ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರಾಥಮಿಕ ಹಾಗೂ ದ್ವಿತೀಯ ಮೂಲಗಳಿಂದ ಆಳವಾದ ಮಾಹಿತಿ ಸಂಗ್ರಹಿಸುವ ಕೌಶಲ್ಯವನ್ನು ಕರಗತ ಮಾಡಿಕೊಳ್ಳಬೇಕು. ಏಕೆಂದರೆ, ಸ್ಪಷ್ಟವಾದ ವಿಷಯವನ್ನು ಆಯ್ದುಕೊಂಡು ಸಂಶೋಧನೆ ನಡೆಸಿದರೆ ಮಾತ್ರ ಉತ್ತಮ ಸುದ್ದಿ ನೀಡಲು ಸಾಧ್ಯ ಎಂದು ಮೂಡುಬಿದಿರೆ ಆಳ್ವಾಸ್‌ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಡಾ. ಶ್ರೀನಿವಾಸ್ ಹೊಡೆಯಾಲ ಹೇಳಿದರು.

ಪುತ್ತೂರು : ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರಾಥಮಿಕ ಹಾಗೂ ದ್ವಿತೀಯ ಮೂಲಗಳಿಂದ ಆಳವಾದ ಮಾಹಿತಿ ಸಂಗ್ರಹಿಸುವ ಕೌಶಲ್ಯವನ್ನು ಕರಗತ ಮಾಡಿಕೊಳ್ಳಬೇಕು. ಏಕೆಂದರೆ, ಸ್ಪಷ್ಟವಾದ ವಿಷಯವನ್ನು ಆಯ್ದುಕೊಂಡು ಸಂಶೋಧನೆ ನಡೆಸಿದರೆ ಮಾತ್ರ ಉತ್ತಮ ಸುದ್ದಿ ನೀಡಲು ಸಾಧ್ಯ ಎಂದು ಮೂಡುಬಿದಿರೆ ಆಳ್ವಾಸ್‌ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಡಾ. ಶ್ರೀನಿವಾಸ್ ಹೊಡೆಯಾಲ ಹೇಳಿದರು.

ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ವಿವೇಕಾನಂದ ಸಂಶೋಧನಾ ಕೇಂದ್ರ ಹಾಗೂ ಐಕ್ಯೂಎಸಿ ಇದರ ಸಹಯೋಗದೊಂದಿಗೆ ನಡೆದ ‘ರಿಸರ್ಚ್ ಮೆಥಡಾಲಜಿ ಅಂಡರ್ ಸ್ಟ್ಯಾಂಡಿಂಗ್ ಬೇಸಿಕ್ಸ್‌’ ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು.ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಬಿ .ಅಧ್ಯಕ್ಷೀಯ ನುಡಿಗಳನ್ನಾಡಿ, ಒಂದು ವಿಷಯವನ್ನು ನೋಡುವ ದೃಷ್ಟಿಕೋನವೇ ನಿಜವಾದ ಸಂಶೋಧನೆ. ಅದರಲ್ಲೂ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಸಂಶೋಧನಾ ಪ್ರವೃತ್ತಿ ಅತ್ಯಂತ ಅಗತ್ಯ ಎಂದರು.

ವಿದ್ಯಾರ್ಥಿನಿ ದೀಕ್ಷಾ ಜೆ ರೈ ಸ್ವಾಗತಿಸಿದರು. ಪ್ರಸಾದಿನಿ ಕೆ ತಿಂಗಳಾಡಿ ವಂದಿಸಿದರು. ಧನ್ಯಶ್ರೀ ನಿರೂಪಿಸಿದರು.