ಅಪಪ್ರಚಾರ: ಗೌಡರ ಪರ ನಿಂತ ಕೈ ಕಾರ್ಯಕರ್ತರು

| Published : Oct 11 2025, 12:02 AM IST

ಸಾರಾಂಶ

ಕೊಪ್ಪ, ನಾನು ಶಾಸಕನಾದ ನಂತರದಿಂದ ಬಿಜೆಪಿಗರು ನನ್ನ ಮೇಲೆ ಹಾಗೂ ಕಾರ್ಯಕರ್ತರ ಮೇಲೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಈಗ ನನ್ನ ಮೇಲೆ ಲೋಕಾಯುಕ್ತದಲ್ಲಿ ಸುಳ್ಳು ಎಫ್‌ಐಆರ್ ದಾಖಲು ಮಾಡಿದ್ದಾರೆ. ಆದರೇ ನಾನು ಜನರು ಮತ್ತು ಧರ್ಮಕ್ಕೆ ಹತ್ತಿರ ಇದ್ದೇನೆ. ಭಯಪಟ್ಟಿಲ್ಲ ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.

- ಕಾಂಗ್ರೆಸ್ ಆಯೋಜಿಸಿದ್ದ ಶೃಂಗೇರಿ ಕ್ಷೇತ್ರ ಮಟ್ಟದ ಕಾರ್ಯಕರ್ತರ ಸಮ್ಮಿಲನ ಸಭೆ

ಕನ್ನಡಪ್ರಭ ವಾರ್ತೆ, ಕೊಪ್ಪ

ನಾನು ಶಾಸಕನಾದ ನಂತರದಿಂದ ಬಿಜೆಪಿಗರು ನನ್ನ ಮೇಲೆ ಹಾಗೂ ಕಾರ್ಯಕರ್ತರ ಮೇಲೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಈಗ ನನ್ನ ಮೇಲೆ ಲೋಕಾಯುಕ್ತದಲ್ಲಿ ಸುಳ್ಳು ಎಫ್‌ಐಆರ್ ದಾಖಲು ಮಾಡಿದ್ದಾರೆ. ಆದರೇ ನಾನು ಜನರು ಮತ್ತು ಧರ್ಮಕ್ಕೆ ಹತ್ತಿರ ಇದ್ದೇನೆ. ಭಯಪಟ್ಟಿಲ್ಲ ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.ಪಟ್ಟಣದ ಪುರಭವನದಲ್ಲಿ ಶುಕ್ರವಾರ ಕಾಂಗ್ರೆಸ್ ಆಯೋಜಿಸಿದ್ದ ಶೃಂಗೇರಿ ಕ್ಷೇತ್ರ ಮಟ್ಟದ ಕಾರ್ಯಕರ್ತರ ಸಮ್ಮಿಲನ ಸಭೆ ಉದ್ದೇಶಿಸಿ ಮಾತನಾಡಿ, ಮಾಜಿ ಶಾಸಕ ಜೀವರಾಜ್ ಮತ್ತು ಹಿಂಬಾಲಕರು ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ನನ್ನ ಮೇಲೆ ಸದಾ ಅಪಪ್ರಚಾರ ನಡೆಸಿ ಜನತೆ ದಾರಿ ತಪ್ಪಿಸುತ್ತಿದ್ದಾರೆ. ಇದರಿಂದ ಅವರು ಸಾಧಿಸುವುದು ಏನು ಇಲ್ಲ. ಜನತಾ ನ್ಯಾಯಾಲಯದಲ್ಲಿ ಈಗಾಗಲೇ ಆದೇಶವಾಗಿದೆ ಎಂದರು.ಸಿದ್ದಾರ್ಥ್ ಹೆಗ್ಡೆ ಕುಟುಂಬದ ಜತೆ ನಮ್ಮ ಕುಟುಂಬ ಸುಮಾರು ೩೦ ವರ್ಷಗಳಿಂದ ಉತ್ತಮ ಸಂಬಂದ ಹೊಂದಿದೆ. ನಾವು ಗಳು ನ್ಯಾಯಯುತವಾಗಿ ವ್ಯವಹಾರ ನಡೆಸಿದ್ದೇವೆ. ಆದರೇ, ಜೀವರಾಜ್ ರಾಜಕೀಯ ಉದ್ದೇಶದಿಂದ ಅಪಪ್ರಚಾರ ನಡೆಸುತ್ತಿದ್ದಾರೆ. ನಾನು ಲೋಕಾಯುಕ್ತಕ್ಕೆ ಸಂಪೂರ್ಣ ದಾಖಲೆ ನೀಡಿದ್ದೇನೆ. ಶೀಘ್ರ ಸತ್ಯ ಹೊರ ಬರಲಿದೆ ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಪಿ ಅಂಶುಮಂತ್ ಮಾತನಾಡಿ, ಬಿಜೆಪಿಯವರು ನೇರ ರಾಜಕಾರಣ ಮಾಡುವುದಿಲ್ಲ. ಹಿಂಬಾಗಿಲಿ ನಿಂದ ಅಧಿಕಾರ ಪಡೆಯಲು ಮುಂದಾಗುತ್ತಾರೆ. ಶಾಸಕ ರಾಜೇಗೌಡರ ವಿಷಯದಲ್ಲೂ ಸಹ ಬಿಜೆಪಿ ಇಲ್ಲಸಲ್ಲದ ಕೇಸ್‌ಗಳನ್ನು ಹಾಕಿ ಗೊಂದಲ ಮಾಡುತ್ತಿದೆ. ನಮ್ಮ ಕಾರ್ಯಕರ್ತರು ಶಾಸಕರು ಜತೆಯಲ್ಲಿ ಸೈನಿಕರಂತೆ ನಿಲ್ಲುತ್ತೇವೆ ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಂ ಸತೀಶ್ ಮಾತನಾಡಿ, ಮಾಜಿ ಸಚಿವ ಡಿ.