ರೈತಪರ ಚಟುವಟಿಕೆಗೆ ಸಹಕರಿಸುವ ಭರವಸೆ

| Published : Aug 26 2024, 01:35 AM IST

ಸಾರಾಂಶ

ಕೃಷಿಕ ಸಮಾಜದಿಂದ ಬರುವ ಆದಾಯದ ಹಣವನ್ನು ಸಂಕಷ್ಟದಲ್ಲಿರುವ ತಾಲೂಕಿನ ರೈತ ಮಕ್ಕಳಿಗೆ ಬಳಸಲಾಗುವುದು. ಕೃಷಿಕ ಸಮಾಜಕ್ಕೆ ಯಾವುದೇ ರಾಜಕೀಯ ಬೆರಸದೇ ಸಂಘಟನೆ ಮಾಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರು ಬೆಳೆಯುವ ಬೆಳೆಗಳಿಗೆ ಬೆಲೆ ನಿಗದಿ ಮಾಡಲಿ.

ಕನ್ನಡಪ್ರಭ ವಾರ್ತೆ ಮುಳಬಾಗಿಲು ಕೃಷಿಕ ಸಮಾಜದ ಕಟ್ಟಡದ ಮೇಲ್ಭಾಗದಲ್ಲಿ ಸಭಾಂಗಣ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ೧೦ ಲಕ್ಷ ರು.ಗಳನ್ನು ನೀಡುವುದಾಗಿ ಶಾಸಕ ಸಮೃದ್ದಿ ಮಂಜುನಾಥ್ ಭರವಸೆ ನೀಡಿದರು. ನಗರದ ಆರ್.ಎಂ.ಸಿ ಯಾಡ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಕೃಷಿಕ ಸಮಾಜದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ತಾಲೂಕು ಕೃಷಿಕ ಸಮಾಜ ನಡೆಸುವ ರೈತಪರ ಕಾರ್ಯಚಟುವಟಿಕೆಗಳಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇನೆಂದು ತಿಳಿಸಿದರು. ಸಂಸದರ ನಿಧಿಯಿಂದ ₹15 ಲಕ್ಷ

ಸಂದಸ ಎಂ.ಮಲ್ಲೇಶ್‌ಬಾಬು ಮಾತನಾಡಿ, ಸುಸಜ್ಜಿತ ಸಭಾಂಗಣವನ್ನು ನಿರ್ಮಾಣ ಮಾಡಲು ಹಾಗೂ ಇತರೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಳ್ಳಲು ಸಂಸದರ ನಿಧಿಯಿಂದ ೧೫ ಲಕ್ಷ ರೂಗಳನ್ನು ಮಂಜೂರು ಮಾಡಿಸುವುದಾಗಿ ತಿಳಿಸಿದರು.ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಡಗೂರು ಡಿ.ಎಲ್ ನಾಗರಾಜ್ ಮಾತನಾಡಿ, ರಾಜ್ಯದಲ್ಲೇ ಮಾಲೂರು ಮತ್ತು ಶ್ರೀನಿವಾಸಪುರ ತಾಲೂಕು ಕೃಷಿಕ ಸಮಾಜ ಮಾದರಿಯಾಗಿದ್ದು ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯಿಂದ ಕಟ್ಟಡಗಳನ್ನು ನಿರ್ಮಿಸಲು ನಿವೇಶನಗಳನ್ನು ನೀಡಿ ಸಹಕರಿಸಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಉದ್ಯಮಿ ಡೆಕ್ಕನ್ ಶಶಿಕಾಂತ್ ಸೇರಿದಂತೆ ಮತ್ತಿತರೆ ಧಾನಿಗಳು ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ನೆರವನ್ನು ನೀಡಿದ್ದರಿಂದ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲು ಸಾದ್ಯವಾಯಿತು ಎಂದು ತಿಳಿಸಿದರು.ರಾಜಕೀಯ ಬೆರೆಸದೆ ಸಂಘಟನೆ

ಕೃಷಿಕ ಸಮಾಜದಿಂದ ಬರುವ ಆದಾಯದ ಹಣವನ್ನು ಸಂಕಷ್ಟದಲ್ಲಿರುವ ತಾಲೂಕಿನ ರೈತ ಮಕ್ಕಳಿಗೆ ಬಳಸಲಾಗುವುದು ಎಂದರಲ್ಲದೆ ಕೃಷಿಕ ಸಮಾಜಕ್ಕೆ ಯಾವುದೇ ರಾಜಕೀಯ ಬೆರಸದೇ ಸಂಘಟನೆ ಮಾಡಲಾಗುತ್ತಿದೆ ಎಂದರಲ್ಲದೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರು ಬೆಳೆಯುವ ಬೆಳೆಗಳಿಗೆ ಬೆಲೆಯನ್ನು ನಿಗಧಿ ಮಾಡುತ್ತಿಲ್ಲ ಎಂದು ಆರೋಪಿಸಿದರಲ್ಲದೆ ರೈತರಿಗೆ ಪ್ರತ್ಯೇಕ ಮೀಸಲಾತಿ ಒದಗಿಸಲು ಮುಳಬಾಗಿಲುನಿಂದಲೇ ಹೋರಾಟ ನಡೆಸುತ್ತೇವೆಂದು ಎಚ್ಚರಿಸಿದರು.ಪ್ರಗತಿಪರ ರೈತಗೆ ಸನ್ಮಾನ

ಪ್ರಗತಿಪರ ರೈತರಾದ ಡಿ. ಕುರುಬರಹಳ್ಳಿ ಪಾಪಮ್ಮ, ಚಿಕ್ಕಗುಟ್ಟಹಳ್ಳಿ ಸಿ. ನಾಗರಾಜ್, ಹಿರಣ್ಯಗೌಡನಹಳ್ಳಿ ನಾರಾಯಣಮ್ಮ, ಕೀಳುಹೊಳಲಿ ವೆಂಕಟೇಶಪ್ಪ, ತೊಂಡಹಳ್ಳಿ ಪ್ರಭಾಕರ್ ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಎಸ್.ಆರ್. ಮಂಜುನಾಥಗೌಡ, ರಾಜ್ಯ ನಿರ್ದೇಶಕ ಹೆಚ್. ಹನುಮಂತಪ್ಪ, ಹಿರಿಯ ವಕೀಲ ಕೆ.ವಿ. ಶಣಕರಪ್ಪ, ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಸಿ. ನೀಲಕಂಠೇಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಆರ್. ರಾಜೇಂದ್ರಗೌಡ, ಡೆಕ್ಕನ್ ಶಶಿಕಾಂತ್, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಮೋತಕಪಲ್ಲಿ ಎಂ. ಸುರೇಶ್, ನಿದೇರ್ಶಕರಾದ ತಾವರೆಕೆರೆ ನಾರಾಯಣರೆಡ್ಡಿ, ಗುಜ್ಜನಹಳ್ಳಿ ಮಂಜುನಾಥ್, ಎಮ್ಮೇನತ್ತ ನಾಗರಾಜರೆಡ್ಡಿ, ಬಟ್ಲಭಾವನಹಳ್ಳಿ ಚಲಪತಿ, ಆರ್. ಜಗದೀಶ್, ಶ್ರೀನಿವಾಸ್, ನಾಗಾರ್ಜುನ, ಬಾಲಕೃಷ್ಣ, ಕೃಷ್ಣಪ್ಪ ಇದ್ದರು.