ಅರ್ಹತೆ ಉಲ್ಲಂಘಿಸಿ ಮುಂಬಡ್ತಿ: ಕ್ರಮಕ್ಕೆ ಆಗ್ರಹ

| Published : Dec 16 2023, 02:01 AM IST

ಸಾರಾಂಶ

ಅರ್ಹತೆ ಉಲ್ಲಂಘಿಸಿ ಮುಂಬಡ್ತಿ ಪಡೆದಿದ್ದು, ಸೂಕ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಿಂದ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಇದರಲ್ಲಿ ಅಧಿಕಾರ ದುರುಪಯೋಗವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಸರ್ಕಾರಿ ಆದೇಶ ಉಲ್ಲಂಘನೆ ಮಾಡಿ ಅರ್ಹತೆ ಇಲ್ಲದಿದ್ದರೂ ಸ್ವಂತ ವೇತನ ಶ್ರೇಣಿಯ ಮೇಲೆ ಮುಂಬಡ್ತಿ ಪಡೆದಿರುವ ಪುಂಡಲೀಕ ಮಾನವರ ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಅಪರ ಜಿಲ್ಲಾಧಿಕಾರಿಗೆ ಈಚೆಗೆ ಮನವಿ ಸಲ್ಲಿಸಲಾಗಿದೆ.

ಜಿಲ್ಲಾ ಸಂಘಟನಾ ಸಂಚಾಲಕ ಶ್ರೀಧರ ವಾಘಮೋರೆ ಮಾತನಾಡಿ, ಉಲ್ಲೇಖಿತ ಪತ್ರದಲ್ಲಿನ ಸರ್ಕಾರದ ಆದೇಶದಂತೆ ಯಾವುದೇ ಇಲಾಖೆಯಲ್ಲಿನ ಕೆಳದರ್ಜೆ ನೌಕರರನ್ನು ಮೇಲ್ದರ್ಜೆ ಹುದ್ದೆಗೆ ಸ್ವಂತ ವೇತನಶ್ರೇಣಿ ಮೇಲೆ ನೇಮಕ ಮಾಡುವುದು ಮತ್ತು ನಿಯೋಜನೆ ಮಾಡುವುದನ್ನು ಕಡ್ಡಾಯವಾಗಿ ನಿರ್ಬಂಧಿಸಿದೆ. ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಸರ್ಕಾರಕ್ಕೆ ವಂಚಿಸಿ, ಉನ್ನತ ಹುದ್ದೆ ಪಡೆದಿರುವ ಅಧಿಕಾರಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದರೂ ಕೂಡಾ ಪುಂಡಲೀಕ ಮಾನವರ ಇವರು ಜಿಲ್ಲಾ ಉಪನಿರ್ದೇಶಕರ ಹುದ್ದೆಗೆ ವಾರ್ಮ ಮಾರ್ಗ ಅನುಸರಿಸಿ ಅರ್ಹತೆ ಇಲ್ಲದಿದ್ದರೂ ಉನ್ನತೆ ಹುದ್ದೆ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಇಂಥ ಅನೇಕ ಅಧಿಕಾರಗಳು ಇದ್ದಾರೆ. ಸೇವಾ ನಿಯಮವನ್ನು ಗಾಳಿಗೆ ತೂರಿ ಸ್ವಂತ ವೇತನ ಶ್ರೇಣಿಯ ಮೇಲೆ ಜಿಲ್ಲಾ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರು ಮೊರಾರ್ಜಿ ದೇಸಾಯಿ ವಸತಿಶಾಲೆಗಳಲ್ಲಿ ೬ನೇ ತರಗತಿಗೆ ೨೦೨೩ಯ ೨೪ ನೇ ಸಾಲಿಗೆ ಪ್ರವೇಶ ಪಡೆಯಲು ಅರ್ಹರಾದ ವಿದ್ಯಾರ್ಥಿಗಳನ್ನು ಗಣನೆಗೆ ತೆಗೆದುಕೊಳ್ಳದೇ ಕೆಇಎ ಬೋರ್ಡ್ ಕಳುಹಿಸಿದ ಉಳಿಕೆ ಪಟ್ಟಿಯಲ್ಲಿನ ವಿದ್ಯಾರ್ಥಿಗಳಿಗೆ ಅನ್ಯಾಯವೆಸಗಿ ನಿಯಮವನ್ನು ಗಾಳಿಗೆ ತೂರಿದ್ದಾರೆ. ತಮಗೆ ಬೇಕಾದವರ ಪ್ರವೇಶಕ್ಕೆ ಶಿಫಾರಸು ಮಾಡಿ ಅನ್ಯಾಯವೆಸಗಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಕಾರಣ ಇವರ ವಿರುದ್ಧ ಸೂಕ್ತ ಕ್ರಮ ಕ್ರಮಕೈಗೊಳ್ಳಲು ಮುಂದಾಗಬೇಕು. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಗಮೇಶ ಇರಸೂರ, ನಾಗನಾಥ ಗಾಯಕವಾಡ, ಸಂಜಯ ಬಂಗಾರತಳ, ಹಣಮಂತ ಇರಸೂರ, ಮಲ್ಲಿಕಾರ್ಜುನ ಶಿವಶರಣರ, ಅಭಿಷೇಕ ಶಿವಶರಣ, ಮಹಾದೆವ ಶಿವಶರಣ, ಆಕಾಶ ಇರಸೂರ, ನಾಗೇಂದ್ರ ವಾಗಮೋರೆ, ಮಹಾದೇವ ಬಂಗಾರತಳ, ಚನ್ನಪ್ಪ ಇರಸೂರ, ದಿಲೀಪ ಶಿವಶರಣ, ಮತ್ತಿತರರು ಉಪಸ್ಥಿತರಿದ್ದರು.