ಮಹ್ಮದ್ ಪೈಗಂಬರ್‌ರ ಆದರ್ಶ ಪಾಲಿಸಿ: ಮೌಲಾನಾ ಸಾಧಿಕ್

| Published : Sep 20 2024, 01:32 AM IST

ಸಾರಾಂಶ

ಧರ್ಮಗ್ರಂಥ ಪಠಣ ಸೇರಿದಂತೆ ಅನೇಕ ಸಾತ್ವಿಕ ಸಂಗತಿಗಳನ್ನು ಪೈಗಂಬರ್‌ರು ಜಗತ್ತಿಗೆ ಸಾರಿದ್ದು ಆದರ್ಶ ವ್ಯಕ್ತಿಗಳಾಗಿ ಮನುಕುಲದಲ್ಲಿ ಜೀವಿಸಬೇಕು

ಮುದಗಲ್: ಜಾಗತೀಕ ಮಟ್ಟದಲ್ಲಿ ನಾವು ನೀವೆಲ್ಲಾ ಅಲ್ಲಾಹನ ಕೃಪೆಗೆ ಪಾತ್ರರಾಗಬೇಕಾದರೆ ಮಹ್ಮದ್ ಪೈಗಂಬರ್‌ರ ಜೀವನದ ಆದರ್ಶಗಳನ್ನು ಮೈಗೂಡಿಸಿಕೊಂಡು ಸನ್ಮಾರ್ಗದಲ್ಲಿ ಜೀವನ ನಡೆಸಬೇಕೆಂದು ಮುಂಬೈನ ಮೌಲಾನಾ ಸಾಧಿಕ್ ರಾಜ್ವಿ ಸಾಹೇಬ್ ಅಭಿಪ್ರಾಯಪಟ್ಟರು.

ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪಟ್ಟಣದ ಪುರಸಭೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಅಲ್ಲಾಹನ ಇರುವಿಕೆ, ಧರ್ಮಗ್ರಂಥ ಪಠಣ ಸೇರಿದಂತೆ ಅನೇಕ ಸಾತ್ವಿಕ ಸಂಗತಿಗಳನ್ನು ಪೈಗಂಬರ್‌ರು ಜಗತ್ತಿಗೆ ಸಾರಿದ್ದು ಆದರ್ಶ ವ್ಯಕ್ತಿಗಳಾಗಿ ಮನುಕುಲದಲ್ಲಿ ಜೀವಿಸಬೇಕು ಎಂದರು.

ಯಮ್ಮಿಗನೂರಿನ ಮೌಲಾನಾ ಸೈಯದ್ ಶಬ್ಬೀರ್ ಸಾಹೇಬ್, ರಾಯಚೂರಿನ ಮೌಲಾನಾ ಜಾಫರ್ ಸಾಹೇಬ್ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಮುಖಂಡರಾದ ಅಮೀರ್ ಬೇಗ್ ಉಸ್ತಾದ್, ಪುರಸಭೆ ಉಪಾಧ್ಯಕ್ಷ ಅಜಮೀರ್ ಬೆಳ್ಳಕಟ್, ತಮ್ಮಣ್ಣ ಗುತ್ತೇದಾರ, ನ್ಯಾಮತ್ ಖಾದ್ರಿ, ಅಬೀದ್ ಅಲಿ , ಮೌಲಾನಾ ರಫಿಸಾಬ್, ಸೈಯದ್ ಮುನೀರ್ ಹುಸೇನಿ ಸೇರಿದಂತೆ ಇತರರಿದ್ದರು.