ಎನ್ ಜೀವರಾಜ್ ಹಾಗೂ ಬಿಜೆಪಿ ಮುಖಂಡ ದಿನೇಶ್ ಹೊಸೂರು ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರು ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಸುಳ್ಳಿನ ಕಂತೆ ಕಟ್ಟಿ ಮತದಾರರನ್ನು ದಾರಿ ತಪ್ಪಿಸುತ್ತಿದ್ದಾರೆ. ಜೀವರಾಜ್ ಶಾಸಕ ರಾಗಿದ್ದ ವೇಳೆಯಲ್ಲಿ ಕ್ಷೇತ್ರಕ್ಕೆ ಕಳಂಕ ತಂದಿದ್ದರು. ಅವರ ಕಾಲದಲ್ಲಿ ಅತ್ಯಾಚಾರ ಕೇಸ್, ಸರ್ಕಾರಿ ಕಡತ ತಿದ್ದುಪಡಿ ಸೇರಿದಂತೆ ಅನೇಕ ಪ್ರಕರಣಗಳು ನಡೆದಿವೆ.ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಜೀವರಾಜ್ ಅವರು ನಮ್ಮ ಶಾಸಕರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಶಾಬನ್ ರಂಜಾನ್ ಟ್ರಸ್ಟ್‌ ವ್ಯವಹಾರ 2 ಕುಟುಂಬಗಳಿಗೆ ಸೇರಿದ್ದು, ಈ ಕಾನೂನು ಪ್ರಕಾರ ನಡೆದಿದೆ. ವ್ಯವಹಾರ ನಡೆಯುವ ಮೊದಲೇ ತೀರಿದ ಸಾಲವನ್ನು ನಂತರದಲ್ಲಿ ಶಾಸಕರ ಪತ್ನಿ ಡಿ.ಕೆ ಪುಷ್ಟರವರು ಪತ್ರ ಮಾಡಿದ್ದಾರೆ. ಇದರ ಬಗ್ಗೆ ದಾಖಲೆಗಳು ಇದೆ ಎಂದು ತಿಳಿಸಿದರು.ಕಾನೂನಿನಂತೆ ನಡೆದ ವ್ಯವಹಾರವನ್ನ ಜೀವರಾಜ್ ರಾಜಕೀಯಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ರಾಜೇಗೌಡರಿಗೆ ಗೆಲುವಾ ಗುತ್ತದೆ. ಕಾರ್ಯಕರ್ತರು ದೃತಿಗೆಡುವ ಅವಶ್ಯಕತೆಯಿಲ್ಲ. ಬಿಜೆಪಿಗರ ಸುಳ್ಳು ಆರೋಪ ಸೋಲುತ್ತದೆ ಎಂದರು.ಕೆಪಿಸಿಸಿ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ, ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ ಮುಂತಾದವರು ಮಾತನಾಡಿದರು. ಸಭೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಅಸಗೋಡು ನಾಗೇಶ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಓಣಿತೋಟ ರತ್ನಾಕರ್, ಕೊಪ್ಪ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನುಗ್ಗಿ ಮಂಜುನಾಥ್, ನವೀನ್ ಮಾವಿನಕಟ್ಟೆ, ಅನ್ನಪೂರ್ಣ ನರೇಶ್, ಜುಬೇದ ಮುಂತಾದವರಿದ್ದರು.