ಕನ್ನಡಪ್ರಭ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಿಂದ ನಗರದ ಮೈಸೂರು ರಸ್ತೆಯ ನಾಯಂಡಹಳ್ಳಿ ನೈಸ್‌ ರಸ್ತೆಯ ಜಂಕ್ಷನ್‌ ಬಳಿಯ ನಂದಿ ಲಿಂಕ್‌ ಗ್ರೌಂಡ್ಸ್‌ನಲ್ಲಿ ಆಯೋಜಿಸಿರುವ 3 ದಿನಗಳ ‘ಪ್ರಾಪರ್ಟಿ ಆ್ಯಂಡ್ ಲೈಫ್‌ಸ್ಟೈಲ್ ಎಕ್ಸ್‌ಪೋ-2026’ ಅದ್ಭುತ ಜನಸ್ಪಂದನೆ ವ್ಯಕ್ತವಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕನ್ನಡಪ್ರಭ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಿಂದ ನಗರದ ಮೈಸೂರು ರಸ್ತೆಯ ನಾಯಂಡಹಳ್ಳಿ ನೈಸ್‌ ರಸ್ತೆಯ ಜಂಕ್ಷನ್‌ ಬಳಿಯ ನಂದಿ ಲಿಂಕ್‌ ಗ್ರೌಂಡ್ಸ್‌ನಲ್ಲಿ ಆಯೋಜಿಸಿರುವ 3 ದಿನಗಳ ‘ಪ್ರಾಪರ್ಟಿ ಆ್ಯಂಡ್ ಲೈಫ್‌ಸ್ಟೈಲ್ ಎಕ್ಸ್‌ಪೋ-2026’ ಅದ್ಭುತ ಜನಸ್ಪಂದನೆ ವ್ಯಕ್ತವಾಯಿತು.

ಭಾನುವಾರ ಬೆಳಗ್ಗಿನಿಂದಲೇ ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ, ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ತಮ್ಮ ಕನಸಿನ ಮನೆ ನಿರ್ಮಾಣಕ್ಕೆ ಬೇಕಾದ ಪ್ರಾಪರ್ಟಿ, ಪ್ಲಾಟ್, ವಿಲ್ಲಾ, ಅಪಾರ್ಟ್‌ಮೆಂಟ್ ಹಾಗೂ ಭೂಮಿಯ ಬಗ್ಗೆ ಮಾಹಿತಿ ಪಡೆಯಲು ಸಾರ್ವಜನಿಕರು ಆಸಕ್ತಿಯಿಂದ ವಿವಿಧ ಬಿಲ್ಡರ್‌ಗಳು ಮತ್ತು ಡೆವಲಪರ್‌ಗಳ ಮಳಿಗೆಗಳಿಗೆ ಭೇಟಿ ನೀಡಿದರು. ಒಂದೇ ಸ್ಥಳದಲ್ಲಿ ಹಲವು ಪ್ರಾಪರ್ಟಿ ಆಯ್ಕೆಗಳನ್ನು ಪರಿಶೀಲಿಸುವ ಅವಕಾಶ ಜನರಿಗೆ ಈ ಎಕ್ಸ್‌ಪೋದಲ್ಲಿ ದೊರೆಯಿತು.

ಪ್ರಾಪರ್ಟಿ ಮಾತ್ರವಲ್ಲದೆ, ಜನರ ದೈನಂದಿನ ಜೀವನಶೈಲಿಗೆ ಅಗತ್ಯವಾಗಿರುವ ಫ್ಯಾಷನ್, ಸೀರೆ, ಜ್ಯುವೆಲರಿ, ಫರ್ನಿಚರ್, ಕಾರ್ಪೆಟ್, ಹೆಲ್ತ್‌ಕೇರ್ ಹಾಗೂ ವಿವಿಧ ಲೈಫ್‌ಸ್ಟೈಲ್ ಉತ್ಪನ್ನಗಳ ಮಳಿಗೆಗಳೂ ವಿಶೇಷ ಆಕರ್ಷಣೆಯಾಗಿದ್ದವು. ಕುಟುಂಬ ಸಮೇತರಾಗಿ ಆಗಮಿಸಿದ ಜನರು ಶಾಪಿಂಗ್ ಮಾಡುವ ಮೂಲಕ ಎಕ್ಸ್‌ಪೋದ ವೈವಿಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿದರು.

ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಅವರು ಎಕ್ಸ್‌ಪೋಗೆ ಭೇಟಿ ನೀಡಿ, ವಿವಿಧ ಮಳಿಗೆಗಳನ್ನು ವೀಕ್ಷಿಸಿ ಮಾಹಿತಿ ಪಡೆದರು. 3 ದಿನಗಳ ಕಾಲ ನಡೆದ ಎಕ್ಸ್‌ಪೋದಲ್ಲಿ ಭಾಗವಹಿಸಿದ್ದ ಎಲ್ಲಾ ಮಳಿಗೆಗಳಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದ ಸಮೂಹ ಸಂಪಾದಕೀಯ ನಿರ್ದೇಶಕ ರವಿ ಹೆಗಡೆ ಅವರು ಭೇಟಿ ನೀಡಿ, ಪ್ರತಿಯೊಬ್ಬ ಸ್ಟಾಲ್ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ, ಅವರ ಭಾಗವಹಿಸುವಿಕೆಗೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಎಲ್ಲಾ ಮಳಿಗೆಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. 3 ದಿನಗಳ ಕಾಲ ನಡೆದ ಈ ಪ್ರಾಪರ್ಟಿ ಆ್ಯಂಡ್‌ ಲೈಫ್‌ಸ್ಟೈಲ್ ಎಕ್ಸ್‌ಪೋ, ಪ್ರಾಪರ್ಟಿ ಖರೀದಿದಾರರು, ಹೂಡಿಕೆದಾರರು, ಕುಟುಂಬಗಳು ಹಾಗೂ ಲೈಫ್‌ಸ್ಟೈಲ್ ಉತ್ಪನ್ನಗಳ ಖರೀದಿದಾರರಿಗೆ ಒಂದೇ ವೇದಿಕೆಯಲ್ಲಿ ಹಲವು ಆಯ್ಕೆಗಳನ್ನು ಒದಗಿಸುವ ಮೂಲಕ ಯಶಸ್ವಿಯಾಯಿತು.