ಲೋಕಹಿತ ಕಾಪಾಡಿದ ಮಹಾನ್‌ ದಾರ್ಶನಿಕ ಮುಹ್ಮದ್‌ ಪೈಗಂಬರ

| Published : Sep 17 2024, 12:46 AM IST

ಲೋಕಹಿತ ಕಾಪಾಡಿದ ಮಹಾನ್‌ ದಾರ್ಶನಿಕ ಮುಹ್ಮದ್‌ ಪೈಗಂಬರ
Share this Article
  • FB
  • TW
  • Linkdin
  • Email

ಸಾರಾಂಶ

ಮನುಕುಲದ ಶ್ರೇಯೋಭಿವೃದ್ಧಿಗೆ ಸಾಧು, ಸಂತರ ರೂಪದಲ್ಲಿ ಪರಮಾತ್ಮ ಧರೆಗಿಳಿದು ಧಾರ್ಮಿಕ ಸಂದೇಶಗಳ ಸಾರುವ ಮೂಲಕ ಲೋಕ ಕಲ್ಯಾಣಕ್ಕಾಗಿ ಮಾನವ ಹಿತ ಕಾಪಾಡಿದ ಮಹಾನ್ ದಾರ್ಶನಿಕ ಸಂತರಲ್ಲಿ ಮುಹ್ಮದ್ ಪೈಗಂಬರ ಒಬ್ಬರಾಗಿದ್ದಾರೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ಮನುಕುಲದ ಶ್ರೇಯೋಭಿವೃದ್ಧಿಗೆ ಸಾಧು, ಸಂತರ ರೂಪದಲ್ಲಿ ಪರಮಾತ್ಮ ಧರೆಗಿಳಿದು ಧಾರ್ಮಿಕ ಸಂದೇಶಗಳ ಸಾರುವ ಮೂಲಕ ಲೋಕ ಕಲ್ಯಾಣಕ್ಕಾಗಿ ಮಾನವ ಹಿತ ಕಾಪಾಡಿದ ಮಹಾನ್ ದಾರ್ಶನಿಕ ಸಂತರಲ್ಲಿ ಮುಹ್ಮದ್ ಪೈಗಂಬರ ಒಬ್ಬರಾಗಿದ್ದಾರೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಅಂಜುಮನ್-ಏ-ಇಸ್ಲಾಂ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ಮುಹ್ಮದ ಪೈಗಂಬರ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮುಹ್ಮದ್ ಪೈಗಂಬರ ಅವರು ಕ್ರಿ.ಶ. 570 ಅರಬ್ ಮೆಕ್ಕಾ ನಗರದಲ್ಲಿ ಜನಿಸಿದ್ದು, ತಮ್ಮ 40ನೇ ವಯಸ್ಸಿಗೆ ಪ್ರವಾದಿ ತತ್ವವನ್ನು ಪಡೆದುಕೊಂಡ ಅವರು ದೈವವಾಣಿ ಮೂಲಕ ಮಾನವ ಧರ್ಮ ಸಮಾನವೆಂದು ಸಾರಿದ್ದಾರೆಂದು ಗ್ರಂಥದಲ್ಲಿ ಉಲ್ಲೇಖವಿದೆ ಎಂದರು.

ಕೆಟ್ಟ ಕೆಲಸಗಳಿಂದ ದೂರವಿರಿ: ಮೋಸ ವಂಚನೆ ವ್ಯಭಿಚಾರದಿಂದ ದೂರವಿರುವುದು, ನೆರೆ ಹೊರೆಯವರನ್ನು ಬೆಳಕು ನೆರಳಿನಂತೆ ರಕ್ಷಿಸುವುದು, ಕೋಪ ಗೆದ್ದು ಬಲಶಾಲಿಯಾಗುವುದು, ಮಾನವ ಜನಾಂಗಕ್ಕೆ ಕರುಣೆ ತೋರಿ ಕೃತಜ್ಞರಾಗಿದ್ದಾರೆ, ತನ್ನಲ್ಲಿದ್ದ ಪ್ರಸಾದದಲ್ಲಿ ಹಸಿದವರ ಹಸಿವು ನೀಗಿಸುವುದು, ಇಂತಹ ಮಹಾನ್ ಮಾನವೀಯ ಮೌಲ್ಯಗಳನ್ನು ತುಂಬಿಕೊಂಡಿದ್ದ ಪ್ರವಾದಿ ಮುಹ್ಮದ ಆಡಂಬರದ ಜೀವನವನ್ನು ಎಂದಿಗೂ ನಡೆಸಲಿಲ್ಲ, ಆದರೆ ಬಡವ, ಅನಾಥ ಹಾಗೂ ಹಸಿದವರಿಗೆ ಅನ್ನದಾನ, ರೋಗಿಗಳ ಆರೈಕೆಗೆ ಆದ್ಯತೆಯ ಸೇವಾ ಕ್ಷೇತ್ರಗಳಾಗಿದ್ದವು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಅಂಜು ಮನ್-ಏ-ಇಸ್ಲಾಂ ಅಧ್ಯಕ್ಷ ಮುಕ್ತಿಯಾರ ಅಹ್ಮದ್ ಮುಲ್ಲಾ ಸದಸ್ಯರಾದ ಡಾ.ಎ.ಎಂ. ಸೌದಾಗರ, ನವೀದ ಶಿಡೇನೂರ, ಮಹ್ಮದ್ ಶಫೀ ಮುಲ್ಲಾ, ಮನ್ಸೂರ್‌ಲಿ ಹಕೀಂ, ರಫೀಕ್ ಬೆಳಗಾಂ, ಅಬ್ದುಲ್‌ಸಮ್ಮದ ಬೆಳವಿಗಿ, ಮುಖಂಡರಾದ ದುರ್ಗೇಶ ಗೋಣೆಮ್ಮನರ, ಮುನಾಫ್ ಎರೇಶೀಮಿ, ಅಲ್ಲಹಜ್ ಮಹ್ಮದ ರಫೀಕ, ರಾಜೇಸಾಬ್ ಕಳ್ಯಾಳ, ಬಾಬುಸಾಬ್ ಬಡಿಗೇರ ಸೇರಿದಂತೆ ಸಮಾಜ ಬಾಂಧವರು ಇದ್ದರು.