವರಾಂ
Share this Article
  • FB
  • TW
  • Linkdin
  • Email

ಸಾರಾಂಶ

ಪಕ್ಷ ಸಂಘಟನೆಗೆ ನೂತನ ಸಂಸದ ಶ್ರೇಯಸ್ ಪಟೇಲ್ ಹೆಚ್ಚಿನ ಗಮನ ನೀಡಬೇಕು ಎಂದು ಮಾಜಿ ಸಚಿವ ಬಿ.ಶಿವರಾಂ ಹೇಳಿದರು. ಬೇಲೂರಲ್ಲಿ ಆಯೋಜಿಸಿದ ಲೋಕಸಭಾ ಸದಸ್ಯ ಶ್ರೇಯಸ್‌ ಎಂ. ಪಟೇಲ್ ಅವರಿಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ನೂತನ ಸಂಸದ ಶ್ರೇಯಸ್‌ಗೆ ಅಭಿನಂದನಾ ಸಮಾರಂಭ

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನಲ್ಲಿ ಹೆಬ್ಬಾಳು ಏತ ನೀರಾವರಿ, ಎತ್ತಿನಹೊಳೆ, ರಣಘಟ್ಟ, ಕರಗಡ, ಯೋಜನೆಗಳು ನೆನಗುದಿಗೆ ಬಿದ್ದಿದ್ದು ಇದಕ್ಕೆ ಮರುಜೀವ ಕೊಡುವುದರ ಜತೆಗೆ ಪಕ್ಷ ಸಂಘಟನೆಗೆ ನೂತನ ಸಂಸದ ಶ್ರೇಯಸ್ ಪಟೇಲ್ ಹೆಚ್ಚಿನ ಗಮನ ನೀಡಬೇಕು ಎಂದು ಮಾಜಿ ಸಚಿವ ಬಿ.ಶಿವರಾಂ ಹೇಳಿದರು.

ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನೂತನ ಲೋಕಸಭಾ ಸದಸ್ಯ ಶ್ರೇಯಸ್‌ ಎಂ. ಪಟೇಲ್ ಅವರಿಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ತಾವು ಸೋಲು ಕಂಡರೂ ಎದೆಗುಂದದೆ ಮನೆಯಲ್ಲಿ ಕೂರದೆ ಪ್ರತಿನಿತ್ಯ ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡಿ ಜನರ ಕುಂದು ಕೊರತೆಗಳನ್ನು ಆಲಿಸಿ ತಮ್ಮ ಕೈಲಾದಷ್ಟು ಸಮಸ್ಯೆಗಳನ್ನು ಬಗೆಹರಿಸಿರುತ್ತೇನೆ ಎಂದು ಶ್ರೇಯಸ್‌ ಹೇಳಿದ್ದಾರೆ. ಜನತೆ ವಿಶ್ವಾಸವನ್ನು ಬೆಳೆಸಿಕೊಂಡು ಕೆಲಸ ಮಾಡಿದ ಕಾರಣದಿಂದಲೇ ಇಂದು ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚು ಮತಗಳು ಲಭಿಸಿವೆ ಎಂದು ಹೇಳಿದರು.

ಗೆಲುವು ಕಂಡಾಕ್ಷಣ ಇಷ್ಟಕ್ಕೆ ಸುಮ್ಮನಿರಬಾರದು, ಮುಂದಿನ ದಿನದಲ್ಲಿ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟನೆಗೆ ಮುಂದಾಗಬೇಕಿದೆ. ತಾಲೂಕಿನಲ್ಲಿ ವಿದ್ಯುತ್ ಶಕ್ತಿ ಸಮಿತಿ, ಆರೋಗ್ಯ ಸಮಿತಿ, ಕೆಡಿಪಿ ಇನ್ನು ಮುಂತಾದ ಸಮಿತಿಗೆ ರಚಿಸಿದರೂ ಸರಿಯಾಗಿ ಕೆಲಸ ಮಾಡಲು ಯಾರು ಅಡ್ಡಿಯಾಗುತ್ತಿದ್ದಾರೆ ಎಂಬುದರ ಬಗ್ಗೆ ಚರ್ಚೆಯಾಗಬೇಕಿದೆ. ಸ್ಥಳೀಯ ಶಾಸಕರಿಗೆ ಬಗರ್‌ ಹುಕುಂ ಸಮಿತಿ ಬಗ್ಗೆ ನಿರಾಶಕ್ತಿ ಹೊಂದಿದ್ದು ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು .

ನೂತನ ಲೋಕಸಭಾ ಸದಸ್ಯ ಶ್ರೇಯಸ್‌ ಎಂ.ಪಟೇಲ್ ಮಾತನಾಡಿ, ಬೇಲೂರು ಕ್ಷೇತ್ರ ಸೇರಿದಂತೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಅಪಾರ ಪ್ರಮಾಣದಲ್ಲಿ ಸಮಸ್ಯೆಗಳಿದ್ದು ಅವುಗಳ ಪರಿಹಾರಕ್ಕೆ ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಮುಂದೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಮಾಜಿ ಪುರಸಭಾ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಮಾತನಾಡಿ, ಜಾತಿ ಹೆಸರು ಹೇಳಿಕೊಂಡು ಪಕ್ಷಕ್ಕೆ ಬಂದು ಬೂಟಾಟಿಕೆ ಆಟ ಆಡುವ ನಾಯಕರ ಮಾತನ್ನು ಸಂಸದರು ಕೇಳಬಾರದು, ಕಾರಣ ತಾಲೂಕಿಗೆ ಬಿ.ಶಿವರಾಂ ಒಬ್ಬರೇ ಪ್ರಶ್ನಾತೀತ ನಾಯಕರು, ಅವರು ಗೆದ್ದಿದ್ದರೆ ಬೇಲೂರಿನ ಸಮಗ್ರ ಅಭಿವೃದ್ಧಿಯಾಗುತಿತ್ತು. ಆದರೆ ಅವರ ಸೋಲಲು ಬೆನ್ನಿಗೆ ಚೂರಿ ಹಾಕಿದವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುತ್ತದೆ ಎಂದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ನಿಶಾಂತ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್, ಬಿ.ಎಂ.ಸಂತೋಷ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ದಾವೂದ್, ಮಹಿಳಾ ಅಧ್ಯಕ್ಷೆ ತೀರ್ಥಕುಮಾರಿ, ಸೈಯದ್‌ ತೌಫಿಕ್, ಶಾಂತಕುಮಾರ್, ಕರವೇ ಚಂದ್ರಶೇಖರ್, ಪ್ರಸನ್ನ, ಯೂತ್ ಅಧ್ಯಕ್ಷ ಆಶೋಕ್, ಗೋಪಿನಾಥ್, ತಾರನಾಥ್ ಮತ್ತಿತರರು ಹಾಜರಿದ್ದರು.